ಟ್ರಾಫಿಕ್ ನಿಯಮ ಉಲ್ಲಿಂಘನೆ: ಗಾಡಿ ಬಿಡಿಸಿಕೊಳ್ಳಲು ಸವಾರರ ಹಿಂದೇಟು

ಬೆಳಗಾವಿ: ಟ್ರಾಫಿಕ್​​ ರೂಲ್ಸ್​​​ ಬಿಗಿಯಾಗಿದ್ದೇ ಆಗಿದ್ದು, ವಾಹನ ಸವಾರರು ದಂಡದ ಮೊತ್ತ ನೋಡಿ ಬೆಚ್ಚಿ ಬಿದಿದ್ರು. ದಂಡದ ಹೊಡೆತ ತಿಂದು ಕೆಲವ್ರು ಕಕ್ಕಾಬಿಕ್ಕಿಯಾಗಿದ್ರು. ಅದ್ರಲ್ಲೂ ಕೆಲವು ಸವಾರರು ಮಾಡಿರೋ ಕೆಲಸ, ಪೊಲೀಸ್ರಿಗೆ ತಲೆ ನೋವು ತಂದಿದೆ. ಸಂಚಾರಿ ನಿಯಮ ಉಲ್ಲಂಘನೆ ಮಾಡಿ ಖಾಕಿ ಸುಪರ್ದಿಯಲ್ಲಿರೋ ಬೈಕ್​​ಗಳು ಧೂಳು ಹಿಡಿತಿವೆ. ಸುಸ್ಥಿತಿಯಲ್ಲೇ ಇದ್ರೂ, ನಿಂತಲ್ಲೇ ನಿಂತು ಎಲ್ಲವೂ ಹಾಳಾಗ್ತಿದೆ. ಆದ್ರೆ, ಇವುಗಳ ಮೇಲೆ ಬಿದ್ದಿರೋ ಭಾರಿ ದಂಡದ ಮೊತ್ತಗಳಿಂದ ಬೆಚ್ಚಿ, ಮಾಲೀಕರು ಇವುಗಳತ್ತ ಕ್ಯಾರೇ ಅಂತಿಲ್ಲ. ದಂಡದ ಮೊತ್ತಕ್ಕೆ […]

ಟ್ರಾಫಿಕ್ ನಿಯಮ ಉಲ್ಲಿಂಘನೆ: ಗಾಡಿ ಬಿಡಿಸಿಕೊಳ್ಳಲು ಸವಾರರ ಹಿಂದೇಟು
Follow us
ಸಾಧು ಶ್ರೀನಾಥ್​
|

Updated on:Jan 21, 2020 | 12:28 PM

ಬೆಳಗಾವಿ: ಟ್ರಾಫಿಕ್​​ ರೂಲ್ಸ್​​​ ಬಿಗಿಯಾಗಿದ್ದೇ ಆಗಿದ್ದು, ವಾಹನ ಸವಾರರು ದಂಡದ ಮೊತ್ತ ನೋಡಿ ಬೆಚ್ಚಿ ಬಿದಿದ್ರು. ದಂಡದ ಹೊಡೆತ ತಿಂದು ಕೆಲವ್ರು ಕಕ್ಕಾಬಿಕ್ಕಿಯಾಗಿದ್ರು. ಅದ್ರಲ್ಲೂ ಕೆಲವು ಸವಾರರು ಮಾಡಿರೋ ಕೆಲಸ, ಪೊಲೀಸ್ರಿಗೆ ತಲೆ ನೋವು ತಂದಿದೆ.

ಸಂಚಾರಿ ನಿಯಮ ಉಲ್ಲಂಘನೆ ಮಾಡಿ ಖಾಕಿ ಸುಪರ್ದಿಯಲ್ಲಿರೋ ಬೈಕ್​​ಗಳು ಧೂಳು ಹಿಡಿತಿವೆ. ಸುಸ್ಥಿತಿಯಲ್ಲೇ ಇದ್ರೂ, ನಿಂತಲ್ಲೇ ನಿಂತು ಎಲ್ಲವೂ ಹಾಳಾಗ್ತಿದೆ. ಆದ್ರೆ, ಇವುಗಳ ಮೇಲೆ ಬಿದ್ದಿರೋ ಭಾರಿ ದಂಡದ ಮೊತ್ತಗಳಿಂದ ಬೆಚ್ಚಿ, ಮಾಲೀಕರು ಇವುಗಳತ್ತ ಕ್ಯಾರೇ ಅಂತಿಲ್ಲ.

ದಂಡದ ಮೊತ್ತಕ್ಕೆ ಹೆದರಿ ವಾಹನ ಬಿಡಿಸಿಕೊಳ್ಳಲು ಹಿಂದೇಟು: ಹೌದು.. ಬೆಳಗಾವಿ ಪೊಲೀಸ್ರಿಗೆ ಸಂಚಾರಿ ನಿಯಮ ಉಲ್ಲಂಘಿಸೋ, ಸವಾರರಿಗೆ ದಂಡ ಹಾಕೋದು ಒಂದು ಕೆಲಸವಾದ್ರೆ, ಕೇಸ್​​​​​​ ಬಿದ್ದಿರೋ ವೆಹಿಕಲ್​​ ಕಾಯೋದು ಇನ್ನೊಂದು ಕೆಲಸ ಆಗ್ಬಿಟ್ಟಿದೆ. ಯಾಕಂದ್ರೆ, ಕಳೆದ ಒಂದು ತಿಂಗಳ ಅವಧಿಯಲ್ಲಿ, ನೂರಾರು ಬೈಕ್​​ಗಳಿಗೆ ದಂಡ ವಿಧಿಸಿದ್ದಾರೆ. ಅನೇಕ ನಿಯಮಗಳ ಉಲ್ಲಂಘನೆ ಸೇರಿಸಿ, ಐದು, ಹತ್ತು, ಹನ್ನೆರಡು ಸಾವಿರದ ವರೆಗೂ ಫೈನ್​​ ಹಾಕಿದ್ದಾರೆ. ಆದ್ರೆ, ದಂಡ ಕಟ್ಟಿ ಗಾಡಿ ಬಿಡಿಸಿಕೊಳ್ಳಬೇಕಾದ ಮಾಲೀಕರು, ಅಷ್ಟು ಹಣ ಕಟ್ಟಲಾಗದೆ ಸುಮ್ಮನಾಗಿದ್ದಾರೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಸುಮಾರು ಅರವತ್ತಕ್ಕೂ ಅಧಿಕ ಬೈಕ್​​ಗಳನ್ನ, ಸಂಚಾರಿ ನಿಯಮ ಉಲ್ಲಂಘನೆಯಡಿ ವಶಕ್ಕೆ ತೆಗೆದುಕೊಂಡಿದ್ದಾರೆ. ಕಾನೂನು ಪ್ರಕಾರ, ಕೋರ್ಟ್​​​​ನಲ್ಲಿ ದಂಡ ಕಟ್ಟಿ ಬೈಕ್​ ಬಿಡಿಸಿಕೊಂಡು ಹೋಗ್ಬೇಕು. ಆದ್ರೆ, ಒಂದು ತಿಂಗಳಾದ್ರೂ ಬೈಕ್​ ಮಾಲೀಕರು, ದಂಡ ಕಟ್ಟಿ ಬೈಕ್​ ಬಿಡಿಸಿಕೊಳ್ತಿಲ್ಲ. ಹೀಗಾಗಿ, ಪೊಲೀಸ್ ಠಾಣೆ ಮುಂಭಾಗದಲ್ಲೇ ಬೈಕ್​ಗಳು ನಿಂತಿವೆ. ಇನ್ನು, ವೆಹಿಕಲ್​ಗಳಿಗೆಲ್ಲ ಸರಪಳಿ ಕಟ್ಟಿದ್ದು, ಅದನ್ನ ಕಾಯೋದಕ್ಕಾಗೇ ಕಾನ್ಸ್​​ಸ್ಟೇಬಲ್​​​ ಒಬ್ಬರು ನಿಂತಿದ್ದಾರೆ.

ಒಟ್ನಲ್ಲಿ ದಂಡದಿಂದ ಭಯ ಮೂಡಿ, ನಿಯಮ ಪಾಲಿಸ್ತಾರೆ ಅನ್ನೋದು ಪೊಲೀಸ್ರ ಲೆಕ್ಕಾಚಾರ. ಆದ್ರೆ, ದಂಡ ಕಟ್ಟೋ ಬದಲು ಗಾಡಿಯನ್ನೇ ಬಿಡಲು ಮಾಲೀಕರು ಮುಂದಾಗಿರೋದು, ಪೊಲೀಸ್ರಿಗೆ ಹೊಸ ಫಜೀತಿ ತಂದಿಟ್ಟಿದೆ.

Published On - 12:25 pm, Tue, 21 January 20

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು