AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಡಿ ಪ್ರಕರಣದಿಂದ ಹೊರಬರದಂತೆ ಚಕ್ರವ್ಯೂಹ ರಚಿಸಿದ್ದಾರೆ; ಸ್ವಪಕ್ಷೀಯರ ವಿರುದ್ಧ ರಮೇಶ್ ಜಾರಕಿಹೊಳಿ ಕಿಡಿ

ಆದಷ್ಟು ಬೇಗ ತನಿಖೆ ಮುಗಿಸಿ ಕ್ಲೀನ್ ಚಿಟ್ ಕೊಡಿಸಲು ಮನವಿ ಮಾಡಿದ ರಮೇಶ್, ನನಗೆ ಕ್ಲೀನ್ ಚಿಟ್ ಸಿಕ್ಕ ಬಳಿಕ ಸಚಿವ ಸ್ಥಾನವನ್ನು ಕೊಡಿಸಿ. ಈ ಬಗ್ಗೆ ಹೈಕಮಾಂಡ್ ಜತೆ ಮಾತನಾಡಿ ಎಂದು ಫಡ್ನವಿಸ್ಗೆ ಮನವಿ ಮಾಡಿದ್ದಾರೆ.

ಸಿಡಿ ಪ್ರಕರಣದಿಂದ ಹೊರಬರದಂತೆ ಚಕ್ರವ್ಯೂಹ ರಚಿಸಿದ್ದಾರೆ; ಸ್ವಪಕ್ಷೀಯರ ವಿರುದ್ಧ ರಮೇಶ್ ಜಾರಕಿಹೊಳಿ ಕಿಡಿ
ರಮೇಶ್​ ಜಾರಕಿಹೊಳಿ
Follow us
TV9 Web
| Updated By: sandhya thejappa

Updated on: Jun 30, 2021 | 9:12 AM

ದೆಹಲಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈಗಾಗಲೇ ದೆಹಲಿಗೆ ತಲುಪಿದ್ದು, ಸ್ವಪಕ್ಷೀಯರ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಸಿಡಿ ಪ್ರಕರಣದಿಂದ ಹೊರಬರದಂತೆ ಚಕ್ರವ್ಯೂಹ ರಚಿಸಿದ್ದಾರೆ. ವಿಪಕ್ಷಗಳ ಜೊತೆಗೆ ಸ್ವಪಕ್ಷೀಯರೂ ಖೆಡ್ಡಾ ತೋಡಿದ್ದಾರೆ. ನನ್ನ ರಾಜಕೀಯ ಜೀವನ ಅಂತ್ಯಕ್ಕೆ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಶಾಸಕ ರಮೇಶ್ ಜಾರಕಿಹೊಳಿ ದೇವೇಂದ್ರ ಫಡ್ನವಿಸ್​ಗೆ ದೂರು ಹೇಳಿದ್ದಾರೆ. ಸಿಡಿ ಪ್ರಕರಣ 15 ದಿನದಲ್ಲಿ ಮುಕ್ತಾಯ ಆಗುತ್ತೆಂದು ಹೇಳಿದ್ದರು. ನಾನು ಮತ್ತೆ ಸಚಿವನಾಗುತ್ತೇನೆ ಎಂದು ಭರವಸೆ ನೀಡಿದ್ದರು. ಸಿಡಿ ಪ್ರಕರಣದ ತನಿಖೆಯನ್ನು ಬೇಗ ಮುಗಿಸದೆ ವಿಳಂಬ ಮಾಡುತ್ತಿದ್ದಾರೆ. ವಿಪಕ್ಷಗಳ ಜತೆ ನಮ್ಮವರು ಸೇರಿಕೊಂಡು ಸಂಚು ರೂಪಿಸುತ್ತಿದ್ದಾರೆ ಎಂದು ದೇವೇಂದ್ರ ಫಡ್ನವಿಸ್ ಭೇಟಿ ವೇಳೆ ರಮೇಶ್ ಜಾರಕಿಹೊಳಿ ಹೇಳಿದರು.

ಆದಷ್ಟು ಬೇಗ ತನಿಖೆ ಮುಗಿಸಿ ಕ್ಲೀನ್ ಚಿಟ್ ಕೊಡಿಸಲು ಮನವಿ ಮಾಡಿದ ರಮೇಶ್, ನನಗೆ ಕ್ಲೀನ್ ಚಿಟ್ ಸಿಕ್ಕ ಬಳಿಕ ಸಚಿವ ಸ್ಥಾನವನ್ನು ಕೊಡಿಸಿ. ಈ ಬಗ್ಗೆ ಹೈಕಮಾಂಡ್ ಜತೆ ಮಾತನಾಡಿ ಎಂದು ಫಡ್ನವಿಸ್ಗೆ ಮನವಿ ಮಾಡಿದ್ದಾರೆ. ನಿನ್ನೆ (ಜೂನ್ 29) ಸಂಜೆ ದೇವೇಂದ್ರ ಫಡ್ನವಿಸ್ ಭೇಟಿಯಾಗಿದ್ದ ರಮೇಶ್ ಜಾರಕಿಹೊಳಿ, ಇಂದು ಕೂಡ ದೆಹಲಿಯಲ್ಲೇ ಇದ್ದು ಬಿ.ಎಲ್.ಸಂತೋಷ್, ಅರುಣ್ ಸಿಂಗ್ ಭೇಟಿಯಾಗುವ ಸಾಧ್ಯತೆಯಿದೆ.

ಜುಲೈ ಒಂದರ ಬಳಿಕ ಸುದ್ದಿಗೋಷ್ಠಿ ಸಾಧ್ಯತೆ ಜುಲೈ 1ರಂದು ಗೋಕಾಕ್‌ನಲ್ಲಿ ಕೊವಿಡ್ ವಿರುದ್ಧ ಹೋರಾಡಿದ ವೈದ್ಯರಿಗೆ ಸನ್ಮಾನ ಸಮಾರಂಭ ನಡೆಯಲಿದ್ದು ಅದರಲ್ಲಿ ರಮೇಶ್​ ಪಾಲ್ಗೊಳ್ಳಲಿದ್ದಾರೆ. ಗೋಕಾಕ್ ಮತ್ತು ಮೂಡಲಗಿ ಕ್ಷೇತ್ರದ ವೈದ್ಯರಿಗೆ ಸನ್ಮಾನ ನಡೆಯಲಿದೆ. ಸಮಾರಂಭದಲ್ಲಿ ಭಾಗಿಯಾಗಲಿರುವ ರಮೇಶ್ ಜಾರಕಿಹೊಳಿ‌ ಮತ್ತು ಬಾಲಚಂದ್ರ ಜಾರಕಿಹೊಳಿ ಜುಲೈ ಒಂದರ ಬಳಿಕ ಜಾರಕಿಹೊಳಿ‌ ಬ್ರದರ್ಸ್ ಜಂಟಿ ಸುದ್ದಿಗೋಷ್ಠಿಗೆ ನಿರ್ಧರಿಸಿದ್ದಾರೆ  ಎಂದು ಜಾರಕಿಹೊಳಿ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

ಇದನ್ನೂ ಓದಿ

ಬಿಜೆಪಿಯ ಮೂವರು ನನಗೆ ದ್ರೋಹ ಬಗೆದಿದ್ದಾರೆ; ದೆಹಲಿಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಕಿಡಿ

Karnataka BJP: ಯೋಗೇಶ್ವರ್ -ಯತ್ನಾಳ್ ರಹಸ್ಯ ಭೇಟಿ, ರಮೇಶ್ ಜಾರಕಿಹೊಳಿ ದಿಢೀರ್‌ ದೆಹಲಿಗೆ; ಬಿಜೆಯಲ್ಲಿ ಮತ್ತೆ ತಳಮಳ

(Ramesh Jarkiholi has complained to Devendra Fadnavis against BJP Leaders)

Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ