ತೃತೀಯ ರಂಗ: ಪವಾರ್ ಮತ್ತ ರಾವತ್​ರಂತೆ ಕಾಂಗ್ರೆಸ್ ಇಲ್ಲದೆ ಪರ್ಯಾಯ ರಂಗ ರಚಿಸಲಾಗದು ಎಂದ ತೇಜಸ್ವೀ ಯಾದವ್

ಪ್ರಾದೇಶಿಕ ಪಕ್ಷಗಳು ಶಕ್ತಿಯುತವಾಗಿರುವ ಸ್ಥಳಗಳಲ್ಲಿ ಕಾಂಗ್ರೆಸ್ ಅವರನ್ನು ಲೀಡ್ ಮಾಡಬೇಕಾಗುತ್ತದೆ ಎಂದು, ಬಿಹಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ಯಾದವ್ ಹೇಳಿದ್ದಾರೆ. ಸಮಯದ ಅಭಾವ ಇರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಸಂಘಟನೆ ಕೆಲಸ ಕೂಡಲೇ ಆರಂಭವಾಗಬೇಕು ಎಂದು ಅವರು ಹೇಳಿದ್ದಾರೆ.

ತೃತೀಯ ರಂಗ: ಪವಾರ್ ಮತ್ತ ರಾವತ್​ರಂತೆ ಕಾಂಗ್ರೆಸ್ ಇಲ್ಲದೆ ಪರ್ಯಾಯ ರಂಗ ರಚಿಸಲಾಗದು ಎಂದ ತೇಜಸ್ವೀ ಯಾದವ್
ತೇಜಸ್ವೀ ಯಾದವ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 29, 2021 | 11:59 PM

ನವದೆಹಲಿ: 2024ರಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್ ಇಲ್ಲದ ವಿರೋಧ ಪಕ್ಷವನ್ನು (ತೃತೀಯ ರಂಗ) ಕಲ್ಪಿಸಿಕೊಳ್ಳವುದೂ ಸಾಧ್ಯವಿಲ್ಲ ಎಂದು ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದ್ದಾರೆ. ಚುನಾವಣೆ ನಡೆಯುವ 543 ಕ್ಷೇತ್ರಗಳ ಪೈಕಿ 200ರಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿ ಜೊತೆ ನೇರವಾಗಿ ಸೆಣಸಲಿರುವುದರಿಂದ ವಿರೋಧ ಪಕ್ಷಗಳ ಸಂಘಟನೆಯಲ್ಲಿ ಕಾಂಗ್ರೆಸ್ ಭಾಗವಾಗಿರಲೇಬೇಕು ಎಂದು ಯಾದವ್ ಅಭಿಪ್ರಾಯ ಪಡುತ್ತಾರೆ. ತೃತೀಯ ರಂಗ ಸ್ಥಾಪನೆಯಾಗಬೇಕಾದರೆ ಕಾಂಗ್ರೆಸ್ ಆದರ ತಳಹದಿಯಾಗಿರಬೇಕು ಎಂದು ಎನ್​ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಯಾದವ್ ಹೇಳಿದ್ದಾರೆ.

‘ವಿರೋಧ ಪಕ್ಷಗಳ ಒಕ್ಕೂಟ ಸಾಧ್ಯವಾಗಬೇಕಾದರೆ ಕಾಂಗ್ರೆಸ್ ಅದರ ಭಾಗವಾಗಿರಲೇಬೇಕು. ಆ ಪಕ್ಷದ ತಳಹದಿಯ ಮೇಲೆ ಒಕ್ಕೂಟದ ರಚನೆಯಾಗಬೇಕು. ಚುನಾವಣೆ ನಡೆಯುವ 543 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ಜೊತೆ 200 ಕ್ಷೇತ್ರಗಳಲ್ಲಿ ನೇರವಾಗಿ ಹೋರಾಡಲಿದೆ ಎಂಬ ಅಂಶವನ್ನು ಕಡೆಗಣಿಸಬಾರದು,’ ಎಂದು ತೇಜಸ್ವೀ ಯಾದವ್ ಹೇಳಿದ್ದಾರೆ.

ಪ್ರಾದೇಶಿಕ ಪಕ್ಷಗಳು ಶಕ್ತಿಯುತವಾಗಿರುವ ಸ್ಥಳಗಳಲ್ಲಿ ಕಾಂಗ್ರೆಸ್ ಅವರನ್ನು ಲೀಡ್ ಮಾಡಬೇಕಾಗುತ್ತದೆ ಎಂದು, ಬಿಹಾರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ಯಾದವ್ ಹೇಳಿದ್ದಾರೆ. ಸಮಯದ ಅಭಾವ ಇರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಸಂಘಟನೆ ಕೆಲಸ ಕೂಡಲೇ ಆರಂಭವಾಗಬೇಕು ಎಂದು ಅವರು ಹೇಳಿದ್ದಾರೆ.

‘ತಯಾರಿಗಳು ಈಗಲೇ ಆರಂಭವಾಗಬೇಕು. ಕಾಂಗ್ರೆಸ್ ಇಲ್ಲದ ಯಾವುದೇ ರಂಗವನ್ನು ನಾವು ಊಹಿಸುವುದು ಸಾಧ್ಯವಿಲ್ಲ. ನಾಯಕತ್ವದ ವಿಷಯಕ್ಕೆ ಬಂದರೆ, ನಾವೆಲ್ಲ ಸೇರಿ ಒಂದು ನಿರ್ಣಯ ತೆಗೆದುಕೊಳ್ಳಬೇಕಿದೆ. ದೇಶದ ಹಿತಕ್ಕೋಸ್ಕರ ಮತ್ತು ಅದರ ಉತ್ತಮ ಭವಿಷ್ಯಕ್ಕಾಗಿ ತ್ಯಾಗಗಳನ್ನು ಮಾಡುವ ಪ್ರಸಂಗ ಬಂದರೆ ಯಾರೂ ಹಿಂಜರಿಯಬಾರದು,’ ಎಂದು ತೇಜಸ್ವೀ ಅವರು ಹೇಳಿದ್ದು ವಿರೋಧ ಪಕ್ಷಗಳ ಸಂಘಟನೆಯಲ್ಲಿ ಕಾಂಗ್ರೆಸ್​ ರಾಜಿ ಮಾಡಿಕೊಳ್ಳಬೇಕಾಗುವುದನ್ನು ಸೂಚಿಸುವಂತಿತ್ತು.

ಕಾಂಗ್ರೆಸ್ ಬಿಟ್ಟರೆ ಯಾರು ತೃತೀಯ ರಂಗದ ನಾಯಕತ್ವ ವಹಿಸಿಕೊಳ್ಳಬಹುದು ಎಂದು ಕೇಳಿದ ಪ್ರಶ್ನೆಗೆ ತೇಜಸ್ವೀ ಅವರು, ‘ಎಲ್ಲರೂ ಜೊತೆಗೂಡಿ ಮಾತುಕತೆಗೆ ಕೂತಾಗಲೇ ನಾವು ನಾಯಕತ್ವದ ಚರ್ಚೆ ನಡೆಸಬಹುದು. ಹಾಗೆ ನೋಡಿದರೆ ತಮ್ಮ ನಾಯಕರನ್ನು ಆಯ್ಕೆ ಮಾಡೋದು ಜನರು. ಯಾರಿಗೆ ಹೆಚ್ಚು ಬೆಂಬಲ ಸಿಗಲಿದೆ ಎನ್ನವುದನ್ನು ನಾವು ಕಾದು ನೋಡಬೇಕಾಗುತ್ತದೆ,’ ಎಂದು ಹೇಳಿದರು.

ಬಿಹಾರ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಖ್ಯ ಕಟ್ಟಿಕೊಂಡು ಆರ್​ಜೆಡಿ ಪಕ್ಷ ಹಿನ್ನಡೆ ಅನುಭವಿಸಿದರೂ ಅವರು ಈಗ ಮಾತಾಡುತ್ತಿರುವುದು ಆಗಿನ ಸ್ಥಿತಿಗೆ ತದ್ವಿರುದ್ಧವಾಗಿದೆ. ತೇಜಸ್ವೀ ನೇತೃತ್ವದ ವಿರೋಧ ಪಕ್ಷಗಳ ಮೈತ್ರಿಯು ನಿತಿಶ್ ಕುಮಾರ ನೇತೃತ್ವದ ಬಿಜೆಪಿ (ಎನ್​ಡಿಎ) ಯಿಂದ ಬಹಳ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿತ್ತು. ಆರ್​ಜೆಡಿ ತನ್ನ ಸ್ವಂತ ಸಾಮರ್ಥ್ಯದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ನಂಬರ್ ವನ್ ಪಕ್ಷವಾಗಿ ಹೊರಹೊಮ್ಮಿದರೂ ಕಾಂಗ್ರೆಸ್ ಪಕ್ಷದ ಕಳಪೆ ಪ್ರದರ್ಶನ ವಿರೋಧ ಪಕ್ಷಗಳ ಮೈತ್ರಿಯ ಟ್ಯಾಲಿ ಕಡಿಮೆ ಯಾಗುವಂತೆ ಮಾಡಿತ್ತು.

ಕಳೆದ ಕೆಲ ವಾರಗಳಲ್ಲಿ ಕಾಂಗ್ರೆಸ್​ನ ಮಿತ್ರಪಕ್ಷಗಳು ಇದೇ ತೆರನಾದ ಹೇಳಿಕೆಗಳನ್ನು ನೀಡುತ್ತಿವೆ. ಎನ್​ಸಿಪಿಯ ಶರದ್​ ಪವಾರ್ ಅವರು ಕಾಂಗ್ರೆಸ್ ಇಲ್ಲದೆ ಪರ್ಯಾಯ ರಂಗವನ್ನು ರಚಿಸುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಹಾಗೆಯೇ, ಮಾಹಾರಾಷ್ಟ್ರದಲ್ಲಿ ನಡೆಯಲಿರುವ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಕಣಕ್ಕಿಳಿಯಲಿದೆ ಎಂದು ಪಕ್ಷದ ನಾಯಕರೊಬ್ಬರು ಹೇಳಿಕೆ ನೀಡಿದ್ದು ಶಿವ ಸೇನೆ ಮತ್ತು ಎನ್​ಸಿಪಿಯನ್ನು ಬೇಸರಗೊಳಿಸಿದ್ದರೂ ಮಂಗಳವಾರ ಹೇಳಿಕೆಯೊಂದನ್ನು ನೀಡಿರುವ ಶಿವ ಸೇನೆಯ ಸಂಜಯ ರಾವತ್ ಅವರು ಶರದ್ ಪವಾರ್ ಹೇಳಿರುವುದನ್ನು ಸಮರ್ಥಿಸಿದ್ದಾರೆ.

‘ಕಾಂಗ್ರೆಸ್ ಇಲ್ಲದೆ ಯಾವುದೇ ತೃತೀಯ ರಂಗ ಯಶ ಕಾಣದು. ಪ್ರಸಕ್ತವಾಗಿ ಅದು ದುರ್ಬಲ ಅನಿಸುತ್ತಿರಬಹುದು. ಆದರೆ ಅದೇ ದೇಶದ ಪ್ರಮುಖ ವಿರೋದ ಪಕ್ಷ ಎನ್ನುವುದನ್ನು ಯಾರೂ ಮರೆಯಬಾರದು. ನಾವು ಅದನ್ನು ಜೊತೆಯಲ್ಲಿ ಕೊಂಡೊಯ್ಯಬೇಕು. ತೃತೀಯ, ನಾಲ್ಕನೇ ಅಥವಾ 5ನೇ ರಂಗ ಸ್ಥಾಪಿಸುವುದರಿಂದ ಯಾವುದೇ ಪ್ರಯೋಜನವಿಲ್ಲ, ಅಸ್ತಿತ್ವದಲ್ಲಿರುವ ರಂಗವನ್ನು (ಯುಪಿಎ) ನಾವು ಬಲಪಡಿಸಿಬೇಕಿದೆ ಎಂದು, ಸೇನೆಯ ಧುರೀಣ ಹೇಳಿದರು.

‘ಈ ಒಕ್ಕೂಟವನ್ನು ಯಾರು ಮುನ್ನಡೆಸಬೇಕು ಎಂಬ ಪ್ರಶ್ನೆ ಹುಟ್ಟಿದಾಗಲೇ ತೊಂದರೆ ತಲೆದೋರುತ್ತದೆ. ಹೊಸ ರಂಗ ಪರ್ಯಾಯ ರಂಗವಾಗಲಾರದು, ನಾವು ಯುಪಿಎ ಅನ್ನೇ ಬಲಪಡಿಸಬೇಕಿದೆ,’ ಎಂದು ಹೇಳಿದ ರಾವತ್ ಅವರು ಪವಾರ್ ಮತ್ತು ಮಮತಾ ಬ್ಯಾನರ್ಜಿ ಅವರಂಥ ನಾಯಕರು ಕಾಂಗ್ರೆಸ್ ನಾಯಕತ್ವದೊಂದಿಗೆ ಮಾತಾಡಬೇಕು ಎಂದರು.

‘ಇಂಥ ರಂಗ ಕೂಡಲೇ ಅಧಿಕಾರಕ್ಕೆ ಬರಲಾರದು. ಆದರೆ, ಕನಿಷ್ಟ ಪಕ್ಷ ಒಂದು ಏಕೀಕೃತ ಮತ್ತು ಶಕ್ತಿಶಾಲಿ ವಿರೋಧ ಪಕ್ಷ ಮುನ್ನೆಲೆಗೆ ಬರುತ್ತದೆ ಮತ್ತು ಆಗ ಸರ್ಕಾರಕ್ಕೆ ಅದನ್ನು ಅಂಗೀಕರಿಸದೆ ಬೇರೆ ದಾರಿಯಿರುವುದಿಲ್ಲ,’ ಎಂದು ರಾವತ್ ಹೇಳಿದರು.

ಇದನ್ನೂ ಓದಿ: ಮೂರನೇ ಅಥವಾ ನಾಲ್ಕನೇ ರಂಗವು ಬಿಜೆಪಿಗೆ ಸವಾಲೊಡ್ಡಬಲ್ಲದು ಎಂದು ನನಗನಿಸುತ್ತಿಲ್ಲ: ಪ್ರಶಾಂತ್ ಕಿಶೋರ್

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ