Veer Savarkar: ಹಿಂಡಲಗಾ ಜೈಲಿನಲ್ಲೂ 100 ದಿನ ಇದ್ದ ಸಾವರ್ಕರ್: ವೀರ್ ಸಾವರ್ಕರ್ ಟಿಶರ್ಟ್, ಪೋಟೊ, ಬ್ಯಾನರ್ ಸ್ಮರಣಿಕೆ ವಿತರಣೆ
ಸಾವರ್ಕರ್ ಪೋಟೊ ಪ್ರದರ್ಶನಕ್ಕೆ ಯಾರ ಅನುಮತಿಯೂ ಬೇಕಿಲ್ಲ. ಎಲ್ಲದಕ್ಕೂ ಅನುಮತಿ ಪಡೆಯಬೇಕೆಂದ್ರೆ ಗಣೇಶೋತ್ಸವವೇ ಆಗಲ್ಲ. ಸಾವರ್ಕರ್ ಪೋಟೊ ಪ್ರದರ್ಶನಕ್ಕೆ ಅನುಮತಿಯ ಅವಶ್ಯಕತೆ ಇಲ್ಲ. ನಮಗಷ್ಟೇ ಏಕೆ ಇಂಥ ಕಾನೂನುಗಳು ಅನ್ವಯ ಆಗುತ್ತವೆ -ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ
ಬೆಳಗಾವಿ: ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡುವಾಗ ಸ್ವಾತಂತ್ರ್ಯ ಸೇನಾನಿ ವೀರ್ ಸಾವರ್ಕರ್ (Veer Savarkar) ಅವರು ದೇಶಕ್ಕಾಗಿ 27 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದರು. ಅದೇ ವೇಳೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲೂ (Hindalga Jail) ಸಾವರ್ಕರ್ 100 ದಿನ ಇದ್ದರು. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಸಾವರ್ಕರ್ ಇರುವ ಟಿ ಶರ್ಟ್, ಪೋಟೊ ಮತ್ತು ಬ್ಯಾನರ್ ವಿತರಣೆ ನಡೆದಿದೆ.
ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆಯಿಂದ (BJP MLA Anil Benake) ಈ ಸ್ಮರಣಿಕೆಗಳ ವಿತರಣೆಯಾಗಿದೆ. ಚವಾಟ್ ಗಲ್ಲಿಯ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಬೆಳಗಾವಿ ಉತ್ತರ ವಿಧಾನಸಭೆ ಕ್ಷೇತ್ರದ 200 ಮಂಡಳಿಗಳಿಗೆ ಪೋಟೊ ವಿತರಣೆ ಮಾಡಲಾಗಿದೆ. ವಿವಿಧ ಮಂಡಳಿಗಳಿಗೆ ಸಾವರ್ಕರ್ ಇರುವ 200 ಬ್ಯಾನರ್ ಕೂಡ ವಿತರಣೆಯಾಗಿದೆ. ಈ ಮಧ್ಯೆ, ಬೆಳಗಾವಿ ಉತ್ತರ ಕ್ಷೇತ್ರದ ಕಾರ್ಯಕರ್ತರಿಗಾಗಿ ಹಂಚಲು ಶಾಸಕ ಬೆನಕೆ 10 ಸಾವಿರ ಟಿ ಶರ್ಟ್ ರೆಡಿ ಮಾಡಿಸಿದ್ದಾರೆ.
ಸಾವರ್ಕರ್ ಪೋಟೊ ಪ್ರದರ್ಶನಕ್ಕೆ ಯಾರ ಅನುಮತಿಯೂ ಬೇಕಿಲ್ಲ. ಎಲ್ಲದಕ್ಕೂ ಅನುಮತಿ ಪಡೆಯಬೇಕೆಂದ್ರೆ ಗಣೇಶೋತ್ಸವವೇ ಆಗಲ್ಲ. ಸಾವರ್ಕರ್ ಪೋಟೊ ಪ್ರದರ್ಶನಕ್ಕೆ ಅನುಮತಿಯ ಅವಶ್ಯಕತೆ ಇಲ್ಲ. ನಮಗಷ್ಟೇ ಏಕೆ ಇಂಥ ಕಾನೂನುಗಳು ಅನ್ವಯ ಆಗುತ್ತವೆ. ಅನುಮತಿ ಪಡೆಯಲ್ಲ, ಗಣೇಶ ಮಂಡಳಿಗಳಲ್ಲಿ ಸಾವರ್ಕರ್ ಪೋಟೊ ಹಾಕುತ್ತೇವೆ.
ಗಣಪತಿ ಮಂಡಳಿಯವರು ಸ್ವಯಂಪ್ರೇರಿತವಾಗಿ ಪೋಟೊ ಹಾಕ್ತಿದ್ದಾರೆ. ಸಾವರ್ಕರ್ ದೇಶಕ್ಕಾಗಿ 27 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದಾರೆ. ಅದರಲ್ಲಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲೂ ಸಾವರ್ಕರ್ 100 ದಿನ ಇದ್ದರು ಎಂದು ಸಾವರ್ಕರ್ ಬಗ್ಗೆ ಪ್ರತಿಪಕ್ಷ ನಾಯಕರ ಹೇಳಿಗೆ ಶಾಸಕ ಬೆನಕೆ ತಿರುಗೇಟು ನೀಡಿದ್ದಾರೆ.
ಕಾಲಾಪಾನಿ ಶಿಕ್ಷೆ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಗೊತ್ತಿಲ್ಲ. ಸಾವರ್ಕರ್ ಬಗ್ಗೆ ಅವರು ಮಾತನಾಡಿದ್ರೆ ನಾವೂ ತಿರುಗೇಟು ನೀಡಬೇಕಾಗುತ್ತದೆ. ಸಾವರ್ಕರ್ ಬಗ್ಗೆ ಮಾತನಾಡುವ ಮೂಲಕ ಸಿದ್ದರಾಮಯ್ಯ ನಮ್ಮನ್ನು ಕೆಲಸಕ್ಕೆ ಹಚ್ಚಿದ್ದಾರೆ, ಒಳ್ಳೆಯದು. ಬರುವ ದಿನಗಳಲ್ಲಿ ರಾಣಿಚನ್ನಮ್ಮ, ಸಂಗೊಳ್ಳಿ ರಾಯಣ್ಣ ಪೋಟೊ ಕೂಡ ಹಂಚುತ್ತೇವೆ.
ಬೆಳಗಾವಿ ಹಿಂಡಲಗಾ ಜೈಲು ಮುಂದೆ ಸಾವರ್ಕರ್ ಪುತ್ಥಳಿ ನಿರ್ಮಾಣಕ್ಕೆ ಕ್ರಮ ವಹಿಸುತ್ತೇವೆ. ಹಿಂಡಲಗಾ ಪಂಚಾಯಿತಿ ಸದಸ್ಯರು, ನಮ್ಮ ಕಾರ್ಯಕರ್ತರ ಜೊತೆಗೆ ಚರ್ಚಿಸುತ್ತೇವೆ. ಹಿಂಡಲಗಾ ಪಂಚಾಯತಿ ಅನುಮತಿಯೊಂದಿಗೆ ಸಾವರ್ಕರ್ ಪುತ್ಥಳಿ ನಿರ್ಮಾಣವಾಗಲಿದೆ. ಬೆಳಗಾವಿಯ ಪ್ರಮುಖ ವೃತ್ತಗಳಿಗೆ ಸಾವರ್ಕರ್, ರಾಣಿ ಚೆನ್ನಮ್ಮ ಹೆಸರಿಡುತ್ತೇವೆ. ದಕ್ಷಿಣ ಭಾರತದಲ್ಲಿ ಮೊದಲು ಗಣೇಶೋತ್ಸವ ಆರಂಭವಾಗಿದ್ದು ಬೆಳಗಾವಿಯಲ್ಲಿ ಎಂಬುದು ಗಮನಾರ್ಹ ಸಂಗತಿ ಎಂದು ಅವರು ಹೇಳಿದರು.