ನುಸಿ, ಜಿರಳೆಗಳಿಂದ ತುಂಬಿದ್ದ ಹಾಸ್ಟೆಲ್ ಸ್ಟೋರ್ ರೂಮ್ ಕಂಡು ಬೆಚ್ಚಿಬಿದ್ದ ಶಾಸಕ ಅನಿಲ್ ಬೆನಕೆ!
ಪರಿಸ್ಥಿಯನ್ನು ಅವಲೋಕಿಸಲು ಸ್ವತಃ ಶಾಸಕರೇ ಹಾಸ್ಟೆಲ್ ಗೆ ಭೇಟಿ ನೀಡಿದ್ದರು. ಡಾ. ಅಂಬೇಡ್ಕರ್ ಹಾಸ್ಟೆಲ್ನಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಹಾಸ್ಟೆಲ್ ಸ್ಟೋರ್ ರೂಮ್ನಲ್ಲಿ ನುಸಿ, ಜಿರಳೆಗಳು ತುಂಬಿರುವುದನ್ನು ಕಂಡು ಶಾಸಕ ಅನಿಲ್ ಬೆನಕೆ ಬೆಚ್ಚಿಬಿದ್ದಿದ್ದಾರೆ. ತಕ್ಷಣ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಶಾಸಕ ಅನಿಲ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಳಗಾವಿ: ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ಬೆಳಗಾವಿಯ ಸಂಗಮೇಶ್ವರ ನಗರದಲ್ಲಿರುವ ಡಾ. ಅಂಬೇಡ್ಕರ್ ಹಾಸ್ಟೆಲ್ ಗೆ ಇಂದು ಭೇಟಿ ನೀಡಿದ್ದರು. ಕಾರಣ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡುತ್ತಿರುವುದನ್ನು ಖಂಡಿಸಿ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ವಿದ್ಯಾರ್ಥಿಗಳು ದಿಢೀರ್ ಧರಣಿ, ಪ್ರತಿಭಟನೆ ನಡೆಸಿದ್ದರು. ನುಸಿ ಮಿಶ್ರಿತ ಇಡ್ಲಿ, ಸಾಂಬಾರ, ಚಪಾತಿ, ಪಲ್ಯದ ಪಾತ್ರೆಗಳನ್ನಿಟ್ಟು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಆಹಾರ ಬೇಡ ವಿಷ ಬೇಕು ಎಂದು ಘೋಷಣೆ ಕೂಗಿ ತಮ್ ಪಡಿಪಾಟಲು, ಆಕ್ರೋಶ ಹೊರಹಾಕಿದರು.
ಪರಿಸ್ಥಿಯನ್ನು ಅವಲೋಕಿಸಲು ಸ್ವತಃ ಶಾಸಕರೇ ಹಾಸ್ಟೆಲ್ ಗೆ ಭೇಟಿ ನೀಡಿದ್ದರು. ಡಾ. ಅಂಬೇಡ್ಕರ್ ಹಾಸ್ಟೆಲ್ನಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಹಾಸ್ಟೆಲ್ ಸ್ಟೋರ್ ರೂಮ್ನಲ್ಲಿ ನುಸಿ, ಜಿರಳೆಗಳು ತುಂಬಿರುವುದನ್ನು ಕಂಡು ಶಾಸಕ ಅನಿಲ್ ಬೆನಕೆ ಬೆಚ್ಚಿಬಿದ್ದಿದ್ದಾರೆ. ತಕ್ಷಣ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಶಾಸಕ ಅನಿಲ್ ತರಾಟೆಗೆ ತೆಗೆದುಕೊಂಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಉಮಾ ಸಾಲಿಗೌಡರ, ವಾರ್ಡನ್ಗಳಾದ ಶ್ರೀಧರ ದೊಡ್ಡಮನಿ, ಕೋಲಕಾರ್ ಅವರನ್ನು ಶಾಸಕ ಅನಿಲ್ ಬೆನಕೆ ವಿಚಾರಿಸಿಕೊಂಡರು. ಈ ವೇಳೆ ಹಾಸ್ಟೆಲ್ಗೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸಹ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಶಾಸಕ ಅನಿಲ್ ಬೆನಕೆ ಗುಣಮಟ್ಟದ ಆಹಾರ ಕೊಡಿಸುವುದಾಗಿ ಭರವಸೆ ನೀಡಿದರು.