AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೇದಿಕೆ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೂವಿನಹಾರ ಹಾಕಿದಾಗ ನಿಂಗವ್ವ ಸಿಂಗಾಡಿ ಲೋಕ ಗೆದ್ದಂತೆ ಬೀಗಿದರು!

ವೇದಿಕೆ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೂವಿನಹಾರ ಹಾಕಿದಾಗ ನಿಂಗವ್ವ ಸಿಂಗಾಡಿ ಲೋಕ ಗೆದ್ದಂತೆ ಬೀಗಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 17, 2024 | 7:08 PM

Share

ಸಿದ್ದರಾಮಯ್ಯ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿ ಮಾಡಿದ ದಿನ ಬಸ್ಸಿಗೆ ನಮಸ್ಕರಿಸಿ ಪ್ರಯಾಣಿಸಿದ ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದ ಸಂಖ್ಯೆ 100 ಕೋಟಿ ದಾಟಿದಾಗ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರಿಂದ ಸತ್ಕರಿಸಲ್ಪಟ್ಟಿದ ನಿಂಗವ್ವ ಇವತ್ತು ಸಿದ್ದರಾಮಯ್ಯರನ್ನು ಭೇಟಿಯಾಗಲು ಕೈಯಲ್ಲೊಂದು ಹಾರ ಹಿಡಿದು ಬಂದಿದ್ದರು.

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ಬೆಳಗಾವಿಯ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಅದ್ದೂರಿಯಿಂದ ಆಚರಿಸಿದ ಸಂಗೊಳ್ಳಿ ರಾಯಣ್ಣ ಉತ್ಸವದಲ್ಲಿ (SAngolli Rayanna utsav) ಪಾಲ್ಗೊಂಡರು. ಈ ಸಂದರ್ಭದಲ್ಲಿ ಬೆಳಗಾವಿಯ ನಿಂಗವ್ವ ಸಿಂಗಾಡಿ (Ningavva Singadi) ಸಿದ್ದರಾಮಯ್ಯರನ್ನು ಭೇಟಿಯಾಗಲು ಬಂದಿದ್ದರು. ನಿಂಗವ್ವ ಯಾರು ಅಂತ ನಿಮಗೆ ಚೆನ್ನಾಗಿ ಗೊತ್ತಿದೆ. ಅವರ ಬಗ್ಗೆ ನಾವು 2-3 ಸಲ ಬಗ್ಗೆ ಸುದ್ದಿ ಮಾಡಿದ್ದೇವೆ. ಸಿದ್ದರಾಮಯ್ಯ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿ ಮಾಡಿದ ದಿನ ಬಸ್ಸಿಗೆ ನಮಸ್ಕರಿಸಿ ಪ್ರಯಾಣಿಸಿದ ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದ ಸಂಖ್ಯೆ 100 ಕೋಟಿ ದಾಟಿದಾಗ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರಿಂದ ಸತ್ಕರಿಸಲ್ಪಟ್ಟಿದ ನಿಂಗವ್ವ ಇವತ್ತು ಸಿದ್ದರಾಮಯ್ಯರನ್ನು ಭೇಟಿಯಾಗಲು ಕೈಯಲ್ಲೊಂದು ಹಾರ ಹಿಡಿದು ಬಂದಿದ್ದರು. ವೇದಿಕೆ ಹತ್ತಿದ ಬಳಿಕ ನಿಂಗವ್ವ ಮುಖ್ಯಮಂತ್ರಿಯವರ ಕಾಲಿಗೆ ನಮಸ್ಕರಿಸಿದರು. ನಂತರ ಹಾರ ಹಾಕಲು ಮುಂದಾದಾಗ ಸಿದ್ದರಾಮಯ್ಯ ಅದನ್ನು ಕೈಯಲ್ಲಿ ತೆಗೆದದುಕೊಂಡು ನಿಂಗವ್ವನ ಕೊರಳಿಗೆ ಹಾಕಿಬಿಟ್ಟರು! ನಾಡಿನ ಮುಖ್ಯಮಂತ್ರಿ ತನಗೆ ಹಾರ ಹಾಕಿದ್ದನ್ನು ನಿಂಗವ್ವ ತನ್ನ ಪಕ್ಕದಲ್ಲಿದ್ದ ಮಹಿಳೆಗೆ ಸಂತಸ, ಅಭಿಮಾನ ಮತ್ತು ಹೆಮ್ಮೆಯಿಂದ ಬೀಗುತ್ತಾ ಹೇಳುವುದನ್ನು ದೃಶ್ಯಗಳಲ್ಲಿ ನೋಡಬಹುದು!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ