ಸೆಲ್ಫೀ ತೆಗೆದುಕೊಳ್ಳುವಾಗ ಕಿತವಾಡ ಜಲಪಾತದಲ್ಲಿ ನೀರಿಗೆ ಜಾರಿದ ಯುವತಿಯರಲ್ಲಿ ನಾಲ್ವರು ಜಲಸಮಾಧಿ, ಒಬ್ಬಳ ಸ್ಥಿತಿ ಚಿಂತಾಜನಕ
ಯುವತಿಯರು ಸೆಲ್ಫೀ ತೆಗೆದುಕೊಳ್ಳುವ ಭರದಲ್ಲಿ ಕಾಲು ಜಾರಿ ನೀರಿಗೆ ಬಿದ್ದರೆಂದು ಹೇಳಲಾಗಿದೆ. ಗಾಯಗೊಂಡಿರುವ ಯುವತಿ ಮತ್ತು ಮೃತದೇಹಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ತರಲಾಗಿದೆ.
ಬೆಳಗಾವಿ: ಸೆಲ್ಫೀ ತೆಗೆದುಕೊಳ್ಳುವ ಗೀಳು ಅದಿನ್ನೆಷ್ಟು ಜೀವಗಳನ್ನು ಬಲಿ ತೆಗೆದುಕೊಳ್ಳಲಿದೆಯೋ? ಬೆಳಗಾವಿಗೆ ಹತ್ತಿರದ ಮಹಾರಾಷ್ಟ್ರ-ಕರ್ನಾಟಕ ಗಡಿಭಾಗದಲ್ಲಿರುವ ಕಿತವಾಡ ಜಲಪಾತಕ್ಕೆ (Kithwada Waterfalls) ಪಿಕ್ನಿಕ್ ಹೋಗಿದ್ದ ನಗರದ ಯುವತಿಯರಲ್ಲಿ 4 ಜನ ನೀರು ಪಾಲಾಗಿದ್ದಾರೆ ಮತ್ತು ಒಬ್ಬಳ ಸ್ಥಿತಿ ಚಿಂತಾಜನಕವಾಗಿದೆ (critical). ಮೃತ ಯುವತಿಯರನ್ನು ಅಸೀಯಾ ಮುಜಾವರ್ (17), ತಸ್ಮಿಯ (20), ಕುರ್ದಿಶ್ ಹಾಸಂ ಪಟೇಲ್ (20) ಮತ್ತು ರುಕ್ಸಾರ್ ಬಿಸ್ತಿ (20) ಎಂದು ಗುರುತಿಸಲಾಗಿದೆ. ಯುವತಿಯರು ಸೆಲ್ಫೀ ತೆಗೆದುಕೊಳ್ಳುವ ಭರದಲ್ಲಿ ಕಾಲು ಜಾರಿ ನೀರಿಗೆ ಬಿದ್ದರೆಂದು ಹೇಳಲಾಗಿದೆ. ಗಾಯಗೊಂಡಿರುವ ಯುವತಿ ಮತ್ತು ಮೃತದೇಹಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ (BIMS) ತರಲಾಗಿದೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ