ಬೆಳಗಾವಿ: ಪ್ರತಿಭಟಿಸುತ್ತಿದ್ದ ಬಿಜೆಪಿ ನಾಯಕರನ್ನು ಬಂಧಿಸುವಂತೆ ಕಾಂಗ್ರೆಸ್ ಕಾರ್ಯಕರ್ತೆಯರ ಪ್ರತಿಭಟನೆ!

ಬೆಳಗಾವಿ: ಪ್ರತಿಭಟಿಸುತ್ತಿದ್ದ ಬಿಜೆಪಿ ನಾಯಕರನ್ನು ಬಂಧಿಸುವಂತೆ ಕಾಂಗ್ರೆಸ್ ಕಾರ್ಯಕರ್ತೆಯರ ಪ್ರತಿಭಟನೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 07, 2024 | 6:05 PM

ಈ ಮೇಡಂ ಹೆಸರೇನು ಅಂತ ಗೊತ್ತಿಲ್ಲ, ಆದರೆ ಗಂಟಲು ಹರಿದುಹೋಗುವ ಹಾಗೆ ಕಿರುಚುತ್ತಾರೆ. ಅವರೊಂದಿಗೆ ಐದಾರು ಮಹಿಳೆಯರಿದ್ದಾರೆ. ಈ ಗುಂಪು ಯಾಕೆ ಪ್ರತಿಭಟನೆ ಮಾಡಿತ್ತಿದೆ ಗೊತ್ತಾ? ಬಿಜೆಪಿ ಕಾರ್ಯಕರ್ತರಿಗೆ ಪ್ರತಿಭಟನೆ ನಡೆಸಲು ಅವಕಾಶ ಕೊಟ್ಟರುವುದಕ್ಕೆ! ಮೇಡಂ ಪೊಲೀಸರ ಬಳಿ ಹೋಗಿ ಬಿಜೆಪಿ ಕಾರ್ಯಕರ್ತರನ್ನು ಕೂಡಲೇ ಬಂಧಿಸಿ ಅಂತ ರೋಪು ಹಾಕುತ್ತಿದ್ದಾರೆ!!

ಬೆಳಗಾವಿ: ಅಲ್ಲೊಂದು ಪ್ರತಿಭಟನೆ (protest) ಇಲ್ಲೊಂದು ಪ್ರತಿಭಟನೆ, ಇಲ್ಲೊಂದರ ವಿರುದ್ಧ ಮತ್ತೊಂದು ಪ್ರತಿಭಟನೆ. ಗೊಂದಲಕ್ಕೆ ಬಿದ್ರಾ? ಓಕೆ ನಿಮ್ಮ ಗೊಂದಲವನ್ನು ನಿವಾರಿಸುತ್ತೇವೆ. ಅನುದಾನ ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಅಂತ ಸಿದ್ದರಾಮಯ್ಯ (Siddaramaiah) ನೇತೃತ್ವದ ರಾಜ್ಯ ಸರ್ಕಾರ ಇವತ್ತು ದೆಹಲಿಯ ಜಂತರ್ ಮಂತರ್ ಮೈದಾನದಲ್ಲಿ ಪ್ರತಿಭಟನೆ ನಡೆಸಿತು. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಉಲ್ಲೇಖಿಸಿ ಕರ್ನಾಟಕ ಬಿಜೆಪಿ ಘಟಕದ (state BJP unit) ನಾಯಕರು ರಾಜ್ಯದ ನಾನಾ ಭಾಗಗಳಲ್ಲಿ ಪ್ರತಿಭಟನೆ ನಡೆಸಿದರು. ಕತೆ ಇಲ್ಲಿಗೆ ಮುಗಿಯಲ್ಲ. ಬೆಳಗಾವಿಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆ ವಿರುದ್ಧ ಜಿಲ್ಲಾ ಕಾಂಗ್ರೆಸ್ ಮಹಿಳಾ ಮೋರ್ಚಾ ಒಂದು ಪ್ರತಿಭಟನೆ ನಡೆಸಿತು! ಈ ಮೇಡಂ ಹೆಸರೇನು ಅಂತ ಗೊತ್ತಿಲ್ಲ ಮಾರಾಯ್ರೇ, ಆದರೆ ಗಂಟಲು ಹರಿದುಹೋಗುವ ಹಾಗೆ ಕಿರುಚುತ್ತಾರೆ. ಅವರೊಂದಿಗೆ ಐದಾರು ಮಹಿಳೆಯರಿದ್ದಾರೆ. ಈ ಗುಂಪು ಯಾಕೆ ಪ್ರತಿಭಟನೆ ಮಾಡಿತ್ತಿದೆ ಗೊತ್ತಾ? ಬಿಜೆಪಿ ಕಾರ್ಯಕರ್ತರಿಗೆ ಪ್ರತಿಭಟನೆ ನಡೆಸಲು ಅವಕಾಶ ಕೊಟ್ಟರುವುದಕ್ಕೆ! ಮೇಡಂ ಪೊಲೀಸರ ಬಳಿ ಹೋಗಿ ಬಿಜೆಪಿ ಕಾರ್ಯಕರ್ತರನ್ನು ಕೂಡಲೇ ಬಂಧಿಸಿ ಅಂತ ರೋಪು ಹಾಕುತ್ತಿದ್ದಾರೆ!!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ