ಹಣ ನೀಡುವಂತೆ ಚಿನ್ನದ ಅಂಗಡಿ ಮಾಲೀಕನಿಗೆ ಕಿರುಕುಳ;10 ಲಕ್ಷ ರೂ ಪಡೆಯುವಾಗ ಪೊಲೀಸರ ಬಲೆಗೆ ಬಿದ್ದ ಐಟಿ ಅಧಿಕಾರಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 13, 2023 | 3:24 PM

ಹಣ ನೀಡುವಂತೆ ಚಿನ್ನದ ಅಂಗಡಿ ಮಾಲೀಕನಾದ ಚಿಕ್ಕೋಡಿ ತಾಲೂಕಿನ ಅಂಕಲಿಯ ಪರುಶುರಾಮ ಬಂಕಾಪುರ ಎಂಬುವವರಿಗೆ ಐಟಿ ಅಧಿಕಾರಿ ಅವಿನಾಶ್ ಟೊನಪೆ ಅವರು ಕಿರುಕುಳ ಕೊಟ್ಟಿದ್ದು, ಬರೊಬ್ಬರಿ 10 ಲಕ್ಷ ಹಣಕ್ಕಾಗ ಭೇಡಿಕೆಯಿಟ್ಟಿದ್ದರು. ಈ ಹಣವನ್ನು ತೆಗೆದುಕೊಳ್ಳುವಾಗ ರೆಡ್​ಹ್ಯಾಂಡ್​ ಆಗಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಹಣ ನೀಡುವಂತೆ ಚಿನ್ನದ ಅಂಗಡಿ ಮಾಲೀಕನಿಗೆ ಕಿರುಕುಳ;10 ಲಕ್ಷ ರೂ ಪಡೆಯುವಾಗ ಪೊಲೀಸರ ಬಲೆಗೆ ಬಿದ್ದ ಐಟಿ ಅಧಿಕಾರಿ
ಪ್ರಾತಿನಿಧಿಕ ಚಿತ್ರ
Follow us on

ಬೆಳಗಾವಿ, ಅ.13: ಬೆಳಗಾವಿ(Belagavi) ಮಹಾನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದು, ಸಿನಿಮೀಯ ರೀತಿಯಲ್ಲಿ ಪ್ಲ್ಯಾನ್ ಮಾಡುವ ಮೂಲಕ ಐಟಿ ಅಧಿಕಾರಿಯನ್ನೇ(IT Officers)  ಖೆಡ್ಡಾಕ್ಕೆ ಕೆಡವಿದ್ದಾರೆ. ಹೌದು, ಹಣ ನೀಡುವಂತೆ ಚಿನ್ನದ ಅಂಗಡಿ ಮಾಲೀಕನಾದ ಚಿಕ್ಕೋಡಿ ತಾಲೂಕಿನ ಅಂಕಲಿಯ ಪರುಶುರಾಮ ಬಂಕಾಪುರ ಎಂಬುವವರಿಗೆ ಐಟಿ ಅಧಿಕಾರಿ ಅವಿನಾಶ್ ಟೊನಪೆ ಅವರು ಕಿರುಕುಳ ಕೊಟ್ಟಿದ್ದು, ಬರೊಬ್ಬರಿ 10 ಲಕ್ಷ ಹಣಕ್ಕಾಗ ಭೇಡಿಕೆಯಿಟ್ಟಿದ್ದರು. ಈ ಹಣವನ್ನು ತೆಗೆದುಕೊಳ್ಳುವಾಗ ಬೆಳಗಾವಿ ಮಾರ್ಕೆಟ್ ವಿಭಾಗದ ಎಸಿಪಿ ನಾರಾಯಣ ಭರಮನಿ ನೇತೃತ್ವದಲ್ಲಿ ದಾಳಿ ಮಾಡಿ, ಆತನನ್ನು ಹಣದ ಸಮೇತ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಸಿನಿಮೀಯ ರೀತಿಯಲ್ಲಿ ಗಾಂಜಾ ಪೆಡ್ಲರ್ಸ್ ಅರೆಸ್ಟ್

ಆನೇಕಲ್: ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಸಿನಿಮೀಯ ರೀತಿಯಲ್ಲಿ ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ನಡೆದಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒರಿಸ್ಸಾ ಮೂಲದವರಾದ ಸುಜಿತ್ ರಾವತ್(22), ಕಾಗೇಶ್ವರ ನಾಯಕ್(33) ಹಾಗೂ ಅರುಣಾಚಲ‌ ಮೂಲದ ಮನೋಜ್ ದಾಮಯ್ (27) ಎಂಬುವವರನ್ನು ಬಂಧಿಸಲಾಗಿದೆ. ಇವರಿಂದ 10 ಕೆಜಿ  70 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:ಮೈಸೂರಿನಲ್ಲಿ ಐಟಿ ಅಧಿಕಾರಿಗಳ ದಾಳಿ, ಮನೆಯಾಂಗಳದ ಗಿಡದಲ್ಲಿಟ್ಟಿದ್ದ 1 ಕೋಟಿ ರೂ. ಹಣ ಪತ್ತೆ

ಸಿನಿಮೀಯ ರೀತಿಯಲ್ಲಿ ಪ್ಲ್ಯಾನ್ ಮಾಡಿದ್ದ ಪೊಲೀಸರು

ಹೌದು, ಖಚಿತ ಮಾಹಿತಿ ಮೇರೆಗೆ ಕೊಪ್ಪ ಗೇಟ್ ಐಶ್ವರ್ಯ ಗೋಲ್ಡನ್ ನೆಸ್ಟ್ ಬಳಿ ದಾಳಿ ಮಾಡಿದ ಪೊಲೀಸರು, ಗಾಂಜಾ ಖರೀದಿ ಮಾಡಲು ಗ್ರಾಹಕರ ರೀತಿ ಕ್ರೈಂ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಆರೋಪಿ ಗಾಂಜಾ ಪಾಕೆಟ್‌ ನೀಡುತ್ತಿದ್ದಂತೆ ರೆಡ್ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದಾರೆ. ಇನ್ನು ಇವರು ಒರಿಸ್ಸಾದಿಂದ ಟ್ರೈನ್ ಮೂಲಕ ಗಾಂಜಾ ತರಿಸುತ್ತಿದ್ದರು. ಕಾಲೇಜು ವಿಧ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು, ಬೆಂಗಳೂರು ಹೊರವಲಯದ ಕಾಲೇಜುಗಳ ಬಳಿ ಮಾರಾಟ ಮಾಡುತ್ತಿದ್ದರು. ಇದೀಗ ಈ ಕುರಿತು ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ