ಬೆಳಗಾವಿ: ಗಣೇಶ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ಉಂಟಾಗಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಇರಿದು ಕೊಲೆ ಮಾಡಿರುವಂತಹ ಘಟನೆ ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ನಡೆದಿದೆ. ಅರ್ಜುನಗೌಡ ಪಾಟೀಲ್(20) ಹತ್ಯೆಗೊಳಗಾದ ವ್ಯಕ್ತಿ. ಅರ್ಜುನಗೌಡ ಕುಸಿದು ಬೀಳ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಪ್ರಕರಣ ಸಂಬಂಧ ನಾಲ್ಕು ಜನರನ್ನ ಮುರಗೋಡ ಪೊಲೀಸರು ಬಂಧಿಸಿದ್ದಾರೆ. ಉದಯ್ ಭನದ್ರೋಲಿ(21), ಸುಭಾಷ್ ಸೋಲನ್ನವರ್(21), ವಿಠ್ಠಲ ಮೀಸಿ(20), ಓರ್ವ ಬಾಲಕ ಸೇರಿ ನಾಲ್ವರು ಬಂಧಿತರು. ಪಕ್ಕದ ಊರಲ್ಲಿ ಅಡಗಿ ಕುಳಿತಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
34 ಅಡಿ ಎತ್ತರದ ಗಣಪತಿ ವಿಸರ್ಜನೆ ವೇಳೆ ದುರಂತ: ಓರ್ವ ದುರ್ಮರಣ
ವಿಜಯನಗರ: ಗಣೇಶ ಮೂರ್ತಿ ವಿರ್ಸಜನೆ ವೇಳೆ ಭಾರಿ ಅವಘಡ ಸಂಬಂಧಿಸಿದ್ದು, ಗಣೇಶ ಮೂರ್ತಿ ಸಮೇತ ಕಾಲುವೆಗೆ ಕ್ರೇನ್ ಪಲ್ಟಿ ಹೊಡೆದಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಇನ್ನೊಬ್ಬನಿಗೆ ಗಂಭೀರ ಗಾಯವಾಗಿರುವಂತ ಘಟನೆ ಹೊಸಪೇಟೆಯ ಟಿಬಿ ಡ್ಯಾಂನ ಹೊರವಲಯದ ಕಾಲುವೆಯ ಬಳಿ ಕಳೆದ ಮದ್ಯರಾತ್ರಿ 1.25 ರ ಸುಮಾರಿಗೆ ನಡೆದಿದೆ. ಅಶೋಕ್ (18) ಸಾವನ್ನಪ್ಪಿದ್ದು, ಸಾಯಿ ನಿಖಿಲ್ ( 18) ಗಂಭೀರ ಗಾಯವಾಗಿದೆ. ಗಾಯಾಳು ಸಾಯಿ ನಿಖಿಲ್ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕ್ರೇನ್ನಿಂದ ಮೃತದೇಹ ಮತ್ತು ಗಾಯಾಳುಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದಿದ್ದಾರೆ. ಮೃತಪಟ್ಟ ಯುವಕ ಮತ್ತು ಗಾಯಾಳು ಟಿಬಿ ಡ್ಯಾಂ ಕ್ಯಾಂಪ್ ನಿವಾಸಿಗಳು. ಹೊಸಪೇಟೆ ಡಿವೈಎಸ್ಪಿ ವಿಶ್ವನಾಥ್ ರಾವ್ ಕುಲಕರ್ಣಿ, ಪಿಐಗಳಾದ ಹುಲುಗಪ್ಪ, ಶ್ರೀನಿವಾಸ್ ಮೇಟಿ ಸ್ಥಳದಲ್ಲೆ ಮೊಕ್ಕಾಂ ಹುಡಿದ್ದರು. ಕಾಲುವೆಗೆ ಬಿದ್ದಿರೋ ಕ್ರೇನ್ ಹೊರ ತೆಗೆಯಲು 2 ಕ್ರೇನ್ಗಳಿಂದ ಯತ್ನಿಸಲಾಗಿದೆ. ವಿಜಯನಗರ ಜಿಲ್ಲೆಯ ಟಿಬಿ ಡ್ಯಾಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಮದ್ಯದ ಬಾಟಲ್ಗಳನ್ನ ತುಂಬಿಕೊಂಡು ಹೋಗುತ್ತಿದ್ದ ಲಾರಿ ಡಿಕ್ಕಿ
ರಾಮನಗರ: ಸಿಂಗ್ರಭೋವಿದೊಡ್ಡಿ ಬಳಿ ನೂತನ ದಶಪಥ ಹೆದ್ದಾರಿಯಲ್ಲಿ ಮದ್ಯದ ಬಾಟಲ್ಗಳನ್ನ ತುಂಬಿಕೊಂಡು ಹೋಗುತ್ತಿದ್ದ ಲಾರಿ ಅಪಘಾತವಾಗಿರುವಂತಹ ಘಟನೆ ನಡೆದಿದೆ. ಹೆದ್ದಾರಿ ಪಕ್ಕದ ಗ್ರಿಲ್ ಪೆನ್ಸಿಂಗ್ಗೆ ಲಾರಿ ಡಿಕ್ಕಿ ಹೊಡೆದಿದ್ದು, ಮೈಸೂರಿನಿಂದ ಬೆಂಗಳೂರಿಗೆ 1,150 ಕೇಸ್ ಮದ್ಯ ತೆಗೆದುಕೊಂಡು ಲಾರಿ ಹೋಗುತ್ತಿತ್ತು. ರಾಮನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮಳೆಯಿಂದ ಮನೆ ಗೋಡೆ ಕುಸಿದು ಮಹಿಳೆಗೆ ಗಂಭೀರ ಗಾಯ
ಕಲಬುರಗಿ: ಮಳೆಯಿಂದ ಮನೆ ಗೋಡೆ ಕುಸಿದು ಮಹಿಳೆಗೆ ಗಂಭೀರ ಗಾಯವಾಗಿರುವಂತಹ ಘಟನೆ ಯಡ್ರಾಮಿ ತಾಲೂಕಿನ ತೆಲಗಬಾಳ ಗ್ರಾಮದಲ್ಲಿ ನಡೆದಿದೆ. ರಾತ್ರಿ ಏಕಾಏಕಿ ಮನೆ ಗೋಡೆ, ಮೇಲ್ಚಾವಣಿ ಕುಸಿದುಬಿದ್ದಿದೆ. ಮಹಾಂತೇಶ್ ಸಜ್ಜನ್ ಎಂಬುವರಿಗೆ ಸೇರಿದ ಮನೆ ಕುಸಿತವಾಗಿದೆ. ಮನೆಯಲ್ಲಿದ್ದ ಶಿಲ್ಪಾ ಎಂಬುವರಿಗೆ ಗಾಯವಾಗಿದ್ದು, ಉಳಿದವರು ಬಚಾವ್ ಆಗಿದೆ. ಮೇಲ್ಚಾವಣಿ ಕುಸಿಯುತ್ತಿದ್ದಂತೆ ತಕ್ಷಣ ಕುಟುಂಬಸ್ಥರು ಹೊರಬಂದಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.