ಬಿಜೆಪಿಯ ಮೂವರು ನನಗೆ ದ್ರೋಹ ಬಗೆದಿದ್ದಾರೆ; ದೆಹಲಿಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಕಿಡಿ

ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಸಲಹೆಯಂತೆ ಶಾಸಕ ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ. 

ಬಿಜೆಪಿಯ ಮೂವರು ನನಗೆ ದ್ರೋಹ ಬಗೆದಿದ್ದಾರೆ; ದೆಹಲಿಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಕಿಡಿ
ರಮೇಶ್​ ಜಾರಕಿಹೊಳಿ
Follow us
TV9 Web
| Updated By: guruganesh bhat

Updated on:Jun 29, 2021 | 4:33 PM

ದೆಹಲಿ: ಮಾಜಿ ಸಚಿವ, ರಮೇಶ್ ಜಾರಕಿಹೊಳಿ ರಾಷ್ಟ್ರ ರಾಜಧಾನಿ ದೆಹಲಿ ತಲುಪಿದ್ದಾರೆ. ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಬಂದಿದ್ದೇನೆ. ನಾಳೆ ಸಂಜೆವರೆಗೂ ದೆಹಲಿಯಲ್ಲೇ ಇರುತ್ತೇನೆ. ನಾಳೆ ಮಾಧ್ಯಮಗಳೊಂದಿಗೆ ಮಾತನಾಡುತ್ತೇನೆ ಎಂದು ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ತಿಳಿಸಿದ್ದಾರೆ. ಮಹಾರಾಷ್ಟ್ರ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಸಲಹೆಯಂತೆ ಶಾಸಕ ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಬಿಜೆಪಿ ಹೈಕಮಾಂಡ್ ಭೇಟಿ ಮಾಡಿ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ.  ಇದೇ ವೇಳೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನಗೆ ರಾಜಕೀಯ ವಿರೋಧಿ, ಆತನ ಸವಾಲನ್ನು ಎದುರಿಸಬಲ್ಲೆ. ಆದರೆ ಬಿಜೆಪಿಯ ಮೂವರು ನನಗೆ ದ್ರೋಹ ಬಗೆದಿದ್ದಾರೆ. ಮೂವರ ಹೆಸರನ್ನು ಬಹಿರಂಗ ಮಾಡುವ ಸಮಯ ಬರುತ್ತದೆ. ಜೊತೆಯಲ್ಲಿದ್ದೇ ನನ್ನ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ. ಬಿದ್ದವನ ಮೇಲೆ ಆಳಿಗೊಂದು ಕಲ್ಲು ಹೊಡೆಯುತ್ತಿದ್ದಾರೆ. ಎಲ್ಲರ ಷಡ್ಯಂತ ಬಯಲಿಗೆಳೆಯುವ ಕಾಲ ಬಂದೆ ಬರಲಿದೆ ಎಂದು ಅವರು ಸ್ವಪಕ್ಷಿಯ ವಿರುದ್ದವೇ ಹೆಚ್ಚು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು‌ ನಿರ್ಧರಿಸಿದ್ದ ರಮೇಶ್ ಜಾರಕಿಹೊಳಿ‌ ಅವರನ್ನು ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸುವಲ್ಲಿ ಸಹೋದರರಾದ ಬಾಲಚಂದ್ರ ಮತ್ತು ಲಖನ್ ಜಾರಕಿಹೊಳಿ‌ ಯಶಸ್ವಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನೇರವಾಗಿ ಅವರು ಇಂದು ಸಿಎಂ ಬಿಎಸ್‌ ಯಡಿಯೂರಪ್ಪ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಭೇಟಿಗೂ ರಮೇಶ್ ನಿರ್ಧರಿಸಿದ್ದರಾದರೂ ನಳಿನ್‌ಕುಮಾರ್ ಕಟೀಲ್ ಅವರ ಸಹೋದರ ಮೃತಪಟ್ಟ ಹಿನ್ನೆಲೆ ಕೊನೆ ಕ್ಷಣದಲ್ಲಿ ನಳಿನ್‌ಕುಮಾರ್ ಕಟೀಲ್ ಭೇಟಿ ರದ್ದು ಮಾಡಲಾಗಿದೆ.

ಎಸ್​ಐಟಿ ಮುಖ್ಯಸ್ಥರ ರಜೆ ಅವಧಿ ಮತ್ತೆ ವಿಸ್ತರಣೆಗೊಂಡಿದೆ. ಈಗಾಗಲೇ ರಜೆಯಲ್ಲಿರುವ ಸೌಮೆಂದು ಮುಖರ್ಜಿ ಮತ್ತೆ ಒಂದು ತಿಂಗಳು ರಜೆಯನ್ನು ವಿಸ್ತರಿಸಿಕೊಂಡಿದ್ದಾರೆ.

ಜುಲೈ ಒಂದರ ಬಳಿಕ ಜಾರಕಿಹೊಳಿ‌ ಬ್ರದರ್ಸ್ ಜಂಟಿ ಸುದ್ದಿಗೋಷ್ಠಿ? ಈ ಮಧ್ಯೆ, ಸಹೋದರರಾದ ಬಾಲಚಂದ್ರ ಮತ್ತು ಲಖನ್ ಜಾರಕಿಹೊಳಿ‌ ಅವರುಗಳು ರಮೇಶ್ ಜಾರಕಿಹೊಳಿ‌ ಜೊತೆಯೇ ಇದ್ದು, ಅವರ ಮನವೊಲಿಕೆ ಕಾರ್ಯ ನಿರಂತರ ಜಾರಿಯಲ್ಲಿಟ್ಟಿದ್ದಾರೆ. ಸಿಎಂ ಯಡಿಯೂರಪ್ಪ ಭೇಟಿ ಬಳಿಕ ಇಂದು ಕೆಲ ಆಪ್ತರು, ಸ್ನೇಹಿತರ ಜೊತೆ ರಮೇಶ್ ಜಾರಕಿಹೊಳಿ‌ ಸಮಾಲೋಚನೆ ನಡೆಸಲಿದ್ದಾರೆ. ಅದಾದ ಮೇಲೆ ನಾಳೆ ರಾತ್ರಿ ಗೋಕಾಕ್‌ಗೆ ವಾಪಸ್ ಆಗಲಿದ್ದಾರೆ ಎಂದು ತಿಳಿದುಬಂದಿದೆ‌.

ಜುಲೈ 1ರಂದು ಗೋಕಾಕ್‌ನಲ್ಲಿ ಕೊವಿಡ್ ವಿರುದ್ಧ ಹೋರಾಡಿದ ವೈದ್ಯರಿಗೆ ಸನ್ಮಾನ ಸಮಾರಂಭ ನಡೆಯಲಿದ್ದು ಅದರಲ್ಲಿ ರಮೇಶ್​ ಪಾಲ್ಗೊಳ್ಳಲಿದ್ದಾರೆ. ಗೋಕಾಕ್ ಮತ್ತು ಮೂಡಲಗಿ ಕ್ಷೇತ್ರದ ವೈದ್ಯರಿಗೆ ಸನ್ಮಾನ ನಡೆಯಲಿದೆ. ಸಮಾರಂಭದಲ್ಲಿ ಭಾಗಿಯಾಗಲಿರುವ ರಮೇಶ್ ಜಾರಕಿಹೊಳಿ‌ ಮತ್ತು ಬಾಲಚಂದ್ರ ಜಾರಕಿಹೊಳಿ ಜುಲೈ ಒಂದರ ಬಳಿಕ ಜಾರಕಿಹೊಳಿ‌ ಬ್ರದರ್ಸ್ ಜಂಟಿ ಸುದ್ದಿಗೋಷ್ಠಿಗೆ ಪ್ಲ್ಯಾನ್ ಮಾಡಿದ್ದಾರೆ ಎಂದು ಜಾರಕಿಹೊಳಿ ಕುಟುಂಬದ ಆಪ್ತ ಮೂಲಗಳು ತಿಳಿಸಿವೆ.

ಇದನ್ನೂ ಓದಿ: 

ಸುದ್ದಿ ವಿಶ್ಲೇಷಣೆ: ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ, ಕಾಂಗ್ರೆಸ್​ನಲ್ಲಿ ಈಗಲೇ ಹಲವಾರು ಮುಖ್ಯಮಂತ್ರಿಗಳು!

ಪ್ರವಾಸಿಗರಿಗಾಗಿ ಹೊನ್ನಾವರ-ಗೇರಸೊಪ್ಪಾ ಜಲಯಾನ ಯೋಜನೆ; ಇತಿಹಾಸದ ಕಾಲಗರ್ಭದಿಂದ ಇಲ್ಲಿಯವರೆಗೆ..

(MLA Ramesh Jarkiholi reachs Delhi is likely to turn Karnataka Politics)

Published On - 3:40 pm, Tue, 29 June 21