ಇನ್ನೆರಡು ದಿನಗಳಲ್ಲಿ ಜಾರಕಿಹೊಳಿ ಸಹೋದರದ್ವಯರಿಂದ ಸುದ್ದಿಗೋಷ್ಠಿ; ಮಹತ್ವದ ವಿಷಯ ಘೋಷಣೆ ಸಾಧ್ಯತೆ

| Updated By: guruganesh bhat

Updated on: Jul 01, 2021 | 4:23 PM

Ramesh Jarkiholi: ರಮೇಶ್ ಜಾರಕಿಹೊಳಿ‌ ಮರಳಿ ಮಂತ್ರಿ ಆಗಬೇಕೆಂದು ನಮ್ಮೆಲ್ಲರ ಆಸೆ. ಪಕ್ಷದಲ್ಲಿರುವ ಕೆಲವರು ಬೆನ್ನಿಗೆ ಚೂರಿ ಹಾಕಿದ ಬಗ್ಗೆ ಗೊತ್ತಿಲ್ಲ, ಅವರೇ ಮಾತನಾಡಿದ್ದಾರೆ. ರಮೇಶ್ ಜಾರಕಿಹೊಳಿಯವರನ್ನೇ ಸಚಿವರನ್ನಾಗಿ ಮಾಡಲು ಪ್ರಯತ್ನ ಮಾಡುತ್ತೇವೆ ಎಂದು ಗೋಕಾಕ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ತಿಳಿಸಿದರು.

ಇನ್ನೆರಡು ದಿನಗಳಲ್ಲಿ ಜಾರಕಿಹೊಳಿ ಸಹೋದರದ್ವಯರಿಂದ ಸುದ್ದಿಗೋಷ್ಠಿ; ಮಹತ್ವದ ವಿಷಯ ಘೋಷಣೆ ಸಾಧ್ಯತೆ
ಬಾಲಚಂದ್ರ ಜಾರಕಿಹೊಳಿ
Follow us on

ಬೆಳಗಾವಿ: ನಾನು ಸಚಿವ ಸ್ಥಾನಕ್ಕೆ ಕ್ಲೇಮ್ ಮಾಡಿಲ್ಲ. ನನ್ನ ಪಾಡಿಗೆ ನಾನು ಕೆಎಂಎಫ್ ಅಧ್ಯಕ್ಷನಾಗಿ ಮತ್ತು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಯಾರೂ ಸಹ ನನಗೆ ಸಚಿವ ಸ್ಥಾನ ಆಫರ್ ಮಾಡಿಲ್ಲ. ನಾಳೆ ಶಾಸಕ ರಮೇಶ್ ಜಾರಕಿಹೊಳಿ‌ ಗೋಕಾಕ್‌ಗೆ ಆಗಮಿಸಲಿದ್ದು, ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿ ಕೆಲವು ವಿಷಯಗಳನ್ನು ಸ್ಪಷ್ಟಪಡಿಸುತ್ತೇವೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಸ್ಪಷ್ಟಪಡಿಸಿದರು.

ದೆಹಲಿಯಿಂದ ಬೆಂಗಳೂರಿಗೆ ರಮೇಶ್ ಜಾರಕಿಹೊಳಿ‌ ವಾಪಸ್ ಆಗಿದ್ದಾರೆ. ರಾಜಕಾರಣದಲ್ಲಿ ಅಸಮಾಧಾನ, ಬೇಜಾರು ಇದ್ದೇ ಇರುತ್ತದೆ. ಆದರೆ ಅದರಿಂದ ಅಂತಹ ಸಮಸ್ಯೆಯಾಗಿಲ್ಲ. ರಮೇಶ್ ಜಾರಕಿಹೊಳಿ‌ ಮರಳಿ ಮಂತ್ರಿ ಆಗಬೇಕೆಂದು ನಮ್ಮೆಲ್ಲರ ಆಸೆ. ಪಕ್ಷದಲ್ಲಿರುವ ಕೆಲವರು ಬೆನ್ನಿಗೆ ಚೂರಿ ಹಾಕಿದ ಬಗ್ಗೆ ಗೊತ್ತಿಲ್ಲ, ಅವರೇ ಮಾತನಾಡಿದ್ದಾರೆ. ರಮೇಶ್ ಜಾರಕಿಹೊಳಿಯವರನ್ನೇ ಸಚಿವರನ್ನಾಗಿ ಮಾಡಲು ಪ್ರಯತ್ನ ಮಾಡುತ್ತೇವೆ ಎಂದು ಗೋಕಾಕ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ತಿಳಿಸಿದರು.

ದೆಹಲಿಯಲ್ಲಿ ಸುಳಿವು ನೀಡಿದ್ದ ಶಾಸಕ ರಮೇಶ್ ಜಾರಕಿಹೊಳಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೆಲ ದಿನಗಳ ಹಿಂದೆ ಮಾತನಾಡಿದ್ದ ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ, ‘ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಬಂದಿದ್ದೇನೆ. ನಾಳೆ ಸಂಜೆವರೆಗೂ ದೆಹಲಿಯಲ್ಲೇ ಇರುತ್ತೇನೆ. ನಾಳೆ ಮಾಧ್ಯಮಗಳೊಂದಿಗೆ ಮಾತನಾಡುತ್ತೇನೆ’ ಎಂದು ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ತಿಳಿಸಿದ್ದರು. ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಸಲಹೆಯಂತೆ ಶಾಸಕ ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಹೇಳಲಾಗಿತ್ತು.  ಇದೇ ವೇಳೆ ಮಾತನಾಡಿದ್ದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನಗೆ ರಾಜಕೀಯ ವಿರೋಧಿ, ಆತನ ಸವಾಲನ್ನು ಎದುರಿಸಬಲ್ಲೆ. ಆದರೆ ಬಿಜೆಪಿಯ ಮೂವರು ನನಗೆ ದ್ರೋಹ ಬಗೆದಿದ್ದಾರೆ. ಮೂವರ ಹೆಸರನ್ನು ಬಹಿರಂಗ ಮಾಡುವ ಸಮಯ ಬರುತ್ತದೆ. ಜೊತೆಯಲ್ಲಿದ್ದೇ ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಬಿದ್ದವನ ಮೇಲೆ ಆಳಿಗೊಂದು ಕಲ್ಲು ಹೊಡೆಯುತ್ತಿದ್ದಾರೆ. ಎಲ್ಲರ ಷಡ್ಯಂತ ಬಯಲಿಗೆಳೆಯುವ ಕಾಲ ಬಂದೆ ಬರಲಿದೆ ಎಂದು ಅವರು ಸ್ವಪಕ್ಷಿಯ ವಿರುದ್ದವೇ ಹೆಚ್ಚು ಅಸಮಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: 

ಸಿಡಿ ಪ್ರಕರಣದಿಂದ ಹೊರಬರದಂತೆ ಚಕ್ರವ್ಯೂಹ ರಚಿಸಿದ್ದಾರೆ; ಸ್ವಪಕ್ಷೀಯರ ವಿರುದ್ಧ ರಮೇಶ್ ಜಾರಕಿಹೊಳಿ ಕಿಡಿ

ಬೆಂಗಳೂರು ನಗರಕ್ಕೆ ಎಷ್ಟು ಶೌಚಾಲಯ ಬೇಕು? ಕೊರತೆ ಎಷ್ಟು? ಮಾಹಿತಿ ನೀಡಲು ಹೈಕೋರ್ಟ್ ಸೂಚನೆ

(KMF President Balachandra Jarkiholi clarrifies he have not been offered any ministerial position)

Published On - 4:10 pm, Thu, 1 July 21