ಚಿಕ್ಕೋಡಿ, ಅಕ್ಟೋಬರ್ 14: ಕಳೆದ ರಾತ್ರಿ ದುರ್ಗಾದೇವಿ (Durgadevi) ಮೂರ್ತಿ ವಿಸರ್ಜನೆ ಬಳಿಕ ಎರಡು ಕೋಮಿನ ನಡುವೆ ಗಲಾಟೆ ನಡೆದಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಗಲಾಟೆ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಲಘು ಲಾಠಿ ಚಾರ್ಜ್ ಮಾಡಿ ಜನರನ್ನು ಚದುರಿಸಿದರು. ಗಲಾಟೆಯಲ್ಲಿ ಮೂವರಿಗೆ ಗಾಯವಾಗಿದ್ದು, ಎರಡು ಬೈಕ್ ಹಾಗೂ ಕಾರು ಜಖಂಗೊಂಡಿದೆ.
ದುರ್ಗಾದೇವಿ ಮೂರ್ತಿ ವಿಸರ್ಜನೆ ಮುಗಿಸಿಕೊಂಡು ಬರುವಾಗ ಅಮಿತ ನಾಯಿಕ ಹಾಗೂ ಪೈರೋಜ್ ಎಂಬುವವರ ಮಧ್ಯೆ ಗಲಾಟೆ ಶುರುವಾಗಿದೆ. ಈ ವೇಳೆ ಅಲ್ಲಿಯೇ ಇದ್ದ ಮಸೀದಿಯ ಮೈಕ್ನಲ್ಲಿ ಅನ್ಯಕೋಮಿನ ಯುವಕರಿಂದ ನಮ್ಮವರ ಮೇಲೆ ಹಲ್ಲೆಯಾಗಿದೆ ಎಲ್ಲರೂ ಬನ್ನಿ ಎಂದು ಅನೌನ್ಸ್ ಮಾಡಲಾಗಿದೆ.
ಇದನ್ನೂ ಓದಿ: ನಾನು ಸಿಎಂ ಆದ್ರೆ ಪಾಕಿಸ್ತಾನ ಜಿಂದಾಬಾದ್ ಎನ್ನುವ ಮೊದಲೇ ಗುಂಡು ಹಾಕ್ತೀನಿ: ಯತ್ನಾಳ್
ಅನೌನ್ಸ್ನಿಂದ ಪ್ರಚೋದನೆಗೊಂಡ ಹಿಂದೂ ಮತ್ತು ಮುಸ್ಲಿಂ ಜನರು ಕೂಡಲೆ ಮಸೀದಿ ಬಳಿ ಸೇರಿದ್ದಾರೆ. ಎರಡು ಗುಂಪಿನ ಜನ ಸೇರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿ, ಜನರನ್ನು ಚದುರಿಸಿದ್ದಾರೆ. ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು, ಎರಡು ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿದೆ. ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ