ನನಗೆ ಬಿಪಿ ಶುಗರ್ ಇಲ್ಲ, ನನ್ನ ತಂಟೆಗೆ ಬಂದವರಿಗೆ ಬಿಪಿ ಶುಗರ್ ಬರುತ್ತೆ- ಸಚಿವ ಕೆ.ಎಸ್.ಈಶ್ವರಪ್ಪ

| Updated By: sandhya thejappa

Updated on: Aug 11, 2021 | 9:29 AM

ನರೇಂದ್ರ ಮೋದಿ ಹೆಸರು ಸುಲಭ ಶೌಚಾಲಯಕ್ಕೆ ಹೆಸರಿಡಿ ಅಂತಾ ಹೇಳಿದ್ದು ಸರೀನಾ? ಎಂದು ಪ್ರಶ್ನಸಿದ ಸಚಿವರು, ಜೋಕರ್ ಅಂದಿದ್ದಕ್ಕೆ ಸಿಟ್ಟು ಬಂತು. ಸುಲಭ ಶೌಚಾಲಯಕ್ಕೆ ಮೋದಿ ಹೆಸರಿಡಿ ಅಂದಿದ್ದು ಕೇಳಿ ರಕ್ತ ಕುದೀತು.

ನನಗೆ ಬಿಪಿ ಶುಗರ್ ಇಲ್ಲ, ನನ್ನ ತಂಟೆಗೆ ಬಂದವರಿಗೆ ಬಿಪಿ ಶುಗರ್ ಬರುತ್ತೆ- ಸಚಿವ ಕೆ.ಎಸ್.ಈಶ್ವರಪ್ಪ
ಸಚಿವ ಕೆ.ಎಸ್. ಈಶ್ವರಪ್ಪ
Follow us on

ಬೆಳಗಾವಿ: ಕಾಂಗ್ರೆಸ್ ನಾಯಕರ ವಿರುದ್ಧ ಕೆ.ಎಸ್.ಈಶ್ವರಪ್ಪ ಅವಾಚ್ಯ ಶಬ್ದ ಬಳಕೆ ವಿಚಾರಕ್ಕೆ ಸಂಬಂಧಿಸಿ ಬೆಳಗಾವಿಯಲ್ಲಿ ಈಶ್ವರಪ್ಪ (KS Eshwarappa) ಹೇಳಿಕೆ ನೀಡಿದ್ದಾರೆ. ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ನನ್ನ ಸಂಘಟನೆ ಬೆಳೆಸಬೇಕು ಅಂತಾ ಮಾತಾಡಿದ್ದೆ. ದೀನದಯಾಳ್ ಉಪಾಧ್ಯರನ್ನ ಕಗ್ಗೊಲೆ ಮಾಡಿ ಫುಟ್ಬಾತ್​ನಲ್ಲಿ ಎಸೆದು ಹೋದ್ರು. ಆಗ ಬಿ ಕಾಮ್ ಅಂತಾ ನಮ್ಮ ಹಿರಿಯರು ಹೇಳಿದ್ರು, ಆಗ ನಮ್ಮ ಬಳಿ ಶಕ್ತಿ ಇರಲಿಲ್ಲ. ಈಗ ನಮ್ಮ ಶಕ್ತಿ ಜಾಸ್ತಿ ಇದೆ ಈಗ ಫೇಸ್ ವಿತ್ ಸೇಮ್ ಸ್ಟಿಕ್ ಅಂದ್ರು ಅದನ್ನ ಹೇಳಿದ್ದೆ ಎಂದು ತಿಳಿಸಿದರು.

ಸಿದ್ದರಾಮಯ್ಯ (Siddaramaiah) ಸರ್ಕಾರದಲ್ಲಿ ಗೋ ಕಳ್ಳತನ ಮಾಡೋರನ್ನ ತಡೆದ್ರೆ ಕೊಲೆಗಳಾದವು. ಆಗ ಸಿದ್ದರಾಮಯ್ಯರನ್ನ ಕೇಳಿದಾಗ ಕೋಮುವಾದಿಗಳನ್ನು ಬಗ್ಗು ಬಡೀತಿವೆ ಅಂದ್ರು. ನಮ್ಮ ಶಕ್ತಿ ಬೆಳೆಸಬೇಕು ಅಂತಾ ಹೇಳಿದ್ದು ತಪ್ಪಲ್ಲ. ಫೇಸ್ ವಿತ್ ಸೇಮ್ ಸ್ಟಿಕ್, ಹೊಡೆದ್ರೆ ವಾಪಸ್ ಹೊಡೀರಿ ಅಂತಾ ನಮ್ಮ ಹಿರಿಯರು ಹೇಳಿದ್ದಾರೆ. ಅದಕ್ಕೆ ಜೋಕರ್ ಅಂತಾ ಹೆಸರಿಟ್ಟುಕೊಳ್ಳಿ ಅಂತಾ ಹರಿಪ್ರಸಾದ್ ಹೇಳಿದ್ರು. ನನಗೆ ಬಿಪಿ ಶುಗರ್ ಇಲ್ಲ ನನ್ನ ತಂಟೆಗೆ ಬಂದವ್ರಿಗೆ ಬಿಪಿ ಶುಗರ್ ಬರುತ್ತೆ ಅಂತ ಸಚಿವ ಈಶ್ವರಪ್ಪ ಹೇಳಿದ್ದಾರೆ.

ನರೇಂದ್ರ ಮೋದಿ (Narendra Modi) ಹೆಸರು ಸುಲಭ ಶೌಚಾಲಯಕ್ಕೆ ಹೆಸರಿಡಿ ಅಂತಾ ಹೇಳಿದ್ದು ಸರೀನಾ? ಎಂದು ಪ್ರಶ್ನಸಿದ ಸಚಿವರು, ಜೋಕರ್ ಅಂದಿದ್ದಕ್ಕೆ ಸಿಟ್ಟು ಬಂತು. ಸುಲಭ ಶೌಚಾಲಯಕ್ಕೆ ಮೋದಿ ಹೆಸರಿಡಿ ಅಂದಿದ್ದು ಕೇಳಿ ರಕ್ತ ಕುದೀತು. ಸಿಟ್ಟಿನ ಭರದಲ್ಲಿ ಆ ಮಾತು ಮಾತನಾಡಿ ತಕ್ಷಣವೇ ಆ ಪದ ವಾಪಸ್ ಪಡೆದೆ ಎಂದು ಹೇಳಿದರು.

ನಾನು ಕ್ಷಮೆ ಕೇಳಿದೆ, ನೀವು ನೀಡಿದ ಹೇಳಿಕೆಗೆ ಕ್ಷಮೆ ಕೇಳಬೇಕಲ್ವಾ. ಇಟಲಿ ಯೂನಿವರ್ಸಿಟಿ ಒಳ್ಳೆಯ ಬುದ್ಧಿ ಹೇಳಿಕೊಟ್ಟಿದ್ದೆ ಅಂತಾ ಹೇಳ್ತಿದ್ದೆ. ನಾನು ಆ ಪದ ಬಳಕೆ ಮಾಡಿದ್ದು ಹರಿಪ್ರಸಾದ್​ಗೆ, ಎಲ್ಲಾ ಕಾಂಗ್ರೆಸ್ ನಾಯಕರಿಗಲ್ಲ, ನನಗೂ ಹರಿಪ್ರಸಾದ್ಗೂ ವೈಯಕ್ತಿಕ ದ್ವೇಷ ಇಲ್ಲ ಅಂತ ಈಶ್ವರಪ್ಪ ಅಭಿಪ್ರಾಯಪಟ್ಟರು.

ಇನ್ನು ಸಚಿವ ಸ್ಥಾನಕ್ಕೆ ಆನಂದ್ ರಾಜೀನಾಮೆ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸದ ಅವರು, ಸಂಪುಟ ರಚನೆ ವೇಳೆ ಕೆಲವರಿಗೆ ಅಸಮಾಧಾನ ಸಹಜ. ಆನಂದ್ ಸಿಂಗ್ ಜತೆ ಸಿಎಂ, ಹಿರಿಯರು ಚರ್ಚಿಸುತ್ತಾರೆ. ಆನಂದ್ ಸಿಂಗ್ರನ್ನು ಸಮಾಧಾನ ಮಾಡುವ ವಿಶ್ವಾಸವಿದೆ ಎಂದು ಹೇಳಿದರು.

ಇದನ್ನೂ ಓದಿ

ಇಂದಿರಾ ಕ್ಯಾಂಟೀನ್​ ಹೆಸರು ಬದಲಿಸಿದ್ರೆ ಪರಿಣಾಮ ನೆಟ್ಟಗಿರಲ್ಲ: ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಎಚ್ಚರಿಕೆ

ಮುಖ್ಯಮಂತ್ರಿ ಬೊಮ್ಮಾಯಿಗೆ ಶ್ರಾವಣ ಮಾಸದಲ್ಲಿ ಸಂಪುಟ ಸಂಕಟ; ತಣ್ಣಗೆ ಬಂಡಾಯದ ಬೆಂಕಿ ಉಗುಳುತ್ತಿರುವ ನಾಯಕರು

(KS Eshwarappa react to hariprasad joker statement in belagavi)

Published On - 9:26 am, Wed, 11 August 21