ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ನಕಲು-ಅಕ್ರಮ: 9 ಜನ ಆರೋಪಿಗಳ ಅರೇಸ್ಟ್

| Updated By: ವಿವೇಕ ಬಿರಾದಾರ

Updated on: Aug 22, 2022 | 11:02 PM

ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ನಕಲು ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ್ ನಗರ ಪೊಲೀರು 9 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ನಕಲು-ಅಕ್ರಮ: 9 ಜನ ಆರೋಪಿಗಳ ಅರೇಸ್ಟ್
ಕೆಪಿಟಿಎಸ್​ಎಲ್​
Follow us on

ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ನಕಲು ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ್ ನಗರ ಪೊಲೀರು 9 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಬೆಳಗಾವಿ ಎಸ್‌ಪಿ‌ ಡಾ.ಸಂಜೀವ್ ಪಾಟೀಲ್ ಮಾತನಾಡಿ ಗೋಕಾಕ್‌, ಗದಗದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದರು. ಆ.7ರಂದು ನಡೆದಿದ್ದ ಕೆಪಿಟಿಸಿಎಲ್ ಕಿರಿಯ ಸಹಾಯಕ ಪರೀಕ್ಷೆಯಲ್ಲಿ ಗೋಕಾಕ್‌ನಲ್ಲಿ ಸ್ಮಾರ್ಟ್​ವಾಚ್ ಬಳಸಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದರು.

ಈ ಸಂಬಂಧ ಗೋಕಾಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಪರೀಕ್ಷಾರ್ಥಿ ಸಿದ್ದಪ್ಪ ಮದೀಹಳ್ಳಿ ಎಂಬುವರನ್ನು ಪೊಲೀಸರು ಬಂಧಿಸಿದ್ದರು. ಸಿದ್ದಪ್ಪ ನೀಡಿದ ಮಾಹಿತಿ ಆಧರಿಸಿ ಉಳಿದ ಆರೋಪಿಗಳ ಬಂಧನ ಮಾಡಲಾಗಿದೆ ಎಂದು ಎಸ್‌ಪಿ‌ ಡಾ.ಸಂಜೀವ್ ಪಾಟೀಲ್ ಹೇಳಿದ್ದಾರೆ.

ಎಸ್‌ಪಿ ಪ್ರಕರಣದ ತನಿಖೆಗೆ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿದ್ದಾರೆ. ಮೂವರು ಕಿಂಗ್‌ಪಿನ್‌ಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಕೆಪಿಟಿಸಿಎಲ್ 600 ಕಿರಿಯ ಸಹಾಯಕ ಹುದ್ದೆಗಳಿಗಾಗಿ ರಾಜ್ಯಾದ್ಯಂತ 3 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

Published On - 11:01 pm, Mon, 22 August 22