ಬೆಳಗಾವಿ: ರೈತರ ವಿರೋಧದ ನಡುವೆಯೂ ಬೆಳಗಾವಿ ಜಿಲ್ಲೆಯ ಹಲಗಾ- ಮಚ್ಚೆ ಬೈಪಾಸ್ ರಸ್ತೆ ಕಾಮಗಾರಿ ಮುಂದುವರಿದಿದೆ. ಎರಡೇ ದಿನದಲ್ಲಿ ಎನ್‌ಎಚ್‌ಎಐ 5 ಕಿಲೋ ಮೀಟರ್ ಕಚ್ಚಾ ರಸ್ತೆ ನಿರ್ಮಾಣ ( Road Construction) ಮಾಡಿದೆ. ಬೆಳೆ ಇರುವ ಜಮೀನಿನಲ್ಲಿ ರಸ್ತೆ ಮಾಡುವುದಕ್ಕೆ ಬಿಡುವುದಿಲ್ಲ ಎಂದು ತೋಟದಲ್ಲಿ ಕುಳಿತು ಜಿಲ್ಲಾಡಳಿತದ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಆದರೆ ಇನ್ನೊಂದು ಕಡೆ ರಸ್ತೆ ನಿರ್ಮಾಣವಾಗುತ್ತಿದೆ.
ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಮದಿಂದ ಯಳ್ಳೂರ ಗ್ರಾಮದ ರಸ್ತೆ ವರೆಗೂ ರಸ್ತೆಯನ್ನು ಸಮತಟ್ಟು ಮಾಡಲಾಗಿದೆ. ಬೆಳೆ ಇರುವ ಪ್ರದೇಶದಲ್ಲಿ ರಸ್ತೆ ಕಾಮಗಾರಿ ಮಾಡಲು ಅವಕಾಶ ನೀಡಲ್ಲ ಎಂದು ಭತ್ತದ ಗದ್ದೆಯಲ್ಲಿ ಬೆಳೆಯ ಮಧ್ಯೆ ಕುಳಿತ ವಡಗಾವಿ ಗ್ರಾಮದ ಜಮೀನು ಮಾಲೀಕರು, ಮಕ್ಕಳು, ಮಹಿಳೆಯರು ಸೇರಿದಂತೆ ಕುಟುಂಬಸ್ಥರು ಧರಣಿ ನಡೆಸುತ್ತಿದ್ದಾರೆ.
ಜಮೀನು ಕೊಡುವುದಿಲ್ಲ ಎಂದು ವಡಗಾವಿ ಮೂಲದ ರೈತರ ಪಟ್ಟು
ಹಲಗಾ ಮಚ್ಚೆ ಬೈಪಾಸ್ ರಸ್ತೆ ಕಾಮಗಾರಿ ಆರಂಭವಾದ ಹಿನ್ನೆಲೆ ಜಮೀನಿನಲ್ಲಿ ಕುಟುಂಬ ಸಮೇತ ಆಗಮಿಸಿ ರೈತರು ಧರಣಿ ಕುಳಿತಿದ್ದಾರೆ. ಅಲ್ಲದೇ ಜಮೀನು ಉಳಿಸಿ ಎಂದು ರೈತ ಮಹಿಳೆಯರು ಕಣ್ಣೀರಿಟ್ಟಿದ್ದಾರೆ. ಕಾಮಗಾರಿ ಆರಂಭಿಸಿದನ್ನು ಪ್ರಶ್ನಿಸಿ ಧಾರವಾಡದ ಹೈಕೋರ್ಟ್ನಲ್ಲಿ ರೈತ ಪರ ವಕೀಲ ರವಿಕುಮಾರ್ ಗೋಕಾಕ್ ಪಿಐಎಲ್ ಹಾಕಿದ್ದಾರೆ.
ಇದನ್ನೂ ಓದಿ:
ಬೆಳಗಾವಿಯಲ್ಲಿ ಇನ್ನೂ ಆರದ ಭೂ ಸ್ವಾಧೀನ ಬೆಂಕಿ; ವಿರೋಧದ ನಡುವೆ ರಸ್ತೆ ಕಾಮಗಾರಿಗೆ ಮುಂದಾದ ಜಿಲ್ಲಾಡಳಿತ
ನೀವು ಹಣ ಕೊಡ್ತೀರಿ ಗಂಡಸರು ಕುಡಿದು ಹಾಳು ಮಾಡ್ತಾರೆ, ಜಮೀನು ಕೊಡಿಸಿ ಸ್ವಾಮಿ: ಬೆಳಗಾವಿ ಡಿಸಿಗೆ ಮಹಿಳೆಯರ ಆಗ್ರಹ
Published On - 12:25 pm, Sat, 13 November 21