ಅಕ್ರಮ ಸಂಬಂಧ: ಓಡಿ ಹೋದ ವಿವಾಹಿತ ಜೋಡಿ, ಗಂಡನ ಮನೆಯವರಿಂದ ಅಟ್ಟಹಾಸ, ಮನೆ ಪೀಸ್​ಪೀಸ್​​

| Updated By: ಸಾಧು ಶ್ರೀನಾಥ್​

Updated on: Feb 08, 2024 | 10:19 AM

jinrala village, Hukkeri: ಅವರಿಬ್ಬರು ಅಕ್ಕಪಕ್ಕದ ಕಾಲೋನಿಯ ನಿವಾಸಿಗಳು. ಆ ವಿವಾಹಿತರಿಬ್ಬರ ಪ್ರೀತಿ ಇದೀಗ ಕುಟುಂಬಸ್ಥರಿಗೆ ಫಜೀತಿ ತಂದೊಡ್ಡಿದೆ. ತಮ್ಮದಲ್ಲದ ತಪ್ಪಿಗೆ ಎಲ್ಲವನ್ನೂ ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಜಿನ್ರಾಳ ಗ್ರಾಮದಲ್ಲಿ.

ಅಕ್ರಮ ಸಂಬಂಧ: ಓಡಿ ಹೋದ ವಿವಾಹಿತ ಜೋಡಿ, ಗಂಡನ ಮನೆಯವರಿಂದ ಅಟ್ಟಹಾಸ, ಮನೆ ಪೀಸ್​ಪೀಸ್​​
ಅಕ್ರಮ ಸಂಬಂಧ, ಓಡಿ ಹೋದ ವಿವಾಹಿತ ಜೋಡಿ, ಮನೆ ಪೀಸ್​ಪೀಸ್​​
Follow us on

ಅವರಿಬ್ಬರಿಗೂ ಮದುವೆಯಾಗಿತ್ತು, ಮೇಲಾಗಿ ಮಕ್ಕಳು ಕೂಡ ಇದ್ದರು. ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಅವರಿಬ್ಬರು ಅಕ್ಕಪಕ್ಕದ ಕಾಲೋನಿಯ ನಿವಾಸಿಗಳು. ವಿವಾಹಿತರಿಬ್ಬರ ಪ್ರೀತಿ (Illicit relation) ಇದೀಗ ಕುಟುಂಬಸ್ಥರಿಗೆ ಫಜೀತಿ ತಂದೊಡ್ಡಿದೆ. ಬೆಳಗಾವಿಯಲ್ಲಿ ವಂಟಮೂರಿ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ಅಲ್ಲಿ ಮಹಿಳೆಯನ್ನ ಬೆತ್ತಲಾಗಿ ಥಳಿಸಲಾಗಿತ್ತು. ಆದರೆ ಇಲ್ಲಿ ಇಡೀ ಮನೆಯನ್ನೇ ಧ್ವಂಸ ಮಾಡಿ ಅಟ್ಟಹಾಸ ಮೆರೆಯಲಾಗಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು ಅಂತೀರಾ? ಈ ಸ್ಟೋರಿ ನೋಡಿ. ಈ ಘಟನೆ ನಡೆದಿರುವುದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಜಿನ್ರಾಳ ಗ್ರಾಮದಲ್ಲಿ (jinrala village, Hukkeri).

ಹೌದು ಇದೇ ಜಿನ್ರಾಳ ಗ್ರಾಮದ ನಿವಾಸಿ ಲಗಮನ್ನಾ ವಾಲಿಕಾರ್ ಎಂಬಾತ ಮೊನ್ನೆ ಮಂಗಳವಾರ ತನ್ನ ಮನೆಯ ಹಿಂದಿನ ಓಣಿಯಲ್ಲಿದ್ದ ರೇಣುಕಾ ವಾಲಿಕಾರ್ ಎಂಬಾಕೆಯನ್ನ ಕರೆದುಕೊಂಡು ಓಡಿ ಹೋಗಿದ್ದಾನೆ (elope). ಈ ವಿಚಾರ ತಿಳಿಯುತ್ತಿದ್ದಂತೆ ರೇಣುಕಾನ ಗಂಡ ಮತ್ತು ಕುಟುಂಬಸ್ಥರು ಸೇರಿ ನೂರಕ್ಕೂ ಅಧಿಕ ಜನ ಏಕಾಏಕಿ ಲಗಮನ್ನನ ಮನೆ ಮೇಲೆ ಅಟ್ಯಾಕ್ ಮಾಡಿ ಅಟ್ಟಹಾಸ ಮೆರೆದಿದ್ದಾರೆ.

ಅಷ್ಟಕ್ಕೂ ಇಲ್ಲಿ ಆಗಿದ್ದೇನೂ ಅನ್ನೋದನ್ನ ನೋಡೊದಾದ್ರೇ ಲಗಮನ್ನಾ ವಾಲಿಕಾರ 10 ವರ್ಷದ ಹಿಂದೆ ಬೇರೊಬ್ಬ ಮಹಿಳೆ ಜತೆಗೆ ಮದುವೆಯಾಗಿದ್ದ. ಒಂದು ಗಂಡು ಮಗು ಕೂಡ ಇದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಲಗಮನ್ನನಿಗೆ ಎರಡ್ಮೂರು ವರ್ಷದ ಹಿಂದೆ ಪಕ್ಕದ ಓಣಿಯ ಎರಡು ಮಕ್ಕಳ ತಾಯಿ ರೇಣುಕಾ ಪರಿಚಯ ಆಗಿರ್ತಾಳೆ. ಅದಾದ ಬಳಿಕ ಇಬ್ಬರ ನಡುವೆ ಸಂಬಂಧ ಬೆಳೆದು ಈ ವಿಚಾರ ವರ್ಷದ ಹಿಂದೆ ಮನೆಯವರಿಗೂ ಗೊತ್ತಾಗುತ್ತೆ.

ಈ ವೇಳೆ ರಾಜಿ ಪಂಚಾಯಿತಿ ಮಾಡಿ ಇಬ್ಬರನ್ನೂ ದೂರ ಮಾಡಿರುತ್ತಾರೆ, ಲಗಮನ್ನಿಗೆ ಬುದ್ದಿವಾದ ಹೇಳಿರ್ತಾರೆ. ಇಷ್ಟಾದರೂ ಇಬ್ಬರ ಮಾತುಕತೆ ಮುಂದುವರೆದಿದ್ದು ನಿನ್ನೆಯೂ ಇದೇ ವಿಚಾರಕ್ಕೆ ಗ್ರಾಮದ ಮುಖಂಡರು ಸೇರಿ ಮತ್ತೊಮ್ಮೆ ವಾರ್ನ್ ಮಾಡ್ತಾರೆ. ಯಾವಾಗ ಎಲ್ಲರೂ ತಮ್ಮನ್ನ ಬೇರೆ ಬೇರೆ ಮಾಡ್ತಿದ್ದಾರೆ ಅನ್ನೋ ವಿಚಾರ ಗೊತ್ತಾಯಿತೋ ಇಬ್ಬರು ಪ್ಲ್ಯಾನ್ ಮಾಡಿಕೊಂಡು ಸಂಜೆ ಓಡಿ ಹೋಗಿದ್ದಾರೆ ಎಂದು ಲಗಮನ್ನನ ತಾಯಿ ಶಾಂತವ್ವಾ ವಾಲಿಕಾರ್ ಮಾಹಿತಿ ನೀಡಿದ್ದಾರೆ.

ಇನ್ನು ಲಗಮನ್ನಾ ಮತ್ತು ರೇಣುಕಾ ಓಡಿ ಹೋದ ವಿಚಾರ ರೇಣುಕಾಳ ಗಂಡನ ಮನೆಯಲ್ಲಿ ಗೊತ್ತಾಗುತ್ತೆ. ಆಗ ಆಕ್ರೋಶಗೊಂಡ ರೇಣುಕಾಳ ಗಂಡ ದುಂಡಪ್ಪ ವಾಲಿಕಾರ್ ಮತ್ತು ಕುಟುಂಬಸ್ಥರು, ಸಂಬಂಧಿಕರು ಸೇರಿಕೊಂಡು ಲಗಮನ್ನನ ಮನೆಗೆ ಬರ್ತಾರೆ. ಸುಮಾರು 100 ಕ್ಕೂ ಅಧಿಕ ಜನ ಮಂಗಳವಾರ ಮೊನ್ನೆ ರಾತ್ರಿ ಏಕಾಏಕಿ ಲಗಮನ್ನನ ಮನೆಗೆ ನುಗ್ತಾರೆ.

ಇವರು ಬರುವ ವಿಚಾರ ತಿಳಿದು ಲಗಮನ್ನನ ತಾಯಿ, ಹೆಂಡತಿ ಮಗ, ಅಜ್ಜಿ ನಾಲ್ಕು ಜನ ಪಕ್ಕದ ಜಮೀನಿಗೆ ತೆರಳಿ ಅಲ್ಲಿ ಅಡಗಿ ಕುಳಿತುಕೊಂಡು ಜೀವ ಉಳಿಸಿಕೊಳ್ತಾರೆ. ಇತ್ತ ಮನೆ ಮೇಲೆ ಅಟ್ಯಾಕ್ ಮಾಡಿದ ದುಷ್ಕರ್ಮಿಗಳು ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ತಿಜೋರಿ, ಕುರ್ಚಿ, ಸೋಫಾ, ಪಾತ್ರೆ, ಎಲೆಕ್ಟ್ರಿಕಲ್ ವಸ್ತುಗಳು ಸೇರಿದಂತೆ ಮನೆಯಲ್ಲಿದ್ದ ಎಲ್ಲ ಸಾಮಾಗ್ರಿಗಳನ್ನ ಒಡೆದು ಹಾಕಿ ಹೊರ ಬಿಸಾಕಿದ್ದಾರೆ.

Also Read: ಕಾಫಿನಾಡು ಚಿಕ್ಕಮಗಳೂರಲ್ಲಿ ಡೆಂಘೀಗೆ ಮೊದಲ ಬಲಿ

ಜತೆಗೆ ಈ ವಿಚಾರವನ್ನು ಪೊಲೀಸರ ಮುಂದೆ ಹೇಳದಂತೆ ಅಕ್ಕಪಕ್ಕದ ಮನೆಯವರಿಗೂ ಧಮಕಿ ಹಾಕಿದ್ದಾರೆ. 112 ಗೆ ಸ್ಥಳೀಯರು ಕರೆ ಮಾಡ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸುವ ಕೆಲಸ ಮಾಡಿದ್ದಾರೆ. ಜತೆಗೆ ಕೆಲ ಆರೋಪಿಗಳನ್ನ ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಇಂದು ಸ್ಥಳಕ್ಕೆ ಭೇಟಿ ನೀಡಿದ ಗೋಕಾಕ್ ಡಿವೈಎಸ್ ಪಿ ಮತ್ತು ತಂಡ ಘಟನೆ ಕುರಿತು ಮಾಹಿತಿ ಪಡೆದು, ಪರಿಶೀಲನೆ ನಡೆಸಿದ್ದಾರೆ.

ಒಟ್ಟಿನಲ್ಲಿ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಮಗ ಹುಡುಗಿ ಜತೆಗೆ ಓಡಿ ಹೋದ ಅನ್ನೋ ಕಾರಣಕ್ಕೆ ಯುವಕನ ತಾಯಿ ಮೇಲೆ ಹಲ್ಲೆ ಮಾಡಿ ಬೆತ್ತಲೆ ಮಾಡಿದ ಪ್ರಕರಣ ಮಾಸುವ ಮುನ್ನವೇ ಜಿಲ್ಲೆಯ ಜನ ಬೆಚ್ಚಿ ಬೀಳುವಂತೆ ಈ ಘಟನೆ ನಡೆದಿದೆ. ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಕೊಡುವ ಕೆಲಸ ಮಾಡ್ತಿದ್ದು ಇದಕ್ಕೆ ಪೊಲೀಸರು ಕಡಿವಾಣ ಹಾಕುವ ಕೆಲಸ ಮಾಡಲಿ. ಇತ್ತ ಅಟ್ಟಹಾಸ ಮೆರೆದವರಿಗೆ ಕಠಿಣ ಶಿಕ್ಷೆ ಕೊಡಿಸಿ ಮನೆ ಸಾಮಾಗ್ರಿಗಳನ್ನ ಹಾಳು ಮಾಡಿದ್ದ ದುಷ್ಕರ್ಮಿಗಳಿಂದಲೇ ವಸೂಲಿ ಮಾಡಿಸಿಕೊಡುವ ಕೆಲಸ ಮಾಡಲಿ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ