ಮತ್ತೆ ನಾಡದ್ರೋಹಿ ಕೆಲಸಕ್ಕೆ ಕೈ ಹಾಕಿದ ಎಂಇಎಸ್; ಏಳು ಬೇಡಿಕೆಗಳ ಈಡೇರಿಸುವಂತೆ ಮಹಾರಾಷ್ಟ್ರ ಸಚಿವರಿಗೆ ಮನವಿ
ಕರ್ನಾಟಕದಲ್ಲಿ ಮಹಾರಾಷ್ಟ್ರದ ಆರೋಗ್ಯ ವಿಮೆ ಯೋಜನೆಗೆ ತಡೆ ಬೆನ್ನಲ್ಲೇ ಮತ್ತೆ ಎಂಇಎಸ್ ಮುಖಂಡರು ನಾಡದ್ರೋಹಿ ಕೆಲಸಕ್ಕೆ ಕೈಹಾಕಿದ್ದಾರೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಮಹಾರಾಷ್ಟ್ರ ಗಡಿ ಸಚಿವರನ್ನು ಭೇಟಿಯಾಗಿ ಆರೋಗ್ಯ ವಿಮೆ ಮರು ಜಾರಿ, ಮರಾಠಿ ಭಾಷೆ ಬಳಕೆ ಅವಕಾಶ ಸೇರಿದಂತೆ ಏಳು ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದ್ದಾರೆ.
ಬೆಳಗಾವಿ, ಫೆ.9: ಎಂಇಎಸ್ (MES) ಮುಖಂಡರು ಮತ್ತೆ ನಾಡದ್ರೋಹಿ ಕೆಲಸಕ್ಕೆ ಕೈಹಾಕಿದ್ದು, ಮಹಾರಾಷ್ಟ್ರ ಸಚಿವರನ್ನು ಭೇಟಿಯಾಗಿ ವಿವಿಧ ಬೇಡಿಕೆಗಳ ಈಡೇರಿಸುವಂತೆ ಮನವಿ ಮಾಡಿದ್ದಾರೆ. ಆರೋಗ್ಯ ವಿಮೆ ಮರು ಜಾರಿ, ಮರಾಠಿ ಭಾಷೆ ಬಳಕೆ ಅವಕಾಶ ಸೇರಿದಂತೆ ಏಳು ಬೇಡಿಕೆಗಳನ್ನು ಈಡೇರಿಸುವಂತೆ ಎಂಇಎಸ್ ರಮಾಕಾಂತ ಕೊಂಡೊಸ್ಕರ್ ಮತ್ತಿತರರು ಮಹಾರಾಷ್ಟ್ರ (Maharashtra) ಗಡಿ ಉಸ್ತುವಾರಿ ಸಚಿವ ಶುಂಭುರಾಜೆ ದೇಸಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಬೆಳಗಾವಿ ಗಡಿ ಭಾಗದಲ್ಲಿ ಮರಾಠಿ ಭಾಷೆ ಬಳಕೆ ಅವಕಾಶ ಕಲ್ಪಿಸಬೇಕು, ಗಡಿ ಭಾಗದ ಜನರಿಗೆ ಮರಾಠಿಯಲ್ಲಿ ದಾಖಲೆ ಪತ್ರ ಒದಗಿಸಬೇಕು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ ಮಧ್ಯೆ ಪ್ರವೇಶಿಸುವಂತೆ ಮಾಡಬೇಕು, ಮಹಾರಾಷ್ಟ್ರದ ಆರೋಗ್ಯ ವಿಮೆಗೆ ಮತ್ತೆ ಚಾಲನೆ ನೀಡುವುದು. ಈ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಜೊತೆ ಮಹಾರಾಷ್ಟ್ರ ಸರ್ಕಾರ ಚರ್ಚೆ ನಡೆಸಬೇಕು.
ಇದನ್ನೂ ಓದಿ: ಮಹಾರಾಷ್ಟ್ರ: ಸಿಎಂ ಶಿಂಧೆ ಬಣದ ಮುಖಂಡನ ಮೇಲೆ ಬಿಜೆಪಿ ಶಾಸಕನ ಬೆಂಬಲಿಗರಿಂದ ಗುಂಡಿನ ದಾಳಿ
ಬೆಳಗಾವಿ ನಗರದ ಪಕ್ಕದ ಶಿನ್ನೊಳ್ಳಿಯಲ್ಲಿ ತಹಶೀಲ್ದಾರ್ ಮಟ್ಟದ ಅಧಿಕಾರಿ ಕಚೇರಿ ಆರಂಭಿಸಬೇಕು, ಮರಾಠಿಗರಿಗೆ ಆಗುತ್ತಿರುವ ಸಮಸ್ಯೆ ಇತ್ಯರ್ಥಕ್ಕೆ ಸಹಕಾರಿಯಾಗಬೇಕು, ಕರ್ನಾಟಕದಲ್ಲಿ ಮಹಾರಾಷ್ಟ್ರದ ಆರೋಗ್ಯ ವಿಮೆಗೆ ಮತ್ತೆ ಚಾಲನೆ ನೀಡಬೇಕು ಎಂದು ಒತ್ತಾಯಿಸಲಾಗಿದೆ. ಎಂಇಎಸ್ ನಡೆಯನ್ನು ಕನ್ನಡ ಪರಸಂಘಟನೆಗಳು ಖಂಡಿಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:54 am, Fri, 9 February 24