ಬೆಳಗಾವಿ: ಅಂಜನಾದ್ರಿ ಕ್ಷೇತ್ರ (Anjanadri hill) ಅಭಿವೃದ್ಧಿಗೆ (development) 140 ಕೋಟಿ ಅನುದಾನ ನೀಡಿದ್ದೇವೆ. ಬೆಟ್ಟದ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಈ ಹಿಂದೆ ಹೇಳಿದ್ದರು. ಸದ್ಯ ಇದೀಗ ಫೆ. 15ರಂದು ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಸಿಎಂ ಬೊಮ್ಮಾಯಿ ಅಡಿಗಲ್ಲು ಸ್ಥಾಪನೆ ಮಾಡಲಿದ್ದಾರೆ. ಪ್ರವಾಸೋದ್ಯಮ ಇಲಾಖೆ ಸಚಿವ ಆನಂದ್ ಸಿಂಗ್ ನೇತೃತ್ವದಲ್ಲಿ ಇಂದು (ಡಿ.22) ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯ 100 ಕೋಟಿ ರೂಪಾಯಿ, KKRDBಯ 40 ಕೋಟಿ ಅನುದಾನದಲ್ಲಿ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ನಿರ್ಧಾರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸ್ಟೀಲ್ ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿ ಮಾಡಲಾಗುತ್ತಿದ್ದು, ಕೊಪ್ಪಳದಲ್ಲಿ ಹೊಸದಾಗಿ ಏರ್ಪೋರ್ಟ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಅಂಜನಾದ್ರಿ ಕ್ಷೇತ್ರ ಅಭಿವೃದ್ಧಿಗೆ 60 ಎಕರೆ ಜಮೀನು ಸ್ವಾಧ್ವೀನಕ್ಕೆ ಅಗತ್ಯವಿತ್ತು. ಆದರೆ ಇದೀಗ 72 ಎಕರೆ ಅಗತ್ಯವಿದೆ ಎನ್ನಲಾಗುತ್ತಿದೆ. ಇದರಲ್ಲಿ ಪಾರ್ಕಿಂಗ್ ಮತ್ತು 600 ವಸತಿ ಗೃಹ, ಮಾಹಿತಿ ಕೇಂದ್ರ ಸೇರಿದಂತೆ ನಾನಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಭಿವೃದ್ದಿ ನೆಪದಲ್ಲಿ ನೈಸರ್ಗಿಕವಾಗಿ ಕಾಪಾಡಿಕೊಂಡು ಬಂದಿರುವ ಸಂಪತ್ತನ್ನು ಸರ್ಕಾರ ನಾಶಪಡಿಸುವ ಉದ್ದೇಶ ಹೊಂದಿದ್ದೆ ಎಂದು ಗ್ರಾಮಸ್ಥರು ಈ ಹಿಂದೆ ವಿರೋಧಿಸಿದ್ದರು.
ಗಂಗಾವತಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಅಂಜನಾದ್ರಿ ಬೆಟ್ಟದಲ್ಲಿ ಅನ್ಯ ಧರ್ಮೀಯರ ವ್ಯಾಪಾರಕ್ಕೆ ವಿರೋಧ ವಿಚಾರವಾಗಿ ಈಗಾಗಲೇ ಮನವಿ ಕೊಟ್ಟಿದ್ದರು. ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಏನೆಲ್ಲಾ ವ್ಯವಸ್ಥೆ ಮಾಡಿಕೊಳ್ಳಬೇಕೋ ಅದನ್ನ ಮಾಡುತ್ತೇನೆ. ಅನ್ಯ ಧರ್ಮಿಯರು ವ್ಯಾಪಾರ ಮಾಡುತ್ತಿದ್ದರೆ ಅದನ್ನು ಖಂಡಿಸುತ್ತೇನೆ. ಆದಷ್ಟು ನಮ್ಮ ಧರ್ಮದವರಿಗೆ ಅನುಕೂಲ ಆಗುವ ರೀತಿ ಮಾಡಿಕೊಡುತ್ತೇನೆ ಎಂದಿದ್ದರು.
ಇದನ್ನೂ ಓದಿ: ಅಂಜನಾದ್ರಿ ಬೆಟ್ಟದಲ್ಲಿ ಪೂಜೆ ಸಲ್ಲಿಸುವ ಹಟಕ್ಕೆ ಬಿದ್ದ ಸಾಧು, ಅಧಿಕಾರಿಗಳಿಗೆ ಬಲಪ್ರಯೋಗಿಸುವ ಅನಿವಾರ್ಯತೆ!
ಗಂಗಾವತಿ ತಾಲೂಕಿನಲ್ಲಿರುವ ಹನುಮ ಜನ್ಮಸ್ಥಳ ಐತಿಹಾಸಿಕ ಅಂಜನಾದ್ರಿಯಲ್ಲಿಂದು ಹನುಮ ಮಾಲೆ ವಿಸರ್ಜನೆ ಹಿನ್ನಲೆ ಅಂಜನಾದ್ರಿಯಲ್ಲಿ ಈ ಭಾರಿ ಹಿಂದೂಗಳನ್ನು ಹೊರತುಪಡಿಸಿ ವ್ಯಾಪಾರ ವಹಿವಾಟು ನೆಡಸದಂತೆ ಜಿಲ್ಲಾಧಿಕಾರಿಗೆ ಹಿಂದೂ ಜಾಗರಾಣ ವೇದಿಕೆ ಮನವಿ ಮಾಡಿತ್ತು. ಹೀಗಾಗಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟಿತ್ತು. ಇದರ ಹೊರತಾಗಿ ಇಂದು ಮುಸ್ಲಿಂ ವರ್ತಕರು ವ್ಯಾಪಾರ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಶಶಿಕಲಾ ಜೊಲ್ಲೆಯವರು ಹೇಳಿದ್ದರು.
ಇದನ್ನೂ ಓದಿ: ಗಂಗಾವತಿ: ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿ ವಿದೇಶಿ ಪ್ರಜೆಗಳಿಂದ ರಾಮ ಜಪ
ಇನ್ನು ಇತ್ತೀಚೆಗೆ ಅಂಜನಾದ್ರಿ ಬೆಟ್ಟಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬೆಳಿಗ್ಗೆ 7.40 ಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇತ್ತೀಚಿಗಷ್ಟೇ ಅಂಜನಾದ್ರಿಯಲ್ಲಿ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ನಡೆದಿತ್ತು. ಇನ್ನು ರಾಜ್ಯಪಾಲರ ಆಗಮನ ಹಿನ್ನೆಲೆ ಅಂಜನಾದ್ರಿ ಬೆಟ್ಟದಲ್ಲಿ ಬೀಗಿ ಪೋಲಿಸ್ ಭದ್ರತೆ ಆಯೋಜಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:59 pm, Thu, 22 December 22