ಬೆಳಗಾವಿ: ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ ಹಿನ್ನೆಲೆ ನಾಳೆಯೂ ಬೆಳಗಾವಿ ನಗರ, ಗ್ರಾಮಾಂತರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಬೆಳಗಾವಿಯ 22 ಸರ್ಕಾರಿ, ಖಾಸಗಿ ಶಾಲೆಗೆ ರಜೆ ಘೋಷಣೆ ಮಾಡಲಾಗಿದ್ದು ಆನ್‌ಲೈನ್‌ನಲ್ಲಿ ತರಗತಿ ನಡೆಸುವಂತೆ ಶಾಲಾ ಆಡಳಿತ ಮಂಡಳಿಗೆ ಡಿಸಿ ನಿತೇಶ್ ಪಾಟೀಲ್ ಸೂಚನೆ ನೀಡಿದ್ದಾರೆ.
ಇಂದು ಕೂಡ ಚಿರತೆ ಸಿಗದ ಹಿನ್ನೆಲೆ ನಗರ ವಲಯದ 13, ಗ್ರಾಮೀಣ ವಲಯದ 9 ಶಾಲೆಗಳು ಸೇರಿದಂತೆ ನಗರದ 22 ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಆದ್ರೆ ಆನ್ ಲೈನ್ ಕ್ಲಾಸ್ ನಡೆಸುವಂತೆ ಡಿಸಿ ಸೂಚನೆ ನೀಡಿದ್ದಾರೆ. ನಾಳೆ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರ ಸಹಯೋಗದಲ್ಲಿ ಚಿರತೆ ಕಾರ್ಯಾಚರಣೆ ನಡೆಯಲಿದೆ.
18 ದಿನದಿಂದ ಕಾಡ್ತಿದ್ದ ಚಿರತೆ ಹಿಡಿಯಲು ಆಪರೇಷನ್
ಬೆಳಗ್ಗೆ 6.30ರ ಸುಮಾರಿಗೆ ಬೆಳಗಾವಿ ಹಿಂಡಲಗಾ ಗ್ರಾಮದ ಕ್ಯಾಂಪ್ ಪ್ರದೇಶದ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಇದನ್ನ ನೋಡಿದ್ದ ಖಾಸಗಿ ಬಸ್ ಚಾಲಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಡಿಸಿ ನಿತೇಶ್ ಪಾಟೀಲ್ ನಗರ ಹಾಗೂ ಗ್ರಾಮೀಣ ಭಾಗದ 22ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದ್ರು. ಇತ್ತ ಚಿರತೆ ಹಿಡ್ಯೋಕೆ ಅರಣ್ಯ ಇಲಾಖೆಯ 20 ಸಿಬ್ಬಂದಿ ಫೀಲ್ಡಿಗಿಳಿದಿದ್ರು. ಆದ್ರೆ ಸರಿಯಾದ ಪ್ಲ್ಯಾನ್ ಮಾಡದ ಕಾರಣ ಅಧಿಕಾರಿಗಳ ಕಣ್ಮುಂದೆಯೇ ಗಾಲ್ಫ್ ಮೈದಾನದತ್ತ ಎಸ್ಕೇಪ್ ಆಗಿತ್ತು. ಸ್ಥಳಕ್ಕೆ ಬಂದ ಶಾಸಕ ಅನಿಲ್ ಬೆನಕೆ ಸಿಬ್ಬಂದಿ ಬೇಜವಾಬ್ದಾರಿಗೆ ಅಸಮಧಾನ ಹೊರ ಹಾಕಿದ್ರು.
ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು 2 ಗಂಟೆಗಳು ಹುಡುಕಾಡಿದ್ರೂ 200 ಎಕರೆ ಅರಣ್ಯ ಪ್ರದೇಶದಲ್ಲಿ ಚಿರತೆ ಪತ್ತೆಯಾಗಿಲ್ಲ. ಕೊನೆಗೆ ಹುಕ್ಕೇರಿಯಿಂದ ಹಂದಿ ಹಿಡಿಯುವ ಕೆಲ ಯುವಕರ ಜತೆಗೆ 20 ನಾಯಿಗಳನ್ನ ಕರೆಸಿ ಮತ್ತೆ ಆಪರೇಷನ್ ಶುರು ಮಾಡಿದ್ರು. ಡ್ರೋನ್ ಹಾರಿಸಿದ್ರೂ ಚಿರತೆಯ ಸುಳಿವೇ ಸಿಗ್ಲಿಲ್ಲ. ಅರಣ್ಯ ಇಲಾಖೆ ಸಚಿವ ಉಮೇಶ್ ಕತ್ತಿ ಡಿಸಿ, ಎಸ್‌ಪಿ ಸೇರಿದಂತೆ ಕೆಲ ಸಿಬ್ಬಂದಿ ಜತೆ ಸಭೆ ಮಾಡಿ ಕಾರ್ಯಾಚರಣೆ ಕುರಿತು ಮಾಹಿತಿ ಪಡೆದ್ರು. ಸದ್ಯ ನಾಳೆ ಬೆಳಗ್ಗೆ ಇಬ್ಬರು ಶೂಟರ್ಸ್, 120ಅರಣ್ಯ ಇಲಾಖೆ ಸಿಬ್ಬಂದಿ, 80ಪೊಲೀಸ್ ಸಿಬ್ಬಂದಿಯನ್ನ ಬೇಟೆಗಿಳಿಸೋ ಪ್ಲ್ಯಾನ್ ಮಾಡಿದ್ದಾರೆ. ಹಾಗೇ ಸಕ್ರೇಬೈಲ್ನಿಂದ ಸಾಕಾನೆಗಳನ್ನ ಕರೆಸೋಕೂ ತಯಾರಿ ನಡೆದಿದೆ. ಚಿರತೆ ಸಿಗದಿದ್ದಕ್ಕೆ ನಾಳೆಯೂ ಬೆಳಗಾವಿ ನಗರದ 22ಶಾಲೆಗಳಿಗೆ ರಜೆ ಮುಂದುವರಿಯಲಿದೆ.