AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Belagavi Lok sabha bypoll 2021: ಬೆಳಗಾವಿ ಉಪಚುನಾವಣೆ ಪ್ರಚಾರದ ಮಧ್ಯೆ ಕಾಂಗ್ರೆಸ್​ ಭಿನ್ನಮತ ಬಹಿರಂಗ

ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳುತ್ತಿರುವಾಗಲೇ ಕರ್ನಾಟಕ ಕಾಂಗ್ರೆಸ್​ನ ಹಿರಿಯ ನಾಯಕರ ಮಧ್ಯೆ ಬೆಳಗಾವಿ ಲೋಕಸಭಾ ಉಪಚುನಾವಣೆಯ ರಣನೀತಿಯ ವಿಚಾರದಲ್ಲಿ ಭಿನ್ನಾಭಿಪ್ರಾಯ ಮತ್ತು ಭಿನ್ನ ಮತ ಇರುವುದು ಈಗ ಬೆಳಕಿಗೆ ಬಂದಿದೆ.

Belagavi Lok sabha bypoll 2021: ಬೆಳಗಾವಿ ಉಪಚುನಾವಣೆ ಪ್ರಚಾರದ ಮಧ್ಯೆ ಕಾಂಗ್ರೆಸ್​ ಭಿನ್ನಮತ ಬಹಿರಂಗ
ಜಿ.ಪರಮೇಶ್ವರ್​, ಡಿ.ಕೆ.ಶಿವಕುಮಾರ್​, ಸಿದ್ದರಾಮಯ್ಯ
Follow us
ಡಾ. ಭಾಸ್ಕರ ಹೆಗಡೆ
| Updated By: Skanda

Updated on: Apr 10, 2021 | 2:29 PM

ಬೆಳಗಾವಿ ಲೋಕಸಭಾ ಉಪಚುನಾವಣೆಯ ಮತದಾನಕ್ಕೆ ಇನ್ನು ಬರೀ ಏಳು ದಿನ ಬಾಕಿ ಇದೆ. ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಹಣಾಹಣಿ ಹೋರಾಟ ನಡೆಯುವುದು ಖಡಾಖಂಡಿತವಾಗಿದೆ. ಎರಡೂ ಪಕ್ಷಗಳು ಜಾತಿ ಆಧಾರಿತ ಚುನಾವಣಾ ರಣನೀತಿ ಮಾಡುತ್ತಿರುವ ಮಧ್ಯೆ, ಕಾಂಗ್ರೆಸ್ಸಿನ ಇಬ್ಬರು ಹಿರಿಯ ನಾಯಕರ ನಡುವೆ ದಲಿತ ಸಮುದಾಯಕ್ಕೆ ಸೀಮಿತವಾಗಿ ನಿರೂಪಿಸುವ ಚುನಾವಣಾ ರಣನೀತಿ ಕುರಿತಾಗಿ ಭಿನಾಭಿಪ್ರಾಯ ಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಹಿನ್ನೆಲೆ ಏನು? ಬೆಳಗಾವಿ ಲೋಕಸಭಾ ಕ್ಷೇತ್ರ 18 ಲಕ್ಷ ಮತದಾರರನ್ನು ಹೊಂದಿರುವ ಬಹಳ ದೊಡ್ಡ ಕ್ಷೇತ್ರ ಮತ್ತು ಇದರಲ್ಲಿ ಎಸ್ಸಿ ಸಮುದಾಯದ ಸುಮಾರು 1.5 ಲಕ್ಷ ಮುದಾರರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಹಾಗಾಗಿ, ಒಂದೇ ಸಮುದಾಯವನ್ನು ನೆಚ್ಚಿಕೊಂಡರೆ ಯಾವ ಪಕ್ಷವೂ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಇದೇ ಕಾರಣಕ್ಕಾಗಿ ಎರಡೂ ಪಕ್ಷಗಳು ಈಗ ಎಲ್ಲಾ ಜಾತಿಯ ಮತಕ್ಕಾಗಿ ಕಣ್ಣಿಟ್ಟಿದ್ದು ನಿಜ. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಬಲಗೈ ಬಂಟ ಡಾ. ಎಚ್.ಸಿ. ಮಹಾದೇವಪ್ಪ ಅವರಿಗೆ ಎಸ್ಸಿ ಮತ ಸೆಳೆಯುವ ಪೂರ್ಣ ಜವಾಬ್ದಾರಿ ವಹಿಸಿದ್ದರು ಎಂದು ತಿಳಿದುಬಂದಿದೆ.

ಆದರೆ ಡಾ. ಮಹದೇವಪ್ಪ ಇನ್ನೇನು ಕೆಲಸ ಪ್ರಾರಂಭಿಸಬೇಕು ಎನ್ನುವಾಗಲೇ ಕೆಪಿಸಿಸಿ ಅಧ್ಯಕ್ಷ, ಡಿ.ಕೆ. ಶಿವಕುಮಾರ್ ಚಾಮರಾಜನಗರದ ಮಾಜಿ ಲೋಕಸಭಾ ಸದಸ್ಯ ಆರ್. ಧ್ರುವನಾರಾಯಣ್ ಅವರನ್ನು ಕರೆದು ಕೂಡಲೇ ಕಣಕ್ಕಿಳಿಯಬೇಕು ಮತ್ತು ಎಸ್ಸಿ ಮತ ಸೆಳೆಯುವ ತಂತ್ರ ಮಾಡುವ ಜವಾಬ್ದಾರಿ ನಿನ್ನದು ಎಂದು ಹೇಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮೇಲ್ನೋಟಕ್ಕೆ ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ, ಮತ್ತು ತಮ್ಮ ಪಕ್ಷ ಬಹಳ ಆಕ್ರಮಣಕಾರಿ ತಂತ್ರಗಾರಿಕೆ ಮಾಡುತ್ತಿದೆ ಎಂದು ಹೇಳುವ ಕಾಂಗ್ರೆಸ್ ಪಕ್ಷ ಒಳಗೊಳಗೆ ಗುಂಪುಗಾರಿಕೆಯಿಂದ ಬೇಯುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

ಪರಮೇಶ್ವರ್ ಎಲ್ಲಿ? ಈ ಮಧ್ಯೆ ಕೆಪಿಸಿಸಿ ಮಾಜೀ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ಚುನವಾಣಾ ಪ್ರಚಾರದಲ್ಲಿ ಎಲ್ಲಿಯೂ ಕಾಣುತ್ತಿಲ್ಲ. ಇದು ಪಕ್ಷದ ಅನೇಕ ಎರಡನೇ ಸಾಲಿನ ನಾಯಕರಿಗೆ ಆಶ್ಚರ್ಯ ಉಂಟು ಮಾಡುವಂತಾಗಿದೆ. ಡಾ. ಪರಮೇಶ್ವರ್ 2013 ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಬಹಳ ಪ್ರಮುಖ ಪಾತ್ರವಹಿಸಿದ್ದರು ಮತ್ತು ಆಗ ಕೆಪಿಸಿಸಿ ಅಧ್ಯಕ್ಷರಾಗಿ ಕೂಡ ಕಾರ್ಯ ನಿರ್ವಹಿಸಿದ್ದರು.

ಕೆಪಿಸಿಸಿಯನ್ನು ಏಳು ವರ್ಷ ಮುನ್ನಡೆಸಿದ ಡಾ. ಪರಮೇಶ್ವರ್ ಅವರನ್ನು ಚುನಾವಣಾ ಪ್ರಚಾರದಿಂದ ದೂರ ಇಟ್ಟಿದ್ದೇಕೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಒಂದು ಮೂಲದ ಪ್ರಕಾರ, ಡಾ. ಪರಮೇಶ್ವರ್ ಅವರಿಗೆ ರಾಜ್ಯವನ್ನು ಓಡಾಡಿ ಎಸ್ಸಿ ಸಮುದಾಯದ ಸ್ಥಳೀಯ ನಾಯಕರ ನೆಟ್​ವರ್ಕ್​​ ಮಾಡಿದ್ದು ಸುಳ್ಳಲ್ಲ. ಆದರೆ, ಈಗ ಅವರನ್ನೇ ಪಕ್ಕಕ್ಕೆ ಸರಿಸಿ ಬೇರೆ ನಾಯಕರನ್ನು ಮುನ್ನೆಲೆಗೆ ತರಲು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಪ್ರಯತ್ನಿಸುತ್ತಿರುವುದು ಪ್ರಾಯಶಃ ಪಕ್ಷಕ್ಕೆ ಮುಳುವಾಗಬಹುದು ಎನ್ನುತ್ತಿವೆ ಮೂಲಗಳು.

ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ನೀವು ನೋಡಿರದ ಸುಂದರವಾದ ಈಶಾನ್ಯ ರಾಜ್ಯಗಳ ಕಿರುನೋಟ ಇಲ್ಲಿದೆ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಮನು ಅಂದ್ರೆ ಜೀವ ಬಿಡುತ್ತಿದ್ದೆ, ಅಪ್ಪಣ್ಣ ಕಾಟ ಕೊಟ್ಟಿಲ್ಲ: ಸಂತ್ರಸ್ತ ನಟಿ
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು