ಬೆಳಗಾವಿ: ಒಬಿಸಿಗಾಗಿ ಹಕ್ಕೊತ್ತಾಯ: ಸ್ವಾಮೀಜಿಗಳಿಂದ ಸರ್ಕಾರಕ್ಕೆ ಲಾಸ್ಟ್ ವಾರ್ನ್
ಒಂದು ಕಂಡೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟದ ನಡುವೆ ಇದೀಗ ವೀರಶೈವ ಲಿಂಗಾಯತ ಹಾಗೂ ಅದರ ಒಳಪಂಗಡಗಳನ್ನ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕು ಅನ್ನೋ ಕೂಡ ಜೋರ ಮಟ್ಟದಲ್ಲಿ ಕೇಳಿ ಬರ್ತಿದೆ. ನಿನ್ನೆ ವೀರಶೈವ ಲಿಂಗಾಯತ ಸಮುದಾಯದ ಸ್ವಾಮೀಜಿಗಳು ಒಟ್ಟಾಗಿ ಒಬಿಸಿ ಪಟ್ಟಿಗೆ ಸೇರಿಸಲೇಬೇಕು ಎಂದು ಆಗ್ರಹಿಸಿ ಇಂದು ಬೆಳಗಾವಿಯಲ್ಲಿ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದ್ದಾರೆ.
ಬೆಳಗಾವಿ, ಅಕ್ಟೋಬರ್ 09: ಇನ್ನೇನು ಲೋಕಸಭೆ ಚುನಾವಣೆ (Lok Sabha Elections) ಸನಿಹದಲ್ಲಿಯೇ ಇದೆ. ಈಗಾಗಲೇ ಹಲವು ಸಮುದಾಯಗಳು ಜಾತಿ ನೆಲೆಗಟ್ಟಿನ ಆಧಾರದಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿವೆ. ಅದರಲ್ಲೂ ಮೊನ್ನೆಯಷ್ಟೆ ಬೆಳಗಾವಿಯಲ್ಲಿ ಕುರುಬರು ಶಕ್ತಿ ಪ್ರದರ್ಶನ ಮಾಡಿದ್ದರು. ಈಗ ವೀರಶೈವ ಲಿಂಗಾಯತರೂ ಸಹ ವೀರಭದ್ರ ಜಯಂತಿ ನಿಮಿತ್ಯವಾಗಿ ಒಗ್ಗೂಡಿ ಒಕ್ಕಟ್ಟಿನ ಮಂತ್ರ ಸಾರುವುದಲ್ಲದೇ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದ್ದಾರೆ. ಮೀಸಲಾತಿ ಲಡಾಯಿ ಮಧ್ಯೆ ವೀರಶೈವ ಲಿಂಗಾಯತ ಅದ್ಯಾವ ಹಕ್ಕೊತ್ತಾಯ ಮಾಡಿತು ಎಂಬುದನ್ನು ತಿಳಿಯಲು ಮುಂದೆ ಓದಿ.
ಒಂದು ಕಂಡೆ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟದ ನಡುವೆ ಇದೀಗ ವೀರಶೈವ ಲಿಂಗಾಯತ ಹಾಗೂ ಅದರ ಒಳಪಂಗಡಗಳನ್ನ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕು ಅನ್ನೋ ಕೂಡ ಜೋರ ಮಟ್ಟದಲ್ಲಿ ಕೇಳಿ ಬರ್ತಿದೆ. ನಿನ್ನೆ ವೀರಶೈವ ಲಿಂಗಾಯತ ಸಮುದಾಯದ ಸ್ವಾಮೀಜಿಗಳು ಒಟ್ಟಾಗಿ ಒಬಿಸಿ ಪಟ್ಟಿಗೆ ಸೇರಿಸಲೇಬೇಕು ಎಂದು ಆಗ್ರಹಿಸಿ ಇಂದು ಬೆಳಗಾವಿಯಲ್ಲಿ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಕೊರತೆ: ಕೇಂದ್ರದತ್ತ ಬೊಟ್ಟು ಮಾಡಿದ ಸಚಿವ ಸತೀಶ್ ಜಾರಕಿಹೊಳಿ
ವೀರಭದ್ರೇಶ್ವರ ಜಯಂತಿಯ ನಿಮಿತ್ಯವಾಗಿ ಒಗ್ಗೂಡಿದ ವೀರಶೈವ ಲಿಂಗಾಯತ ಸ್ವಾಮೀಜಿಗಳು ರಾಜ್ಯ ಸರ್ಕಾರಕ್ಕೆ ಕೇಂದ್ರದ ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಒಳಪಂಗಡಗಳನ್ನ ಸೇರಿಸಬೇಕು ಎಂದು ಆಗ್ರಹಿಸಿದರು. ಸಮಾರಂಭದಲ್ಲಿ ದಿಂಗಾಲೇಶ್ವರ ಶ್ರೀಗಳು, ಶ್ರೀಶೈಲ ಜಗದ್ಗುರು ಡಾ, ಚನ್ನಸಿದ್ದರಾಮ ಪಂಡೀತಾರಾಧ್ಯ ಸ್ವಾಮೀಜಿ, ಹಾಗೂ ವೀರಭದ್ರೇಶ್ವರ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡಿದ್ದರು. ಇದೇ ವೇಳೆ ಮಾತನಾಡಿದ ದಿಂಗಾಲೇಶ್ವರ ಶ್ರೀಗಳು ವೀರಶೈವ ಲಿಂಗಾಯತ ಉಪಪಂಗಡಳನ್ನು ಕೇಂದ್ರದ ಒಬಿಸಿಗೆ ಸೇರಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಒಂದು ಕಡೆ ಜಾಗತಿಕ ಲಿಂಗಾಯತ ಮಹಾಸಭಾ ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ಹಲವು ವರ್ಷಗಳಿಂದ ಹೋರಾಟನ ನಡೆಸುತ್ತಿದೆ. ಇತ್ತ ಪಂಚಮಸಾಲಿ ಲಿಂಗಾಯತ ಸಮಾಜದಿಂದ ಮೀಸಲಾತಿಗೆ ಹೋರಾಟ ನಡೆದಿದೆ. ಈಗ ವೀರಶೈವ ಲಿಂಗಾಯತ ವೇದಿಕೆಯೂ ಸಹ ಲಿಂಗಾಯತ ಒಳಪಂಡಗಳಿಗೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಹಕ್ಕೊತ್ತಾಯ ಮಾಡುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಿಂದಲೂ ಸಹ ಹೋರಾಟಗಳು ನಡೆಯುತ್ತ ಬಂದಿದ್ದರೂ ಸಹ ಈವರೆಗೆ ಲಿಂಗಾಯತ ಸಮುದಾಯದ ಕೂಗಿಗೆ ನ್ಯಾಯ ಸಿಕ್ಕಿಲ್ಲ ಎನ್ನುವ ಅಸಮಾಧಾನ ಸಮಾಜದಲ್ಲಿದೆ. ಹೀಗಾಗಿ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡುತ್ತೇವೆ. ಸರ್ಕಾರ ಕೇಂದ್ರದ ಬಿಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಹಾಗೂ ಒಳಪಂಗಡಗಳನ್ನು ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಶ್ರೀಶೈಲ ಜಗದ್ಗುರುಗಳು ಹೇಳಿದರು.
ಇದನ್ನೂ ಓದಿ: ಬೆಂಗಳೂರು, ಬೆಳಗಾವಿ ಕೇಂದ್ರ ಕಾರಾಗೃಹವನ್ನ ಬ್ಲಾಸ್ಟ್ ಮಾಡುತ್ತೇವೆ ಎಂದು ಡಿಐಜಿಪಿಗೆ ಬೆದರಿಕೆ ಕರೆ
ಇದೇ ವೇಳೆ ಸರ್ಕಾರದಲ್ಲಿ ಲಿಂಗಾಯತ ಅಧಿಕಾರಿಗಳನ್ನ ಮೂಲಗುಂಪು ಮಾಡಲಾಗುತ್ತಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಜಗದ್ಗುರು ಶಾಮನೂರು ಶಿವಶಂಕರಪ್ಪ ಹೇಳಿಕೆ ಸರ್ಮರ್ಥಿಸಿಕೊಂಡಿದ್ದಾರೆ. ಯಾವ ಮಟ್ಟಿಗೆ ಸಮಾಜದ ಅಧಿಕಾರಿಗಳಿಗೆ ಉನ್ನತ ಸ್ಥಾನಮಾನ ಸಿಗಬೇಕಿತ್ತು ಆ ಮಟ್ಟದಲ್ಲಿ ಸಿಗ್ತಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ವೀರಶೈವ ಅಧಿಕಾರಿಗಳನ್ನ ಪರಿಗಣಿಸಬೇಕು, ಸರ್ಕಾರದ ಇದನ್ನ ತಿಳಿದುಕೊಳ್ಳಲಿ. ಆದಷ್ಟೂ ಬೇಗ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ಒಬಿಸಿಗೆ ಸೇರಿಸಲು ಮನವಿ ಮಾಡುತ್ತೇವೆ. ಒಂದು ವೇಳೆ ಮಾಡದಿದ್ರೇ ದಾವಣಗೆರಿಯಲ್ಲಿ ನಡೆಯುವ ಮಹಾಸಭಾ ಸಮಾವೇಶದಲ್ಲಿ ಬೆಂಗಳೂರಿನಲ್ಲಿ ಯಾವ ರೀತಿ ಹೋರಾಟ ಮಾಡಲಾಗುವುದು ಮತ್ತು ಯಾವ ದಿನಾಂಕಕ್ಕೆ ಹೋರಾಟ ಮಾಡುತ್ತೇವೆ ಅಂತಾ ದಿನಾಂಕ ಘೋಷಣೆ ಮಾಡುವುದಾಗಿ ಹೇಳಿದ್ದಾರೆ…
ವೀರಶೈವ ಲಿಂಗಾಯತ ಹಾಗೂ ಒಳಪಂಗಡಗಳನ್ನ ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಹಕ್ಕೊತ್ತಾಯ ಹೋರಾಟಗಳು ನಡೆಯುತ್ತಲೇ ಬಂದಿದ್ದರೂ ಸಹ ಈವರೆಗೂ ಸರ್ಕಾರಗಳಿಂದ ದಿಟ್ಟ ಕ್ರಮವಾಗಿಲ್ಲ ಎನ್ನುವುದು ಬಹಸಂಖ್ಯಾತ ಲಿಂಗಾಯತರ ಕೂಗು ಹೀಗಾಗಿ ಸರ್ಕಾರ ಈ ಕುರಿತು ಯಾವ ಕ್ರಮಕ್ಕೆ ಮುಂದಾಗುತ್ತೆ. ಸರ್ಕಾರ ನಿರ್ಲಕ್ಷ್ಯ ಮಾಡಿದ್ರೇ ಇತ್ತ ಸಮುದಾಯದಿಂದ ಹೋರಾಟಕ್ಕೂ ಕೂಡ ವೇದಿಕೆ ಸಜ್ಜಾಗುತ್ತಿದ್ದು ಇದನ್ನ ಸರ್ಕಾರ ಹೇಗೆ ತೆಗೆದುಕೊಳ್ಳುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.