ಬೆಳಗಾವಿ: ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ (Santosh) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳಿಂದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಗುತ್ತಿಗೆದಾರ ಸಂತೋಷ್ ಪಾಟೀಲ್ ಪತ್ನಿ ಜಯಶ್ರೀ ವಿಚಾರಣೆ ಮಾಡಿದ್ದಾರೆ. ಪಿನ್ ಟು ಪಿನ್ ಮಾಹಿತಿ ಪಡೆಯುತ್ತಿರುವ ಅಧಿಕಾರಿಗಳು, ಸಂತೋಷ್ ಪಾಟೀಲ್ ಎಷ್ಟು ಮೊಬೈಲ್ ಬಳಕೆ ಮಾಡುತ್ತಿದ್ದರು. ಲಾಕ್ಡೌನ್ ವೇಳೆ ಸಂತೋಷ್ ಎಲ್ಲಿದ್ದ, ಏನು ಮಾಡುತ್ತಿದ್ದರು ಎಂದು ಸಂತೋಷ್ ಪತ್ನಿಯಿಂದ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ಹಿಂಡಲಗಾ ಗ್ರಾಮದಲ್ಲಿ ಕಾಮಗಾರಿ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದು, ನಾಗೇಶ್ ಹೇಗೆ ಪರಿಚಯ? ಅವರು ನಿಮ್ಮ ಮನೆಗೆ ಬಂದಿದ್ರಾ? ಯಾವಾಗ, ಯಾರ ಜೊತೆಗೆ ಸಂತೋಷ್ ದೆಹಲಿಗೆ ಹೋಗಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಒತ್ತಡ ಸಂತೋಷ್ಗೆ ಇತ್ತಾ? ಗುತ್ತಿಗೆದಾರರಿಗೆ ತಡವಾಗಿ ಬಿಲ್ ಬರುವುದು ಸಹಜ. ಬಿಲ್ ಬರದಿದ್ರೆ ಏನೂ ಮಾಡುವುದಾಗಿ ಸಂತೋಷ್ ಹೇಳುತ್ತಿದ್ದರು. ಹಣ ಹೇಗೆಲ್ಲಾ ಹೊಂದಿಸುತ್ತಿದ್ದರು. ಹೀಗೆ ಪ್ರತಿಯೊಂದರ ಮಾಹಿತಿ ಪಡೆಯುತ್ತಿರುವ ಪೊಲೀಸರು, ಕೊನೆಯದಾಗಿ ಸಂತೋಷ್ ಕಾಲ್ ಮಾಡಿದ್ದು ಯಾವಾಗ ಎಂದು ಹೀಗೆ ಎಲ್ಲಾ ಮಾಹಿತಿಯನ್ನು ಪೊಲೀಸರು ಪಡೆಯುತ್ತಿದ್ದಾರೆ.
ಸಂತೋಷ ಪಾಟೀಲ್ ಯಾವ ಪಕ್ಷದಲ್ಲಿದ್ದ ಅನ್ನೋದನ್ನೂ ಕೂಡ ಮಾಹಿತಿ ಪಡೆಯುತ್ತಿರುವ ಪೊಲೀಸರು, 2018ರಲ್ಲಿ ಜಿಲ್ಲಾ ಪಂಚಾಯಿತಿಗೆ ಟಿಕೆಟ್ ಕೇಳಿದ್ದರು. ಟಿಕೆಟ್ ಸಿಗದಿದ್ದಾಗ ಬಂಡಾಯ ಅಭ್ಯರ್ಥಿ ಅಂತಾ ಸಂತೋಷ ನಾಮಪತ್ರ ಸಲ್ಲಿಕೆ ಮಾಡಿ ವಾಪಾಸ್ ಪಡೆದರು. ಕಾಂಗ್ರೆಸ್ ಅಭ್ಯರ್ಥಿ ಶಂಕರ್ ಪಾಟೀಲ್ ಎಂಬುವವರ ಪರ ಪ್ರಚಾರ ಮಾಡಿದ್ದರು. ಇದಾದ ಆರೇ ತಿಂಗಳಿಗೆ ಸಂತೋಷ ಮತ್ತೆ ಬಿಜೆಪಿ ಸೇರ್ಪಡೆಯಾಗಿದ್ದರು ಎಂದು ಸಂತೋಷ ಪಾಟೀಲ್ ದೊಡ್ಡಪ್ಪನ ಮಗ ಪ್ರಶಾಂತ್ರಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಎಲ್ಲ ಹೇಳಿಕೆಯನ್ನು ಉಡುಪಿ ಇನ್ಸ್‌ಪೆಕ್ಟರ್ ಶರಣಗೌಡ ನೇತೃತ್ವದ ತಂಡ ದಾಖಲಿಸಿಕೊಂಡಿದೆ. ಬೆಳಗಾವಿ ತಾಲೂಕಿನ ಬಡಸ ಗ್ರಾಮದಲ್ಲಿರುವ ಸಂತೋಷ ನಿವಾಸದಲ್ಲಿ ಸಂತೋಷ ತಾಯಿ ಪಾರ್ವತಿಯಿಂದ ಕೂಡ ಪೊಲೀಸರು ಮಾಹಿತಿ ಪಡೆದುಕೊಂಡಿದ್ದಾರೆ. ಮಗನ ಬಗ್ಗೆ ಹೇಳುತ್ತಲೇ ಪೊಲೀಸರ ಮುಂದೆ ಸಂತೋಷ ತಾಯಿ ಪಾರ್ವತಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ದೆಹಲಿಗೆ ಹೋಗಿ ಬಂದ ಬಳಿಕ ಮಗ ಭೇಟಿಯಾಗಿರಲಿಲ್ಲ. ಬರೀ ಪೋನ್ನಲ್ಲಿ ಮಾತನಾಡುತ್ತಿದ್ದ. ನಾನು ಬೆಂಗಳೂರಿನಲ್ಲಿದೆ. ಕೆಲಸದ ವಿಚಾರ ಮಗ ಜಾಸ್ತಿ ನನ್ನ ಹತ್ರಾ ಹೇಳುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಏಪ್ರಿಲ್ 12 ಮಧ್ಯಾಹ್ನದ ವೇಳೆ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಕೆ ಪಾಟೀಲ್ ಉಡುಪಿಯ ಖಾಸಗಿ ಲಾಡ್ಜ್ ಒಂದರಲ್ಲಿ ಮೃತಪಟ್ಟಿದ್ದಾರೆ. ಜೊತೆಗೆ, ತನ್ನ ಸಾವಿಗೆ ಸಚಿವ ಕೆಎಸ್ ಈಶ್ವರಪ್ಪ ಅವರೇ ಕಾರಣ, ಎಲ್ಲಾ ಆಸೆಗಳನ್ನು ಬದಿಗೊತ್ತಿ ತಾನು ಇಂತಹ ನಿರ್ಧಾರ ಕೈಗೊಂಡಿರುವ ಬಗ್ಗೆ ನೀಡಿರುವ ವಾಟ್ಸಾಪ್ ಸಂದೇಶ ಕೂಡ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆಎಸ್ ಈಶ್ವರಪ್ಪ ನಿನ್ನೆ ರಾಜೀನಾಮೆಯನ್ನು ನೀಡಿದ್ದಾರೆ.
ಇದನ್ನೂ ಓದಿ:
Health Tips: ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದೀರಾ?; ಈ 6 ಜ್ಯೂಸ್ಗಳನ್ನು ಬಳಸಿ ನೋಡಿ