ಬೆಳಗಾವಿ: ಮಳೆಯಿಂದಾಗಿ ಜೀವ ಕಳೆ, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಬಾಬಾ ಪಾಲ್ಸ್

| Updated By: ಆಯೇಷಾ ಬಾನು

Updated on: Jun 25, 2024 | 8:48 AM

ಮಳೆಗಾಲ ಶುರುವಾದ್ರೇ ಸಾಕು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ ಶುರುವಾಗಿ ಬಿಡುತ್ತೆ. ಹಚ್ಚ ಹಸಿರ ನಡುವೆ ಬಂಡೆಗಲ್ಲುಗಳ ಮೇಲಿಂದ ನೀರು ಚಿಮ್ಮುವುದನ್ನ ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಅದರಲ್ಲೂ ಮಹಾರಾಷ್ಟ್ರ ಬೆಳಗಾವಿ ಗಡಿಯಲ್ಲಿರುವ ಬಾಬಾ ಪಾಲ್ಸ್ ಗೆ ಇದೀಗ ಜೀವ ಕಳೆ ಬಂದಿದೆ. ಮೂರು ರಾಜ್ಯದ ಸಾವಿರಾರು ಜನರು ಪಾಲ್ಸ್ ಕಣ್ತುಂಬಿಕೊಂಡು ಸಿಕ್ಕಾಪಟ್ಟೆ ಎಂಜಾಯ್ ಮಾಡ್ತಿದ್ದಾರೆ.

ಬೆಳಗಾವಿ: ಮಳೆಯಿಂದಾಗಿ ಜೀವ ಕಳೆ, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಬಾಬಾ ಪಾಲ್ಸ್
ಬಾಬಾ ಫಾಲ್ಸ್
Follow us on

ಬೆಳಗಾವಿ, ಜೂನ್.25: ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಪಶ್ಚಿಮ ಘಟ್ಟ ಪ್ರದೇಶ, ಇದರ ಮಧ್ಯದಲ್ಲಿ ಬೃಹತ್ ಬಂಡೆಗಲ್ಲುಗಳು, ಹಾಲ್ನೋರೆಯಂತೆ ಬಂಡೆಗಲ್ಲುಗಳ ಮೇಲಿಂದ ಉಕ್ಕುತ್ತಿರುವ ಜಲಧಾರೆ, ಒಂದಲ್ಲಾ ಎರಡಲ್ಲಾ ಕಣ್ಣು ಹಾಯಿಸಿದ ಕಡೆಗಳೆಲ್ಲಾ ಜಲಪಾತದ ಮನಮೋಹಕ ದೃಶ್ಯ. ಬೆಳಗಾವಿ ಮಹಾರಾಷ್ಟ್ರ ಗಡಿಯಲ್ಲಿರುವ ಬಾಬಾ ಪಾಲ್ಸ್ (Baba Falls) ಉಕ್ಕಿ ಹರಿಯುತ್ತಿದೆ. ಮಳೆಗಾಲ ಆರಂಭ ಆದ್ರೇ ಸಾಕು ಬಾಬಾ ಪಾಲ್ಸ್ ಗೆ ಜೀವ ಕಳೆ ಬಂದುಬಿಡುತ್ತೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು (Rain) ಇದೇ ಕಾರಣಕ್ಕೆ ಬಂಡೆಗಲ್ಲುಗಳ ಮೇಲಿಂದ ಅಲ್ಲಲ್ಲಿ ನೀರು ಝರಿಗಳಾಗಿ ಉಕ್ಕುತ್ತೆ. ಅದರಲ್ಲೂ ಬೃಹತ್ ಬಂಡೆಗಲ್ಲಿನ ಮೇಲಿಂದ ಸಾವಿರ ಅಡಿಗಳ ಮೇಲಿಂದ ನೀರು ಉಕ್ಕುವುದನ್ನ ನೋಡಲು ಎರಡು ಕಣ್ಣು ಸಾಲದಾಗಿದ್ದು ಅಷ್ಟೊಂದು ಅದ್ಬುತವಾಗಿರುತ್ತೆ ಆ ರಮನೀಯ ದೃಶ್ಯ. ಮಹಾರಾಷ್ಟ್ರದ ಸಾವಂತವಾಡಿಯ ಚೌಕುಲಾ ಎಂಬ ಗ್ರಾಮದ ಹೊರ ವಲಯದಲ್ಲಿ ಈ ಪಾಲ್ಸ್ ಗಳಿದ್ದು ಒಂದೇ ಕಡೆ ಒಂದು ಕಿಮೀ ಅಂತರದಲ್ಲಿ ನಾಲ್ಕೈದು ಪಾಲ್ಸ್ ಗಳು ಪ್ರವಾಸಿಗರಿಗೆ ಸಿಗುತ್ತೆ.

ಇನ್ನೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಈ ರೀತಿ ಸಾಕಷ್ಟು ಫಾಲ್ಸ್ ಗಳು ಉದ್ಬವಿಸುತ್ತವೆ. ಮಳೆಗಾಲದಲ್ಲಿ ದಟ್ಟ ಅರಣ್ಯದಲ್ಲಿ ಫಾಲ್ಸ್ ಗಳು ಹುಟ್ಟುವುದು ಪ್ರವಾಸಿಗರಿಗೆ ಅಲ್ಲಿ ಹೋಗದ ಸ್ಥಿತಿ ಇರುತ್ತೆ. ಆದ್ರೇ ಈ ಬಾಬಾ ಫಾಲ್ಸ್ ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದು ಪ್ರವಾಸಿಗರಿಗೆ ಹೋಗಲು ಹೇಳಿ ಮಾಡಿಸಿದ ಜಾಗವಾಗಿದೆ. ಎರಡು ವರ್ಷದಿಂದ ಈ ಫಾಲ್ಸ್ ಫೇಮಸ್ ಆಗಿದ್ದು ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡ್ತಾರೆ. ಈ ಮೊದಲು ಬಾಬಾ ಫಾಲ್ಸ್ ನಿಂದ ಇಪ್ಪತ್ತು ಕಿಮೀ ದೂರದಲ್ಲಿರುವ ಅಂಬೋಲಿ ಫಾಲ್ಸ್ ಗೆ ಸಾಕಷ್ಟು ಪ್ರವಾಸಿಗರು ಬರ್ತಿದ್ದು ಆದ್ರೇ ಎರಡು ವರ್ಷದಿಂದ ಅಲ್ಲಿಗಿಂತ ಬಾಬಾ ಪಾಲ್ಸ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಮತ್ತೋರ್ವ ಆರೋಪಿಯ ಬಂಧನ

ಬೆಳಗಾವಿಯಿಂದ 50ಕಿಮೀ ದೂರದಲ್ಲಿರುವ ಈ ಫಾಲ್ಸ್ ಗೆ ಸದ್ಯಕ್ಕೆ ಯಾವುದೇ ಬಸ್ ವ್ಯವಸ್ಥೆ ಇರುವುದಿಲ್ಲ. ಬೈಕ್, ಕಾರು ಸೇರಿದಂತೆ ಖಾಸಗಿ ವಾಹನಗಳ ಮೂಲಕ ಇಲ್ಲಿಗೆ ಹೋಗಬಹುದಾಗಿದೆ. ಇನ್ನೂ ಚೌಕುಲಾ ಅನ್ನೋ ಗ್ರಾಮದಿಂದ ಎರಡು ಕಿಮೀ ಕಾಲ್ನಡಿಗೆಯಲ್ಲಿ ಹೋದ್ರೇ ಈ ಪಾಲ್ಸ್ ಸಿಗುತ್ತೆ. ಆರಂಭದಲ್ಲಿ ಸಣ್ಣ ಝರಿಗಳಾಗಿ ಜಲಪಾತ ಸಿಕ್ರೇ ಮುಂದೆ ಹೋದಂತೆ ನಾಲ್ಕು ಬಂಡೆಗಲ್ಲಿನ ಮೇಲೆ ಸಾವಿರ ಅಡಿ ಎತ್ತರಿಂದ ಉಕ್ಕುವ ಜಲಪಾತಗಳು ಸಿಗುತ್ತೆ. ಫಾಲ್ಸ್ ಮುಂಭಾಗದಲ್ಲಿ ಎಲ್ಲರೂ ಹೋಗಬಹುದು ಆದ್ರೇ ಇಲ್ಲಿ ಬಂಡೆ ಗಲ್ಲಿನ ಮಧ್ಯೆ ಹೋಗಿ ಮೇಲಿಂದ ಧುಮ್ಮಿಕ್ಕುವ ನೀರಿಗೆ ಮೈಯೊಡ್ಡಿ ಎಂಜಾಯ್ ಮಾಡ್ತಾರೆ. ಸೆಲ್ಫಿ ಕ್ಲಿಕ್ಕಿಸಿಕೊಳ್ತಾರೆ, ಫೋಟೊಗೆ ಸಕ್ಕತ್ ಫೋಸ್ ಕೂಡ ಕೊಟ್ಟು ಪ್ರವಾಸಿಗರು ಮಜಾ ಮಾಡ್ತಾರೆ. ಫಾಲ್ಸ್ ನೋಡಲು ಕರ್ನಾಟಕದ ಪ್ರವಾಸಿಗರೇ ಹೆಚ್ಚಿದ್ದು ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಾಗಲಕೋಟೆ ಹಾಗೂ ಮಹಾರಾಷ್ಟ್ರ ಮತ್ತು ಗೋವಾದಿಂದಲೂ ಪ್ರವಾಸಿಗರು ಬಂದು ಇಲ್ಲಿ ಎಂಜಾಯ್ ಮಾಡ್ತಾರೆ.

ಭೀಕರ ಬರ ಹೆಚ್ಚಿನ ಪ್ರಮಾಣದಲ್ಲಿ ಈ ಬಾರಿ ಬಿಸಿಲಿನ ಬೇಗೆಗೆ ಬೆಂದಿದ್ದ ಜನರಿಗೆ ಮಳೆ ಆರಂಭವಾಗ್ತಿದ್ದಂತೆ ಫಾಲ್ಸ್ ನೋಡಲು ಜನ ಮುಗಿ ಬಿದ್ದಿದ್ದಾರೆ. ಕುಟುಂಬ ಸಮೇತ, ಸ್ನೇಹಿತರ ಜೊತೆಗೆ ವಿಸಿಟ್ ಮಾಡಿ ಎಂಜಾಯ್ ಮಾಡ್ತಿದ್ದಾರೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ ಜಲಪಾತಗಳಿಗೆ ಪ್ರವಾಸಿಗರು ಹೋಗಲು ವ್ಯವಸ್ಥೆಯಿಲ್ಲ ಕೆಲವು ಕಡೆಗಳಲ್ಲಿ ಅಪಾಯಕಾರಿ ಇದ್ರೂ ಪ್ರವಾಸಿಗರ ಹುಚ್ಚಾಟ ಜೋರಾಗಿದ್ದು ಈ ನಿಟ್ಟಿನಲ್ಲಿ ಪ್ರವಾಸಿಗರು ಜಾಗೃತೆ ವಹಿಸಲಿ, ಪ್ರವಾಸೋದ್ಯಮ ಇಲಾಖೆ ಅನುಕೂಲ ಮಾಡಿ ಕೊಡಲಿ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ