ಒಂದು ಕೋಮಿನ ಗುಂಪಿನಿಂದ ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಚಾಕು, ರಾಡ್, ಕಲ್ಲಿನಿಂದ ಹಲ್ಲೆ

| Updated By: ವಿವೇಕ ಬಿರಾದಾರ

Updated on: Oct 09, 2022 | 6:24 PM

ಶ್ರೀರಾಮಸೇನೆ ಕಾರ್ಯಕರ್ತ ಸೇರಿ ಇಬ್ಬರಿಗೆ ಚಾಕು ಇರಿದು, ಓರ್ವನ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳಗಾವಿಯ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ.

ಒಂದು ಕೋಮಿನ ಗುಂಪಿನಿಂದ ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಚಾಕು, ರಾಡ್, ಕಲ್ಲಿನಿಂದ ಹಲ್ಲೆ
ಗಾಯಗೊಳಗಾದ ಯುವಕರು
Follow us on

ಬೆಳಗಾವಿ: ಶ್ರೀರಾಮಸೇನೆ ಕಾರ್ಯಕರ್ತ ಸೇರಿ ಇಬ್ಬರಿಗೆ ಚಾಕು ಇರಿದು, ಓರ್ವನ ಮೇಲೆ ಹಲ್ಲೆ ಮಾಡಿರುವ ಘಟನೆ ರಾಮದುರ್ಗ ಪಟ್ಟಣದಲ್ಲಿ ನಡೆದಿದೆ. ಬೈಕ್ ಪಕ್ಕಕ್ಕೆ ತೆಗೆದುಕೊಳ್ಳುವ ವಿಚಾರದಲ್ಲಿ ಗಲಾಟೆ ನಡೆದಿದೆ. ಈ ವೇಳೆ ಒಂದು ಕೋಮಿನ ಐದಕ್ಕೂ ಅಧಿಕ ಯುವಕರು ಚಾಕು, ರಾಡ್, ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ಶ್ರೀರಾಮಸೇನೆ ಕಾರ್ಯಕರ್ತ ಗೋಪಾಲ್ ಬಂಡಿವಡ್ಡರ್‌ಗೆ ಚಾಕು ಇರಿಯಲಾಗಿದೆ. ರವಿ ಬಂಡಿವಡ್ಡರ್ ಎಂಬ ಯುವಕನ ತಲೆಗೆ ರಾಡ್​ನಿಂದ ಹಲ್ಲೆ ಮಾಡಲಾಗಿದೆ.

ಜಗಳ ಬಿಡಿಸಲು ಹೋದ ನಂಜುಡಿ ಸಾಬಣ್ಣ ಬಂಡಿವಡ್ಡರ್ ಎಂಬುವರ ಮೇಲೆಯೂ ಹಲ್ಲೆ ಮಾಡಲಾಗಿದೆ. ಗಾಯಾಳುಗಳಿಗೆ ರಾಮದುರ್ಗ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಮೀನ್ ಜಂಗಲಶೇಖ್ ಮತ್ತು ಸಹಚರರಿಂದ ಹಲ್ಲೆ ನಡೆದದಿರುವ ಆರೋಪ ಕೇಳಿಬಂದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಆಸ್ಪತ್ರೆ ಬಳಿ ಸಂಬಂಧಿಕರು ಜಮಾವಣೆಗೊಳ್ಳುತ್ತಿದ್ದಾರೆ. ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹೆಂಡತಿ ಮೇಲೆ ಕಣ್ಣು ಹಾಕಿದ್ದಕ್ಕೆ ಸ್ನೇಹಿತನ ಮರ್ಡರ್

ಬೆಳಗಾವಿ: ಅ.7ರಂದು ಕರೋಶಿ ಗ್ರಾಮದಲ್ಲಿ ಕೊಳೆತ ಸ್ಥಿಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಚಿಕ್ಕೋಡಿ ಪೊಲೀಸರು, ಸಾವಿನ ಕಾರಣವನ್ನು ಬೇಧಿಸಿದ್ದಾರೆ. ಕಳೆದ ರವಿವಾರ ಅ.2 ರಂದು ಕೊಲೆಯಾದ ಸುನೀಲ್ ಸಾಳುಂಕೆ ಕೆಲಸಕ್ಕೆ ಹೋಗಿದ್ದನು. ಕೆಲಸಕ್ಕೆ ಹೋದ ಸುನೀಲ್​ಗೆ ಸಂಜೆ ಮಹಾಂತೇಶ್ ತಳವಾರ್ ಎಂಬಾತ ಪಾರ್ಟಿಗೆಂದು ಕರೆದಿದ್ದಾನೆ. ಪಾರ್ಟಿಗೆ ಬಂದ ಸುನಿಲ್​ಗೆ ಮಹಾಂತೇಶ್ ತಳವಾರ್ ಮತ್ತು ಕಲ್ಲೋಳ ಗ್ರಾಮದ ರಾಜು ದೊಡ್ಡಮನಿ ಹಗ್ಗದಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾರೆ.

ಕೊಲೆ ಮಾಡಿ, ಆರೋಪಿಗಳು ಅರಣ್ಯ ಪ್ರದೇಶದಲ್ಲಿ ಎಸೆದು ಹೋಗಿದ್ದರು. ಕೊಲೆಯಾದ ಐದು ದಿನಗಳ ನಂತರ ಕೊಳೆತ ಸ್ಥಿತಿಯಲ್ಲಿ ಸುನೀಲ್ ಶವ ಪತ್ತೆಯಾಗಿತ್ತು. ಈಗ ಶವ ಪತ್ತೆಯಾಗಿ 8 ದಿನಗಳ ಬಳಿಕ ಪೊಲೀಸರು ಜೈನಾಪುರ ಗ್ರಾಮದ ಮಹಾಂತೇಶ್ ತಳವಾರ್ ಮತ್ತು ಕಲ್ಲೋಳ ಗ್ರಾಮದ ರಾಜು ದೊಡ್ಡಮನಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಸುನೀಲ್​, ಮಹಾಂತೇಶ್ ತಳವಾರ್ ಮೇಲೆ ಕಣ್ಣು ಹಾಕಿದ್ದಕ್ಕೆ ಕೊಲೆ ಮಾಡಿದ್ದಾಕಿ ಬಾಯಿ ಬಿಟ್ಟಿದ್ದಾನೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 5:55 pm, Sun, 9 October 22