ಕಬ್ಬು ಬೆಲೆ, ಅತಿವೃಷ್ಟಿಯಿಂದ ಹಾನಿ ಕುರಿತು ವಿಧಾನ ಪರಿಷತ್​ನಲ್ಲಿ ಚರ್ಚೆ; ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಒತ್ತಾಯ

| Updated By: ganapathi bhat

Updated on: Dec 13, 2021 | 6:49 PM

ವಿಮಾ ಯೋಜನೆಗೆ ಕಬ್ಬು ಸೇರಿಸುವ ಬಗ್ಗೆ ಚರ್ಚಿಸುತ್ತೇವೆ. ಎಥನಾಲ್ ಉತ್ಪಾದಿಸುವ ಕಾರ್ಖಾನೆಗೆ ಅಗತ್ಯ ನಿಯಮ ತರುವ ಕೆಲಸ ಮಾಡುತ್ತೇವೆ ಎಂದು ವಿಧಾನಪರಿಷತ್​​ನಲ್ಲಿ ಸಚಿವ ಮುನೇನಕೊಪ್ಪ ಉತ್ತರಿಸಿದ್ದಾರೆ.

ಕಬ್ಬು ಬೆಲೆ, ಅತಿವೃಷ್ಟಿಯಿಂದ ಹಾನಿ ಕುರಿತು ವಿಧಾನ ಪರಿಷತ್​ನಲ್ಲಿ ಚರ್ಚೆ; ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಒತ್ತಾಯ
ಪರಿಷತ್‌ ಕಲಾಪ (ಸಾಂದರ್ಭಿಕ ಚಿತ್ರ)
Follow us on

ಬೆಳಗಾವಿ: ಕಬ್ಬಿಗೆ ಸರ್ಕಾರ ವೈಜ್ಞಾನಿಕ ಬೆಲೆಯನ್ನು ನಿಗದಿ ಮಾಡಬೇಕು. ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಬಾಕಿ ಹಣವನ್ನು ನೀಡಿಲ್ಲ. ಕಬ್ಬು ಬೆಳೆಯನ್ನ ಫಸಲ್ ಬಿಮಾ ಯೋಜನೆಯಡಿ ತರಬೇಕು ಎಂದು ವಿಧಾನಪರಿಷತ್​​ನಲ್ಲಿ ಮಹಾಂತೇಶ್ ಕವಟಗಿಮಠ ಒತ್ತಾಯ ಮಾಡಿದ್ದಾರೆ. ಎಥನಾಲ್ ಉತ್ಪಾದಿಸುವ ಕಾರ್ಖಾನೆಗೆ ಹೊಸ ನೀತಿ ತರಬೇಕು. ರೈತರ ಕಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕು. ಮಳೆಯಿಂದ ಹಾನಿಯಾದ ಕಬ್ಬಿಗೆ ಪರಿಹಾರ ನೀಡಬೇಕು. ನಿಜಲಿಂಗಪ್ಪ ಸಕ್ಕರೆ ಕಾರ್ಖಾನೆಗೆ ವರ್ಷ 10 ಕೋಟಿ ನೀಡಬೇಕು ಎಂದು ಹೇಳಿದ್ದಾರೆ.

ಕಟವಗಿಮಠ ಪ್ರಸ್ತಾಪಕ್ಕೆ ಸಚಿವ ಮುನೇನಕೊಪ್ಪ ಉತ್ತರ ನೀಡಿದ್ದಾರೆ. ರಾಜ್ಯದಲ್ಲಿ 88 ಸಕ್ಕರೆ ಕಾರ್ಖಾನೆ ಇವೆ. 88 ಕಾರ್ಖಾನೆ ಪೈಕಿ 65 ಕಾರ್ಖಾನೆ ಕೆಲಸ ಮಾಡುತ್ತಿವೆ. 2018-19 ರಲ್ಲಿ ₹8.93 ಕೋಟಿ ಬಾಕಿ ಹಣ ಉಳಿದಿದೆ. 2019-20ರಲ್ಲಿ ₹5.80 ಕೋಟಿ ಬಾಕಿ ಹಣ ಉಳಿದಿದೆ. ಶೀಘ್ರವೇ ಬಾಕಿ ಹಣ ಕೊಡಿಸುವ ಕೆಲಸ ಮಾಡುತ್ತೇವೆ. ಶಿವಸಾಗರ್ ಶುಗರ್ಸ್ ಕಾರ್ಖಾನೆ ಬಾಕಿ ಹಣ ಪಾವತಿಸುತ್ತೆ. 2022ರ ಮಾರ್ಚ್ ಒಳಗೆ ಬಾಕಿ ಹಣ ಪಾವತಿಸಲಾಗುತ್ತೆ. ವಿಮಾ ಯೋಜನೆಗೆ ಕಬ್ಬು ಸೇರಿಸುವ ಬಗ್ಗೆ ಚರ್ಚಿಸುತ್ತೇವೆ. ಎಥನಾಲ್ ಉತ್ಪಾದಿಸುವ ಕಾರ್ಖಾನೆಗೆ ಅಗತ್ಯ ನಿಯಮ ತರುವ ಕೆಲಸ ಮಾಡುತ್ತೇವೆ ಎಂದು ವಿಧಾನಪರಿಷತ್​​ನಲ್ಲಿ ಸಚಿವ ಮುನೇನಕೊಪ್ಪ ಉತ್ತರಿಸಿದ್ದಾರೆ.

ತಾಂಡಾಗಳಿಗೆ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಿ: ಪ್ರಕಾಶ್ ರಾಥೋಡ್ ವಿಷಯ ಪ್ರಸ್ತಾಪ
ವಿಧಾನ ಪರಿಷತ್​ನಲ್ಲಿ ನಿಯಮ 330ರಡಿ ಚರ್ಚೆ ಮಾಡಲಾಗಿದೆ. ಪರಿಷತ್​ನಲ್ಲಿ ಪ್ರಕಾಶ್ ರಾಥೋಡ್ ವಿಷಯ ಪ್ರಸ್ತಾಪ ಮಾಡಿದ್ದಾರೆ. ತಾಂಡಾಗಳಿಗೆ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಿ. 100 ರೇಷನ್​ಕಾರ್ಡ್ ಇರುವ ತಾಂಡಾಗೆ ಮಂಜೂರು ಮಾಡಿ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಸಿಎಂ ಇದ್ದಾಗ ಘೋಷಣೆ ಮಾಡಿದ್ರು. ಯೋಜನೆ ಘೋಷಿಸಿದರೂ ಕಾರ್ಯರೂಪಕ್ಕೆ ಬಂದಿಲ್ಲ. ಕೂಡಲೇ ಈ ಬಗ್ಗೆ ರಾಜ್ಯ ಸರ್ಕಾರ ಕ್ರಮವಹಿಸಬೇಕು ಎಂದು ಪರಿಷತ್​ನಲ್ಲಿ ಸದಸ್ಯ ಪ್ರಕಾಶ್ ರಾಥೋಡ್ ಒತ್ತಾಯ ಮಾಡಿದ್ದಾರೆ.

ಪ್ರಕಾಶ್ ರಾಥೋಡ್ ಪ್ರಸ್ತಾಪಕ್ಕೆ ಸಚಿವ ಕತ್ತಿ ಉತ್ತರ ನೀಡಿದ್ದಾರೆ. 100 ರೇಷನ್​​ಕಾರ್ಡ್ ಇರುವ ತಾಂಡಾಗಳಿಗೆ ಒಂದು ನ್ಯಾಯ ಬೆಲೆ ಅಂಗಡಿ ನೀಡಲು ಆದೇಶ ಹೊರಡಿಸಿದೆ. ಈಗಾಗಲೇ ರಾಜ್ಯದಲ್ಲಿ 375 ನ್ಯಾಯಬೆಲೆ ಅಂಗಡಿ ಕೊಟ್ಟಿದ್ದೇವೆ. ಇನ್ನೂ ಅಗತ್ಯ ಇದ್ರೆ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ನ್ಯಾಯಬೆಲೆ ಅಂಗಡಿಗೆ ಬೇಕೆಂದು ಅರ್ಜಿ ಸಲ್ಲಿಸಿದ್ರೆ ಮಂಜೂರು ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಅತಿವೃಷ್ಟಿ ಕುರಿತ ಚರ್ಚೆ ವೇಳೆ ವಾಗ್ವಾದ
ಅತಿವೃಷ್ಟಿ, ನೆರೆಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. 20 ಸಾವಿರ ಮನೆ ನೆಲಸಮವಾಗಿದೆ. ಜಾನವಾರುಗಳು ಜೀವ ಕಳೆದುಕೊಂಡಿವೆ. ಪ್ರವಾಹ, ಅತಿವೃಷ್ಟಿ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. 11 ಸಾವಿರ ಕೋಟಿ ಮೇಲ್ಪಟ್ಟು ಹಾನಿಯಾಗಿದೆ ಎಂದಿದ್ದಾರೆ. 12 ಸಾವಿರ ಕೋಟಿಯಷ್ಟು ಪರಿಹಾರ ಕೊಡಬೇಕು. ಕ್ಲೌಡಿ ವಾತವರಣದಿಂದ ತೋಟಗಾರಿಕಾ ಬೆಳೆಗಳು ನಾಶವಾಗಿವೆ. ತಕ್ಷಣವೇ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸರ್ಕಾರಕ್ಕೆ ಸಲಹೆ ಸೂಚನೆ ಕೊಡುವ ದೃಷ್ಟಿಯಿಂದ ನಿಯಮ 59ರ ಅಡಿ ಅವಕಾಶ ಕೊಡಬೇಕೆಂದು ವಿಧಾನಪರಿಷತ್​ನಲ್ಲಿ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್​ ಅವಕಾಶ ಕೋರಿದ್ದಾರೆ.

ವಿಧಾನಸಭೆಯಲ್ಲಿ ಅತಿವೃಷ್ಟಿ ಕುರಿತ ಚರ್ಚೆ ವೇಳೆ ವಾಗ್ವಾದ ಉಂಟಾಗಿದೆ. ಚರ್ಚೆ ವೇಳೆ ಸಚಿವ ಮತ್ತು ಶಾಸಕರ ನಡುವೆ ವಾಕ್ಸಮರ ಏರ್ಪಟ್ಟಿದೆ. ಎಂಟಿಬಿ ನಾಗರಾಜ್, ಶರತ್​ ಬಚ್ಚೇಗೌಡ ಮಧ್ಯೆ ವಾಗ್ವಾದ ಉಂಟಾಗಿದೆ. ಹೋಸಕೋಟೆಯಲ್ಲಿ ಶೇಕಡಾ 75ರಷ್ಟು ಕೆರೆಗಳೇ ತುಂಬಿಲ್ಲ‌. ಆದರೆ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಸಚಿವರು ತಪ್ಪು ಮಾಹಿತಿ ನೀಡ್ತಿದ್ದಾರೆ ಎಂದು ಶರತ್ ಕಿಡಿಕಾರಿದ್ದಾರೆ. ನೀನೇ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದೀಯಾ? ನೀನೇ ಚಾಲನೆ ನೀಡಿ ಬಂದಿದ್ದೀಯಾ ಎಂದು ಎಂಟಿಬಿ ತಿರುಗೇಟು ಕೊಟ್ಟಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ, ರೀ ಸ್ವಾಮಿ ಕೆರೆ ಬಿಡ್ರೀ, ಮಳೆ ಹಾನಿ ಚರ್ಚಿಸಿ ಎಂದು ಹೇಳಿದ್ದಾರೆ.

ಬೆಂಗಳೂರಿನ ಉಲ್ಲಾಳು ಗ್ರಾಮದಲ್ಲಿ ವಿಶ್ವೇಶ್ವರಯ್ಯ 2ನೇ ಹಂತದ ಬಡಾವಣೆಗಾಗಿ ಬಿಡಿಎ ಭೂಸ್ವಾಧೀನ ಮಾಡಿಕೊಂಡು ಈವರೆಗೆ ಪರಿಹಾರ ನೀಡಿಲ್ಲ ಎಂದು ವಿಧಾನಪರಿಷತ್​ನಲ್ಲಿ ಪುಟ್ಟಣ್ಣ ವಿಷಯ ಪ್ರಸ್ತಾಪಿಸಿದ್ದಾರೆ. ಕೂಡಲೇ ಪರಿಹಾರ ಬಿಡುಗಡೆ ಮಾಡುವಂತೆ ಪುಟ್ಟಣ್ಣ ಆಗ್ರಹ ವ್ಯಕ್ತಪಡಿಸಿದ್ದಾರೆ. ವಿಧಾನಪರಿಷತ್​ನಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಉತ್ತರ ನೀಡಿದ್ದಾರೆ. ಪರಿಹಾರ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಈಗಾಗಲೇ ಕಾನೂನು ಅಭಿಪ್ರಾಯ ಪಡೆಯಲಾಗಿದೆ. ಸಿಎಂ ಜತೆ ಮಾತಾಡಿ ಶೀಘ್ರದಲ್ಲೇ ಪರಿಹಾರ ನೀಡುತ್ತೇವೆ ಎಂದು ವಿಧಾನಪರಿಷತ್​ನಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ಹರಿಪ್ರಸಾದ್ vs ಕೋಟ ಶ್ರೀನಿವಾಸ ಪೂಜಾರಿ: ಮಲಹೊರುವ ಪದ್ಧತಿ ಬಗ್ಗೆ ವಿಧಾನ ಪರಿಷತ್​ನಲ್ಲಿ ಕಾವೇರಿದ ಚರ್ಚೆ

ಇದನ್ನೂ ಓದಿ: ಕಾರ್ಖಾನೆಗಳಿಗೆ ವಿದ್ಯುತ್ ಬಿಲ್ ವಿನಾಯಿತಿ ನೀಡಿದಂತೆ ಧಾರ್ಮಿಕ ಕೇಂದ್ರಗಳ ವಿದ್ಯುತ್ ಬಿಲ್ ಮನ್ನಾ ಮಾಡಲು ಪರಿಷತ್​ನಲ್ಲಿ ಮನವಿ