ಬೆಳಗಾವಿ: ಅಕ್ಟೋಬರ್ 23 ಮತ್ತು 24ರಂದು ಕಿತ್ತೂರು ಉತ್ಸವ ಆಯೋಜಿಸಲು ತೀರ್ಮಾನಿಸಿದ್ದೇವೆ ಎಂದು ಸಚಿವ ಗೋವಿಂದ ಕಾರಜೋಳ ಘೋಷಿಸಿದರು. ಕಿತ್ತೂರು ಉತ್ಸವ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಿತ್ತೂರು ಉತ್ಸವಕ್ಕೆ ಒಂದು ಕೋಟಿ ಅನುದಾನ ಒದಗಿಸುತ್ತೇವೆ. ಕೊರೊನಾ ನಿಯಮ ಪಾಲಿಸಿ ಉತ್ಸವ ಆಚರಿಸೋಣ ಎಂದು ತಿಳಿಸಿದರು.
ಎರಡು ದಿನ ಕಿತ್ತೂರು ಉತ್ಸವವನ್ನು ಎಲ್ಲ ಕಲಾವಿದರನ್ನು ಸೇರಿಸಿ ನಡೆಸೋಣ. ಕಿತ್ತೂರು ಗತವೈಭವದ ಅನಾವರಣ ಮಾಡುವಂತೆ ಉತ್ಸವ ಮಾಡೋಣ. 25ನೇ ಉತ್ಸವವನ್ನು ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸೋಣ ಎಂದು ಅವರು ತಿಳಿಸಿದರು.
ಇದನ್ನೂ ಓದಿ:
ಬೆಳಗಾವಿಯ ಸುವರ್ಣ ಸೌಧದಲ್ಲೇ ಚಳಿಗಾಲದ ಅಧಿವೇಶನ: ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ