ಉಡುಪಿ: ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟ ನಿಜಕ್ಕೂ ದುರದೃಷ್ಟಕರ. ಸಂಗೊಳ್ಳಿ ರಾಯಣ್ಣ ಕನ್ನಡದ ಅಸ್ಮಿತೆಯನ್ನು ಪ್ರತಿನಿಧಿಸುತ್ತಾರೆ. ಶಿವಾಜಿ ಮಹಾರಾಜರು ಕೇವಲ ಮರಾಠಿಗರಿಗೆ ಸೀಮಿತರಲ್ಲ. ಶಿವಾಜಿ ಮಹಾರಾಜ ನಿಜವಾಗಿಯೂ ಮಹಾನ್ ರಾಷ್ಟ್ರ ಭಕ್ತ. ಎಂಇಎಸ್ನವರು 2 ಬಾರಿ ಈ ರೀತಿ ಗಲಾಟೆ ಮಾಡುತ್ತಾರೆ. ಕನ್ನಡ ರಾಜ್ಯೋತ್ಸವ, ಅಧಿವೇಶನದ ವೇಳೆ ಗಲಾಟೆ ಮಾಡ್ತಾರೆ. ಸರ್ಕಾರ ಕಠಿಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಕಸಾಪದಲ್ಲಿ ಕನ್ನಡ, ಮರಾಠಿ ಭಾಷೆ ತಿಳಿದಿರುವ ಸಮಿತಿ ರಚನೆ ಮಾಡಲಾಗುವುದು. ಕರ್ನಾಟಕ, ಮಹಾರಾಷ್ಟ್ರ ಕಡೆ ಸೇವೆ ಸಲ್ಲಿಸಿರೋರ ಸಮಿತಿ ರಚನೆ ಮಾಡಲಾಗುವುದು. ನ್ಯಾಯಮೂರ್ತಿ ಬನ್ನೂರು ಮಠ ಸೇರಿದಂತೆ ಹಿರಿಯರ ಸಮಿತಿಗೆ ಚಿಂತನೆ ಮಾಡಲಾಗಿದೆ ಎಂದು ಉಡುಪಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಎಂಇಎಸ್ ಪುಂಡರ ದಾಳಿಯನ್ನು ನಾನು ಖಂಡಿಸುತ್ತೇನೆ. ಪ್ರತಿಮೆಗಳು ನಮ್ಮ ಅಸ್ಮಿತೆಯ ಪ್ರತೀಕ. ಸಂಗೊಳ್ಳಿ ರಾಯಣ್ಣ ಸ್ವಾತಂತ್ರ ಹೋರಾಟಗಾರ. ರಾಯಣ್ಣ ಕಿತ್ತೂರಿನ ರಾಣಿಯ ಬಲಗೈ ಬಂಟನಾಗಿದ್ದ. ಸಂಗೊಳ್ಳಿ ರಾಯಣ್ಣ ಕನ್ನಡ ಆಸ್ಮಿತೆಯನ್ನು ಪ್ರತಿನಿಧಿಸುತ್ತಾರೆ. ಶಿವಾಜಿ ಮಹಾರಾಜರು ಮರಾಠಿಗಳಿಗೆ ಸೀಮಿತರಲ್ಲ. ಅವರು ಮಹಾನ್ ರಾಷ್ಟ್ರ ಭಕ್ತರಾಗಿದ್ದರು. ಯಾರೇ ಅಗಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನ ಮಾಡಿರುವುದು ಅಕ್ಷಮ್ಯ ಅಪರಾಧ. ಎಂಇಎಸ್ ನವರು ಎರಡು ಸಲ ಈ ಥರ ಗಲಾಟೆ ಮಾಡುತ್ತಾರೆ. ಕನ್ನಡ ರಾಜ್ಯೋತ್ಸವ ಮತ್ತು ಅಧಿವೇಶನದ ವೇಳೆ ಗಲಾಟೆ ಮಾಡುತ್ತಾರೆ. ಸರ್ಕಾರ ಇನ್ನು ಮುಂದೆ ಕಠಿಣವಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸಂಘರ್ಷದ ಹಾದಿ ಹಿಡಿದ್ರೆ ಸಮಸ್ಯೆ ಪರಿಹಾರ ಅಗಲ್ಲ. ಸಮನ್ವಯತೆ ಬರಬೇಕು, ಭಾವನಾತ್ಮಕವಾಗಿ ನಂಬಿಕೆ ಎರಡು ಕಡೆಯೂ ಬೆಳೆಯಬೇಕು. ನಾವು ಬೆಳಗಾವಿ ಹೋಗಿ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ಮತ್ತು ಮರಾಠಿ ಭಾಷೆ ತಿಳಿದಿರುವ ಸಮಿತಿ ರಚನೆ ಮಾಡುತ್ತೇವೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ಕಡೆಯಲ್ಲಿ ಸೇವೆ ಸಲ್ಲಿಸಿರುವ ಸಮಿತಿ ರಚನೆ ಮಾಡುತ್ತೇವೆ. ಎರಡೂ ಕಡೆಯಲ್ಲೂ ಅವರ ಮಾತಿಗೆ ಬೆಲೆ ಇರುವ ಹಿರಿಯರನ್ನು ಸೇರಿಸಿ ಸಮಿತಿ ರಚನೆ ಮಾಡುತ್ತೇವೆ. ನ್ಯಾಯಮೂರ್ತಿ ಬನ್ನೂರು ಮಠ ಸೇರಿದಂತೆ ಹಿರಿಯರನ್ನು ಸೇರಿಸಿ ಸಮಿತಿ ರಚಿಸಲು ಚಿಂತಿಸಿದ್ದೇವೆ. ಹಿರಿಯರ ಸಮಿತಿಯ ಮಾರ್ಗದರ್ಶನದಲ್ಲಿ ಎರಡು ಕಡೆಯವರನ್ನು ಸೇರಿಸಿ ಮಾತುಕತೆ ನಡೆಸುತ್ತೇವೆ. ಇಲ್ಲಿಯವರೆಗೆ ಪುಂಡಾಟ ಮಾಡಿರುವಂತದ್ದು ಅಕ್ಷ್ಯಮ ಅಪರಾಧ. ಮುಂದೆ ಈ ರೀತಿಯ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ಸರ್ಕಾರದ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ ಕೈ ಜೋಡಿಸುತ್ತದೆ. ಸರ್ಕಾರದ ಕೈ ಬಲಪಡಿಸುವ ಕಾರ್ಯ ಮಾಡುತ್ತದೆ. ಸರ್ಕಾರ ಮೌನ ವಹಿಸಬಾರದು, ಜವಾಬ್ದಾರಿಯುತವಾಗಿ ವರ್ತಿಸಬೇಕು. ಸಮಸ್ಯೆಗೆ ಪರಿಹಾರ ಇದ್ದೇ ಇದೆ. ಸಮಸ್ಯೆ ಪರಿಹಾರವಾಗಬೇಕಾದರೆ ಚಟುವಟಿಕೆಯಿಂದ ಕೂಡಿದ ಸರ್ಕಾರ ಇರಬೇಕು. ಸರ್ಕಾರದ ಮೌನವನ್ನು ನಾವು ಸಹಿಸುವುದಿಲ್ಲ. ಸಮಸ್ಯೆ ಉಂಟಾದ ಸಂದರ್ಭದಲ್ಲಿ ಸಮಸ್ಯೆಯನ್ನು ಬಗೆಹರಿಸಬೇಕು. ಕಬ್ಬಿಣ ಕಾದಿರುವಾಗಲೇ ಹೊಡೆಯುವ ಕೆಲಸ ಅಗಬೇಕು. ಕನ್ನಡ, ಕನ್ನಡಿಗರು, ಕರ್ನಾಟಕಕ್ಕೆ ಯಾವುದೇ ರೀತಿಯ ಧಕ್ಕೆಯಾದರೆ ಕನ್ನಡ ಪರಿಷತ್ ಬೀದಿಗೆ ಇಳಿದು ಹೋರಾಟ ನಡೆಸುತ್ತದೆ ಎಂದು ಉಡುಪಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಹೇಳಿದ್ದಾರೆ.
ಇದನ್ನೂ ಓದಿ: ನಾಡಿನ ಶಾಂತಿ ಕದಡುವ ಎಂಇಎಸ್ ಪುಂಡರ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸ್ ದಾಖಲಿಸಬೇಕು; ಸದನದಲ್ಲಿ ಜೆಡಿಎಸ್ ಒತ್ತಾಯ