AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Belagavi Health Department: ಬೆಳಗಾವಿಯ ಆರೋಗ್ಯ ಇಲಾಖೆಯಲ್ಲಿ ಹೆಲ್ತ್ ಆಫೀಸರ್ಸ್​ ನೇಮಕಾತಿಯಲ್ಲಿ ಗೋಲ್‌ಮಾಲ್

476 ಹುದ್ದೆಗಳಿಗೆ ನಡೆದಿದ್ದ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಾನೂನುಬಾಹಿರವಾಗಿ ನಡೆದಿದ್ದು, ಆಯ್ಕೆ ಪಟ್ಟಿಯನ್ನು ಕೂಡಲೇ ವಾಪಾಸ್ ಪಡೆಯದಿದ್ರೇ ಹೋರಾಟ ಮಾಡುವುದಾಗಿ ಇತರೆ ಅಭ್ಯರ್ಥಿಗಳು ಎಚ್ಚರಿಕೆ ನೀಡಿದ್ದಾರೆ.

Belagavi Health Department: ಬೆಳಗಾವಿಯ ಆರೋಗ್ಯ ಇಲಾಖೆಯಲ್ಲಿ ಹೆಲ್ತ್ ಆಫೀಸರ್ಸ್​ ನೇಮಕಾತಿಯಲ್ಲಿ ಗೋಲ್‌ಮಾಲ್
ಬೆಳಗಾವಿಯ ಆರೋಗ್ಯ ಇಲಾಖೆಯಲ್ಲಿ ಹೆಲ್ತ್ ಆಫೀಸರ್​ಗಳ ನೇಮಕಾತಿಯಲ್ಲಿ ಗೋಲ್‌ಮಾಲ್
TV9 Web
| Edited By: |

Updated on: Nov 18, 2021 | 9:20 AM

Share

ಬೆಳಗಾವಿ: ಬೆಳಗಾವಿ ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಭಾರೀ ಗೋಲ್‌ಮಾಲ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಕಮ್ಯುನಿಟಿ ಹೆಲ್ತ್ ಆಫೀಸರ್ ಹುದ್ದೆಗಳ ನೇಮಕಾತಿ ವೇಳೆ ಈ ಫ್ರಾಡ್ ನಡೆದಿರುವ ಆರೋಪವಿದೆ. ಬೆಳಗಾವಿ ಜಿಲ್ಲೆಯಲ್ಲಿ 476 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು (Belagavi CHO recruitment ). 1600 ಅಭ್ಯರ್ಥಿಗಳು ಪರೀಕ್ಷೆ ಬರೆದು 1267 ಮಂದಿ ಪಾಸ್ ಆಗಿದ್ದರು. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ದಾಖಲೆ ಪರಿಶೀಲನೆ ನಡೆಸಿದ್ದ ಸದರಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಒಂದು ಪಟ್ಟಿ ಸಿದ್ದಪಡಿಸಿ ಸರ್ಕಾರಕ್ಕೆ ಕಳುಹಿಸಿದ್ದರು. ಆದರೆ ಅಲ್ಲಿಂದ ಮುಂದಕ್ಕೆ ಹಣದಾಸೆಗೆ ಬಿದ್ದು ಕಡಿಮೆ ಅಂಕ ಪಡೆದವರನ್ನು ಆಯ್ಕೆ ಮಾಡಿರುವ‌ ಆರೋಪ ಇದೀಗ ಕಳಿಬಂದಿದೆ.

ಬೆಳಗಾವಿ ಆರೋಗ್ಯ ಇಲಾಖೆಯಲ್ಲಿ ನೇಮಕಾತಿ ವೇಳೆ ಗೋಲ್‌ಮಾಲ್ ನಡೆದಿರುವುದು ಬಹಿರಂಗವಾಗುತ್ತಿದ್ದಂತೆ ಬೆಳಗಾವಿಯ ಡಿಎಚ್‌ಒ ಕಚೇರಿ ಮುಂದೆ ಇತರೆ ಅಭ್ಯರ್ಥಿಗಳು ಆಕ್ರೋಶ ಹಾಕಿದ್ದಾರೆ. ಬೆಳಗಾವಿ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಅಂಕ ಪಡೆದು, ದಾಖಲೆ ಪರಿಶೀಲನೆಯಲ್ಲೂ ಪಾಸ್ ಆದವರನ್ನ ಅಧಿಕಾರಿಗಳು ಕೈಬಿಟ್ಟಿದ್ದಾರೆ ಎಂಬ ಕೂಗು ಎದ್ದಿದೆ. ಸಿ‌ಎಚ್‌ಓ ಗಳ ಆಯ್ಕೆ ಪಟ್ಟಿಯಲ್ಲಿ ಕೆಲವರದ್ದು ಎರಡೆರೆಡು ಬಾರಿ ಹೆಸರು ನಮೂದು ಆಗಿರುವುದೂ ಬೆಳಕಿಗೆ ಬಂದಿದೆ.

ಇನ್ನು ಕೆಲವರನ್ನು ಕಡಿಮೆ ಅಂಕ ಪಡೆದಿದ್ದರೂ ಆಯ್ಕೆ ಮಾಡಿದ್ದಾರೆ ಎಂಬ ಆರೋಪ‌ವಿದೆ. ಪಾರದರ್ಶಕತೆ ಇಲ್ಲದೇ ಸಿಎಚ್‌ಓ ಗಳ ಆಯ್ಕೆ ಮಾಡಿದ್ದಕ್ಕೆ ಅಧಿಕಾರಿಗಳ ವಿರುದ್ಧ ನೂರಾರು ಅಭ್ಯರ್ಥಿಗಳು ಅಸಮಾಧಾನಗೊಂಡಿದ್ದಾರೆ.

476 ಹುದ್ದೆಗಳಿಗೆ ನಡೆದಿದ್ದ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಾನೂನುಬಾಹಿರವಾಗಿ ನಡೆದಿದ್ದು, ಆಯ್ಕೆ ಪಟ್ಟಿಯನ್ನು ಕೂಡಲೇ ವಾಪಾಸ್ ಪಡೆಯದಿದ್ರೇ ಹೋರಾಟ ಮಾಡುವುದಾಗಿ ಇತರೆ ಅಭ್ಯರ್ಥಿಗಳು ಎಚ್ಚರಿಕೆ ನೀಡಿದ್ದಾರೆ.

(fraud alleged in recruitment of 476 health officers in belagavi)