ಬೆಳಗಾವಿ: ಕರಾಳ ದಿನ ಆಚರಣೆಗೆ ಅನುಮತಿ ಇಲ್ಲ, ಎಂಇಎಸ್​ಗೆ ಡಿಸಿ ಖಡಕ್​ ಎಚ್ಚರಿಕೆ

ನವೆಂಬರ್​ 1 ಕರ್ನಾಟಕ ರಾಜ್ಯೋತ್ಸವ ದಿನ ಕರಾಳ ದಿನ ಆಚರಿಸಲು ಎಂಇಎಸ್​ಗೆ ಅನುಮತಿ ನೀಡುವುದಿಲ್ಲ. ಒಂದು ವೇಳೆ ಆಚರಿಸಲು ಮುಂದಾದರೆ ಎಂಇಎಸ್​ ಪುಂಡರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದಾರೆ.

Follow us
| Updated By: ವಿವೇಕ ಬಿರಾದಾರ

Updated on:Oct 09, 2024 | 10:27 AM

ಬೆಳಗಾವಿ, ಅಕ್ಟೋಬರ್​​ 09: ಕರ್ನಾಟಕ ರಾಜ್ಯೋತ್ಸವ ದಿನ (ನವೆಂಬರ್​ 1) ಕರಾಳ ದಿನ ಆಚರಿಸಲು ಅನುಮತಿ ಕೋರಿ ಮಹರಾಷ್ಟ್ರ ಏಕೀಕರಣ ಸಮಿತಿ (MES​) ಮುಖಂಡರಿಗೆ ಅನುಮತಿ ನೀಡುವುದಿಲ್ಲ ಎಂದು ಬೆಳಗಾವಿ (Belagavi) ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದಾರೆ.

ರಾಜ್ಯೋತ್ಸವ ಹಿನ್ನೆಲೆ ಕನ್ನಡ ಪರ ಸಂಘಟನೆಗಳ ಜತೆ ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​ ಮಂಗಳವಾರ ಪೂರ್ವಭಾವಿ ಸಭೆ ನಡೆಸಿದರು. ಸಭೆಯಲ್ಲಿ ಎಂಇಎಸ್​ ಪುಂಡರು ಕರಾಳ ದಿನ ಆಚರಿಸುವ ವಿಚಾರವೂ ಪ್ರಸ್ತಾಪವಾಯಿತು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​, ಬೆಳಗಾವಿಯಲ್ಲಿ ಕರಾಳ‌ ದಿನ ಆಚರಣೆಗೆ ಅವಕಾಶ ಕೊಡುವುದಿಲ್ಲ. ಕರಾಳ‌ ದಿನ ಆಚರಣೆಗೆ ಮುಂದಾದರೆ ಪೊಲೀಸರು ಪ್ರಕರಣ ದಾಖಲಿಸುತ್ತಾರೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ “ಕೈ”ಗೆ ಎಂಇಎಸ್​ ಸಾಥ್​​; ಬಿಜೆಪಿ ಕಾರ್ಪೊರೇಟರ್​​​ಗೆ ಜೀವ ಬೆದರಿಕೆ

ಬೆಳಗಾವಿ ಜಿಲ್ಲಾಡಳಿತದ ದಿಟ್ಟತನಕ್ಕೆ ಕನ್ನಡ ಹೋರಾಟಗಾರರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಈ ಬಾರಿ ದೀಪಾವಳಿ ಹಬ್ಬ ಮತ್ತು ಕನ್ನಡ ರಾಜ್ಯೋತ್ಸವ ಒಟ್ಟಿಗೆ ಬಂದಿದ್ದರಿಂದ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸಲು ತೀರ್ಮಾನ ಕೈಗೊಳ್ಳಲಾಗಿದೆ.

1956ರಲ್ಲಿ ರಾಜ್ಯಗಳ ಪುನರ್​ ವಿಂಗಡಣೆ ಆದ ಬಳಿಕ ರಾಜ್ಯದ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸಬೇಕೆಂದು ಒತ್ತಾಯಿಸಲು ಎಂಇಎಸ್​ ಹುಟ್ಟಿಕೊಂಡಿತು. ಕರ್ನಾಟಕ ರಾಜ್ಯ ಉದಯವಾದ ದಿನದಂದೇ ಕರಾಳ ದಿನ ಆಚರಿಸುತ್ತ ಬರಲಾಗಿದೆ. ದಶಕಗಳ ಹಿಂದೆ ಬೃಹತ್​ ಪ್ರಮಾಣದ ರ್ಯಾಲಿ ನಡೆಯುತ್ತಿತ್ತು. ಆದರೆ, ಈಗ ಒಂದು ಜಾಗಕ್ಕೆ ಮಾತ್ರ ಸೀಮಿತಗೊಂಡು ಆಚರಿಸುತ್ತ ಬಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:18 am, Wed, 9 October 24

‘ಯಾವ ಸೀಮೆಯ ಕ್ಯಾಪ್ಟನ್ ನೀವು?’; ಹಂಸಾ ವಿರುದ್ಧ ಸಿಡಿದೆದ್ದ ಚೈತ್ರಾ
‘ಯಾವ ಸೀಮೆಯ ಕ್ಯಾಪ್ಟನ್ ನೀವು?’; ಹಂಸಾ ವಿರುದ್ಧ ಸಿಡಿದೆದ್ದ ಚೈತ್ರಾ
ನವರಾತ್ರಿಯ 7ನೇ ದಿನ ಕಾಲರಾತ್ರಿ ದೇವಿ ಆರಾಧನೆಯ ಮಹತ್ವ ತಿಳಿಯಿರಿ
ನವರಾತ್ರಿಯ 7ನೇ ದಿನ ಕಾಲರಾತ್ರಿ ದೇವಿ ಆರಾಧನೆಯ ಮಹತ್ವ ತಿಳಿಯಿರಿ
ನವರಾತ್ರಿ 7ನೇ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ನವರಾತ್ರಿ 7ನೇ ದಿನದ ರಾಶಿ ಭವಿಷ್ಯ, ಗ್ರಹಗಳ ಸಂಚಾರ ತಿಳಿಯಿರಿ
ಅರಮನೆ ಮುಂದೆ ಕಣ್ಮನ ಸೆಳೆದ ಪೊಲೀಸ್ ಬ್ಯಾಂಡ್ ವೀಕ್ಷಿಸಿದ ರಾಜವಂಶಸ್ಥರು
ಅರಮನೆ ಮುಂದೆ ಕಣ್ಮನ ಸೆಳೆದ ಪೊಲೀಸ್ ಬ್ಯಾಂಡ್ ವೀಕ್ಷಿಸಿದ ರಾಜವಂಶಸ್ಥರು
ಸುಪ್ರೀಂ ಕೋರ್ಟ್ ಒಳಗೆ ನುಗ್ಗಿ ವಕೀಲರ ಬ್ಯಾಗ್, ಊಟದ ಬಾಕ್ಸ್ ಕದ್ದ ಕೋತಿ
ಸುಪ್ರೀಂ ಕೋರ್ಟ್ ಒಳಗೆ ನುಗ್ಗಿ ವಕೀಲರ ಬ್ಯಾಗ್, ಊಟದ ಬಾಕ್ಸ್ ಕದ್ದ ಕೋತಿ
PM Modi Speech Live: ಹರಿಯಾಣ ಗೆದ್ದ ಖುಷಿಯಲ್ಲಿ ಮೋದಿ ಮಾತು
PM Modi Speech Live: ಹರಿಯಾಣ ಗೆದ್ದ ಖುಷಿಯಲ್ಲಿ ಮೋದಿ ಮಾತು
ರಸ್ತೆಬದಿ ಕುಳಿತಿದ್ದ 3 ಮಕ್ಕಳನ್ನು ಎಳೆದೊಯ್ದ ಕಾರು; ವಿಡಿಯೋ ವೈರಲ್
ರಸ್ತೆಬದಿ ಕುಳಿತಿದ್ದ 3 ಮಕ್ಕಳನ್ನು ಎಳೆದೊಯ್ದ ಕಾರು; ವಿಡಿಯೋ ವೈರಲ್
ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!