ಬೆಳಗಾವಿ: ಇಂದು (ಆಗಸ್ಟ್ 21) 11 ಗಂಟೆಗೆ ಮಾಜಿ ಸಚಿವ ವಿನಯ್ ಕುಲಕರ್ಣಿ (Vinay Kulkarni) ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಹೀಗಾಗಿ ವಿನಯ್ಗೆ ಸ್ವಾಗತ ಕೋರಲು ಹಿಂಡಲಗಾ ಜೈಲಿನ ಬಳಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಆಗಮಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್, ವಿನಯ್ ಕುಲಕರ್ಣಿ ಅಣ್ಣ ಬಿಡುಗಡೆಯಾಗುತ್ತಿದ್ದಾರೆ. ಅಣ್ಣನನ್ನು ಭೇಟಿಯಾಗಲು ಬಂದಿರುವೆ. ಒಬ್ಬ ತಂಗಿಯಾಗಿ ಮಾನಸಿಕ ಧೈರ್ಯ ತುಂಬಲು ಬಂದಿದ್ದೇನೆ ಎಂದು ತಿಳಿಸಿದ್ದಾರೆ. ರಕ್ಷಾಬಂಧನ ಹಿನ್ನೆಲೆ ವಿನಯ್ ಕುಲಕರ್ಣಿಗೆ ರಾಖಿ ಕಟ್ಟಲು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ರಾಖಿ ತೆಗೆದುಕೊಂಡು ಬಂದಿದ್ದಾರೆ. ಸಹೋದರನಿಗೆ ರಾಖಿ ಕಟ್ಟಿ ಸ್ವಾಗತಿಸಿ ಕೊಳ್ಳುತ್ತೇನೆ ಎಂದು ತಿಳಿಸಿದರು ಲಕ್ಷ್ಮೀ ಹೆಬ್ಬಾಳ್ಕರ್, ಕೈಯಲ್ಲಿ ರಾಖಿ ಹಿಡಿದುಕೊಂಡು ಜೈಲು ಮುಂಭಾಗದಲ್ಲಿ ನಿಂತಿದ್ದಾರೆ.
ಧಾರವಾಡ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ವಿನಯ್ ಕುಲಕರ್ಣಿಗೆ ಸುಪ್ರೀಂಕೋರ್ಟ್ನಿಂದ ಷರತ್ತುಬದ್ಧ ಜಾಮೀನುಸ ಸಿಕ್ಕಿದ್ದು, ಆಗಸ್ಟ್ 19ರಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ನಿಂದ ಬೇಲ್ ಸಿಕ್ಕಿದೆ. ಜಾಮೀನಿನ ಮೇಲೆ ವಿನಯ್ ಇಂದು ಬಿಡುಗಡೆಯಾಗುತ್ತಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಬಳಿಕ ವಿನಯ್ ನಾಗನೂರು ರುದ್ರಾಕ್ಷಿ ಮಠಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.
ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿರುವ ಚೆನ್ನಮ್ಮ ಪುತ್ಥಳಿಗೆ ವಿನಯ್ ಮಾಲಾರ್ಪಣೆ ಮಾಡುತ್ತಾರೆ. ನಂತರ ಬೆಳಗಾವಿಯ ಶಿವಬಸವ ನಗರದಲ್ಲಿರುವ ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಶ್ರೀಗಳ ಭೇಟಿಯಾಗಿ ಆಶೀರ್ವಾದ ಪಡೆಯುವ ಸಾಧ್ಯತೆಯಿದೆ. ರುದ್ರಾಕ್ಷಿಮಠಕ್ಕೆ ಭೇಟಿ ಬಳಿಕ ಮಧ್ಯಾಹ್ನ ಬೆಂಗಳೂರಿಗೆ ತೆರಳಬಹುದು. ಸಾಂಬ್ರಾ ಏರ್‌ಪೋರ್ಟ್‌ಗೆ ತೆರಳಿ ಮಧ್ಯಾಹ್ನ 3.40ರ ಫ್ಲೈಟ್‌ನಲ್ಲಿ ಬೆಂಗಳೂರಿಗೆ ತೆರಳುವ ಸಾಧ್ಯತೆಯಿದೆ.
ಜೈಲು ತಲುಪಿದ ಜಾಮೀನು ಆದೇಶದ ಪ್ರತಿ
ಆದೇಶದ ಪ್ರತಿ ತೆಗೆದುಕೊಂಡು ಪೋಸ್ಟ್ ಮ್ಯಾನ್ ಹಿಂಡಲಗಾ ಕಾರಾಗೃಹಕ್ಕೆ ಆಗಮಿಸಿದ್ದಾರೆ. ಸ್ಪೀಡ್ ಪೋಸ್ಟ್ ಮೂಲಕ ವಿನಯ್ ಜಾಮೀನು ಆದೇಶದ ಪ್ರತಿ ಬರುತ್ತೆ ಅಂತ ಜೈಲು ಅಧಿಕಾರಿ ತಿಳಿಸಿದ್ದರು. ಅದರಂತೆ ಪೋಸ್ಟ್ ಮ್ಯಾನ್ ಆದೇಶದ ಪ್ರತಿಯನ್ನು ತೆಗೆದುಕೊಂಡು ಬಂದಿದ್ದಾರೆ.
ಇದನ್ನೂ ಓದಿ
ಯೋಗೀಶ್ ಗೌಡ ಹತ್ಯೆ ಪ್ರಕರಣ: ಜಾಮೀನು ಸಿಕ್ಕರೂ ವಿನಯ್ ಕುಲಕರ್ಣಿ ಬಿಡುಗಡೆ ಇಂದು ಅನುಮಾನ
ಜಾಮೀನು ಆದೇಶಕ್ಕೆ ಕಾಯುತ್ತಿರುವ ಹಿಂಡಲಗ ಜೈಲು ಸಿಬ್ಬಂದಿ: ಧಾರವಾಡದಲ್ಲಿ ವಿನಯ್ ಕುಲಕರ್ಣಿ ಬೆಂಬಲಿಗರ ಸಂಭ್ರಮಾಚರಣೆ
(Lakshmi Hebbalkar arrives at Hindalga Jail to welcome Vinay Kulkarni)
Published On - 10:53 am, Sat, 21 August 21