ಮಾಜಿ ಸಚಿವ ವಿನಯ್ ಕುಲಕರ್ಣಿ ನಾಳೆ ಬಿಡುಗಡೆ ಸಾಧ್ಯತೆ; ವಿಳಂಬವೇಕೆ?

ವಿನಯ್ ಕುಲಕರ್ಣಿಗೆ ಇಂದು ಇನ್ನೂ ಜೈಲಿನಿಂದ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. ನಿನ್ನೆಯೇ ಅವರಿಗೆ ಕೋರ್ಟ್​ ಜಾಮೀನು ನೀಡಿದೆಯಾದರೂ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದ ಕಾರಣ ವಿನಯ್ ಕುಲಕರ್ಣಿ ನಾಳೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ಮಾಜಿ ಸಚಿವ ವಿನಯ್ ಕುಲಕರ್ಣಿ ನಾಳೆ ಬಿಡುಗಡೆ ಸಾಧ್ಯತೆ; ವಿಳಂಬವೇಕೆ?
ಮಾಜಿ ಸಚಿವ ವಿನಯ್ ಕುಲಕರ್ಣಿ
Follow us
TV9 Web
| Updated By: ಆಯೇಷಾ ಬಾನು

Updated on:Aug 20, 2021 | 12:43 PM

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯತ್​ ಸದಸ್ಯ ಯೋಗೀಶ್ ಗೌಡ​ ಹತ್ಯೆ ಪ್ರಕರಣದ ಆರೋಪದಲ್ಲಿ ಹಿಂಡಲಗಾ ಜೈಲಿನಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಇಂದು ಇನ್ನೂ ಜೈಲಿನಿಂದ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. ನಿನ್ನೆಯೇ ಅವರಿಗೆ ಕೋರ್ಟ್​ ಜಾಮೀನು ನೀಡಿದೆಯಾದರೂ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದ ಕಾರಣ ವಿನಯ್ ಕುಲಕರ್ಣಿ ನಾಳೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಜಾಮೀನು ದೊರೆಯುತ್ತಿದ್ದಂತೆ ನಿನ್ನೆಯೇ ಹೆಚ್.ವಿ.ಹೇಮಂತ್ ಮತ್ತು ಚಂದನ್‌ ಎಂಬಿಬ್ಬರು ಕೋರ್ಟ್‌ಗೆ ಶ್ಯೂರಿಟಿ ನೀಡಿದ್ದಾರೆ. ನ್ಯಾಯಾಲಯದಲ್ಲಿ ಶ್ಯೂರಿಟಿ ಅಂಗೀಕರವಾಗಿದೆ. ಶ್ಯೂರಿಟಿ ಸ್ವೀಕರಿಸಿ, ಕುಲಕರ್ಣಿ ಬಿಡುಗಡೆಗೆ ಕೋರ್ಟ್ ಆದೇಶ ಮಾಡಿದೆ. ಆದರೆ ಸ್ಪೀಡ್ ಪೋಸ್ಟ್ ಮೂಲಕವೇ ಬಿಡುಗಡೆ ಆದೇಶ ರವಾನೆಯಾಗಿದೆ. ಅದು ಬೆಳಗಾವಿಯ ಹಿಂಡಲಗಾ ಜೈಲಿಗೆ ರವಾನೆಯಾಗಿದ್ದು, ಬಿಡುಗಡೆ ಆದೇಶ ನಾಳೆ ಬೆಳಗ್ಗೆ ಜೈಲು ಅಧಿಕಾರಿಗಳ ಕೈಸೇರುವ ಸಾಧ್ಯತೆಯಿದೆ. ಹೀಗಾಗಿ ವಿನಯ್ ಕುಲಕರ್ಣಿ ನಾಳೆ ಬಿಡುಗಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಜಾಮೀನು ಸಿಕ್ಕರೂ ವಿನಯ ಕುಲಕರ್ಣಿಗೆ ಇಲ್ಲ ಬಿಡುಗಡೆಯ ಭಾಗ್ಯ ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಸುಪ್ರೀಂ ಕೋರ್ಟ್ ಆಗಸ್ಟ್ 11 ರಂದು ಜಾಮೀನು ನೀಡಿತ್ತು. ಕೊಲೆ ಪ್ರಕರಣಕ್ಕೆ ಸಂಬಂಧಿಸಿಂತೆ ಸುಪ್ರೀಂ ಕೋರ್ಟ್ ಅನೇಕ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿತ್ತು. ಆದರೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸಾಕ್ಷಿನಾಶದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ ಕುಲಕರ್ಣಿ ಅವರಿಗೆ ಜಾಮೀನು ಸಿಕ್ಕರೆ ಮಾತ್ರ ಅವರು ಹೊರಗೆ ಬರುವಂತೆ ಇತ್ತು. ಇದೀಗ ಅಲ್ಲಿಯೂ ಕೂಡ ಜಾಮೀನು ಸಿಕ್ಕಿದೆ. ಇಷ್ಟೆಲ್ಲ ಕಷ್ಟಪಟ್ಟು ಜಾಮೀನಿಗೆ ಕಸರತ್ತು ನಡೆಸಿ, ಅದನ್ನು ಪಡೆಯುವಲ್ಲಿ ವಿನಯ ಪರ ವಕೀಲರು ಯಶಸ್ವಿಯಾದರೂ ಶುಕ್ರವಾರವೂ ಅವರಿಗೆ ಬಿಡುಗಡೆಯ ಭಾಗ್ಯ ಸಿಗಲೇ ಇಲ್ಲ. ಇದಕ್ಕೆ ಕಾರಣ ಕೆಲವು ತಾಂತ್ರಿಕ ತೊಂದರೆಗಳು.

ತಾಂತ್ರಿಕ ತೊಂದರೆಯಿಂದ ಬಿಡುಗಡೆ ಆಗುತ್ತಿಲ್ಲ ಗುರುವಾರ ಮಧ್ಯಾಹ್ನ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ವಿನಯ ಕುಲಕರ್ಣಿಗೆ ಜಾಮೀನು ನೀಡಿತು. ಈ ವೇಳೆ ಸುಪ್ರೀಂ ಕೋರ್ಟ್ ವಿಧಿಸಿದ್ದ ಷರತ್ತುಗಳನ್ನೇ ಇಲ್ಲಿಯೂ ವಿಧಿಸಿ ಜಾಮೀನು ಮಂಜೂರು ಮಾಡಿತು. ಇನ್ನೇನು ಸಂಜೆ ಹೊತ್ತಿಗೆ ಇಲ್ಲವೇ ಶುಕ್ರವಾರ ಬೆಳಿಗ್ಗೆ ವಿನಯ ಕುಲಕರ್ಣಿ ಬಿಡುಗಡೆಯಾಗುತ್ತಾರೆ ಎನ್ನಲಾಗಿತ್ತು. ಆದರೆ ಆ ಗಳಿಗೆ ಕೂಡಿ ಬರಲೇ ಇಲ್ಲ. ಏಕೆಂದರೆ ಕೆಲವು ತಾಂತ್ರಿಕ ತೊಂದರೆಯಿಂದಾಗಿ ಅವರ ಬಿಡುಗಡೆ ವಿಳಂಬವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿನಯ ಬೆಂಬಲಿಗರು ಶುಕ್ರವಾರ ಬೆಳಿಗ್ಗೆ ಹತ್ತು ಗಂಟೆಗೆ ವಿನಯ ಬಿಡುಗಡೆಯಾಗುತ್ತೆ ಅಂದುಕೊಂಡು ಬೆಳಗಾವಿಗೆ ಹೋಗಲು ತಯಾರಿ ಮಾಡಿಕೊಂಡಿದ್ದರು. ಇತ್ತ ವಿನಯ ಕುಲಕರ್ಣಿ ಅವರ ಸಹೋದರ ವಿಜಯ ಕುಲಕರ್ಣಿ ಕೂಡ ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿ, ಶುಕ್ರವಾರ ವಿನಯ ಕುಲಕರ್ಣಿ ಬಿಡುಗಡೆಯಾಗುತ್ತಾರೆ. ಅಲ್ಲಿಂದ ಅವರು ಸವದತ್ತಿಗೆ ಹೋಗುತ್ತಾರೆ ಅಂತಾನೂ ಹೇಳಿದ್ದರು. ಇದರಿಂದಾಗಿ ಕಾರ್ಯಕರ್ತರಿಗೆ ಸಂತಸವಾಗಿತ್ತು. ಆದರೆ ಗುರುವಾರ ರಾತ್ರಿ ಮಾತ್ರ ಹಿಂಡಲಗಾ ಜೈಲು ಅಧಿಕಾರಿಗಳಿಗೆ ಕೋರ್ಟ್ ನಿಂದ ಯಾವುದೇ ಮಾಹಿತಿ ರವಾನೆಯಾಗಲೇ ಇಲ್ಲ. ಈ ಹಿನ್ನೆಲೆಯಲ್ಲಿ ತಡರಾತ್ರಿ ಹೊತ್ತಿನವರೆಗೆ ಕಾದ ಕೈ ಕಾರ್ಯಕರ್ತರು ಹಾಗೂ ನಾಯಕರು ಬೆಳಗಾವಿಗೆ ಹೋಗುವುದನ್ನು ರದ್ದು ಮಾಡಿದರು. ಆಗಲೇ ಗೊತ್ತಾಗಿದ್ದು ವಿನಯ ಕುಲಕರ್ಣಿಗೆ ಶುಕ್ರವಾರವೂ ಬಿಡುಗಡೆಯ ಭಾಗ್ಯ ಸಿಗುವುದಿಲ್ಲ ಅನ್ನುವುದು. ಇದರಿಂದಾಗಿ ವರಮಹಾಲಕ್ಷ್ಮೀ ಹಬ್ಬದ ದಿನ ಹೊರಗೆ ಬರುತ್ತಾರೆ ಅಂದುಕೊಂಡಿದ್ದ ಅವರ ಕುಟುಂಬದವರಿಗೆ ನಿರಾಸೆಯಾಗಿದೆ.

ಕಾರ್ಯಕರ್ತರಿಗೆ ನಿರಾಸೆ ಯೋಗೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರೋ ಸಿಬಿಐ 2020ರ ನವೆಂಬರ್ 5ರಂದು ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಬಂಧಿಸಿತ್ತು. ಅವತ್ತಿನಿಂದ ವಿನಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿಯೇ ಇದ್ದಾರೆ. ಡಿಸೆಂಬರ್ ತಿಂಗಳಲ್ಲಿ ವಿನಯ ಕುಲಕರ್ಣಿ ಜಾಮೀನು ಕೋರಿ ಧಾರೌಆಡ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಡಿಸೆಂಬರ್ 18 ರಂದು ಜಾಮೀನು ಅರ್ಜಿ ತಿರಸ್ಕಾರಗೊಂಡಿತ್ತು. ಬಳಿಕ ವಿನಯ ಕುಲಕರ್ಣಿ ಜಾಮೀನಿಗಾಗಿ ಧಾರವಾಡ ಹೈಕೋರ್ಟ್ ಗೆ ಮೊರೆ ಹೋಗಿದ್ದರು. ಜನವರಿ 21, 2021 ರಂದು ಆ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ನಂತರ ಮೇ 24 ರಂದು ಬೆಂಗಳೂರಿನ ಹೈಕೋರ್ಟ್ ನಲ್ಲಿಯೂ ಜಾಮೀನು ಅರ್ಜಿ ವಜಾಗೊಂಡಿತ್ತು. 2021 ರ ಮೇ 28 ಕ್ಕೆ ವಿನಯ ಕುಲಕರ್ಣಿ ಪರ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಇತ್ತ 2021 ರ ಆಗಸ್ಟ್ 4 ರಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನಲ್ಲಿ ಸಾಕ್ಷಿನಾಶಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿತ್ತು. ಕೊನೆಗೆ ಸುಪ್ರೀಂ ಕೋರ್ಟ್ ವಿನಯ ಕುಲಕರ್ಣಿ ಅವರಿಗೆ ಆಗಸ್ಟ್ 11 ರಂದು ಜಾಮೀನು ಮಂಜೂರು ಮಾಡಿತು. ಇದರಿಂದಾಗಿ ವಿನಯ ಹಾಗೂ ಕುಟುಂಬಸ್ಥರಿಗೆ ಅದು ಕೊಂಚ ನಿರಾಳತೆ ತಂದಿತ್ತು. ಆದರೆ ಸಾಕ್ಷಿ ನಾಶಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಪಡೆಯುವುದು ಅನಿವಾರ್ಯವಾಗಿತ್ತು. ಹೀಗಾಗಿ ಆಗಸ್ಟ್ 11 ರಂದು ಕೊಲೆಗೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ನೀಡಿದರೂ ವಿನಯ ಕುಲಕರ್ಣಿ ಹೊರಗೆ ಬರಲು ಸಾಧ್ಯವಾಗಿರಲಿಲ್ಲ. ಇದೀಗ ಆಗಸ್ಟ್ 19 ರಂದು ಈ ನ್ಯಾಯಾಲಯ ಕೂಡ ಜಾಮೀನು ನೀಡಿದೆ. ಆದರೆ ಜಾಮೀನು ನೀಡುವಾಗ ಸುಪ್ರೀಂ ಕೋರ್ಟ್ ವಿಧಿಸಿರೋ ಷರತ್ತುಗಳನ್ನು ಇಲ್ಲಿಯೂ ವಿಧಿಸಲಾಗಿದೆ. ಯಾವುದೇ ಕಾರಣಕ್ಕೂ ಧಾರವಾಡ ಜಿಲ್ಲೆಗೆ ವಿನಯ ತೆರಳುವಂತಿಲ್ಲ. ಇನ್ನು ಸಾಕ್ಷಿನಾಶ ಮಾಡುವಂತಿಲ್ಲ. ಅಲ್ಲದೇ ಸಾಕ್ಷಿಗಳನ್ನು ಯಾವುದೇ ಕಾರಣಕ್ಕೂ ಭೇಟಿಯಾಗುವಂತಿಲ್ಲ. ಇದೆಲ್ಲದರ ಜೊತೆಗೆ ವಾರಕ್ಕೆ ಎರಡು ಬಾರಿ ಬೆಂಗಳೂರಿನ ಸಿಬಿಐ ಕಚೇರಿಗೆ ಭೇಟಿ ನೀಡಬೇಕು ಅಂತಾನೂ ಷರತ್ತು ವಿಧಿಸಲಾಗಿದೆ. ಇನ್ನು ಇದರೊಂದಿಗೆ ಕೋರ್ಟ್ ನ ಅನುಮತಿ ಇಲ್ಲದೇ ಕೋರ್ಟ್ ನ ವ್ಯಾಪ್ತಿಯನ್ನು ಬಿಟ್ಟು ಹೊರಗೆ ಹೋಗದಂತೆ ನಿರ್ಬಂಧ ವಿಧಿಸಿದೆ. ಇದೇ ಇದೀಗ ವಿನಯ ಕುಲಕರ್ಣಿ ಪಾಲಿಗೆ ನುಂಗಲಾದರ ತುತ್ತಾಗಿ ಪರಿಣಮಿಸಿದೆ. ಇನ್ನು ಎಚ್.ವಿ. ಹೇಮಂತ್ ಮತ್ತು ಚಂದನ್ ಅನ್ನೋ ಇಬ್ಬರು ವ್ಯಕ್ತಿಗಳು ಶ್ಯೂರಿಟಿ ನೀಡಿದ್ದಾರೆ. ಶ್ಯೂರಿಟಿ ನೀಡುವ ಪ್ರಕ್ರಿಯೆ ಮುಕ್ತಾಯದ ಬಳಿಕವಷ್ಟೇ ಕೋರ್ಟ್ ಬಿಡುಗಡೆಗೆ ಆದೇಶ ನೀಡಿದೆ.

ಏನು ತಾಂತ್ರಿಕ ತೊಂದರೆ? ಗುರುವಾರ ಮಧ್ಯಾಹ್ನ ವಿನಯ ಕುಲಕರ್ಣಿ ಅವರಿಗೆ ಜಾಮೀನು ಸಿಕ್ಕರೂ ಅವರು ಶುಕ್ರವಾರವೂ ಹೊರಗೆ ಬಾರದಂತೆ ಆಗಿದೆ. ಇದಕ್ಕೆ ಕಾರಣ ತಾಂತ್ರಿಕ ತೊಂದರೆ. ಜಾಮೀನಿನ ತೀರ್ಪನ್ನು ಜೈಲು ಅಧಿಕಾರಿಗಳಿಗೆ ಮುಟ್ಟಿಸಿದ ಬಳಿಕವಷ್ಟೇ ಬಿಡುಗಡೆ ಮಾಡಲು ಅವಕಾಶವಿರುತ್ತದೆ. ಇತ್ತೀಚಿನ ದಿನಗಳಲ್ಲಿ ಇ-ಮೇಲ್ ಮುಖಾಂತರ ಆ ಆದೇಶದ ಪ್ರತಿ ಬಂದರೂ ಅದನ್ನು ಜೈಲು ಅಧಿಕಾರಿಗಳು ಪರಿಗಣಿಸಿ, ಬಿಡುಗಡೆ ಮಾಡಲು ಅವಕಾಶವಿರುತ್ತದೆ. ಆದರೆ ನಿನ್ನೆ ರಾತ್ರಿಯವರೆಗೂ ಇ-ಮೇಲ್ ಬಾರದೇ ಇರೋ ಹಿನ್ನೆಲೆಯಲ್ಲಿ ಶುಕ್ರವಾರವೂ ವಿನಯ ಕುಲಕರ್ಣಿ ಜೈಲಿನಲ್ಲಿಯೇ ಉಳಿಯಬೇಕಾಗುತ್ತದೆ ಅನ್ನುವುದು ಗೊತ್ತಾಗಿತ್ತು. ಏಕೆಂದರೆ ಮೊಹರಂ ನಿಮಿತ್ತ ಶುಕ್ರವಾರ ಸರಕಾರಿ ರಜೆ. ಹೀಗಾಗಿ ಕೋರ್ಟ್ ನಿಂದ ಶುಕ್ರವಾರ ಆದೇಶದ ಪ್ರತಿ ಬರುವುದಿಲ್ಲ. ಅಲ್ಲದೇ ಆದೇಶದ ಪ್ರತಿಯನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಪೀಡ್ ಪೋಸ್ಟ್ ಮೂಲಕ ಕಳಿಸಲಾಗಿದೆ. ಶುಕ್ರವಾರ ಅಂಚೆ ಇಲಾಖೆಗೂ ರಜೆ ಇರುವುದರಿಂದ ಆದೇಶದ ಪ್ರತಿ ಬಂದರೂ ಅದು ಜೈಲು ಅಧಿಕಾರಿಗಳಿಗೆ ಶನಿವಾರವೇ ಸಿಗಬೇಕಿದೆ. ವಿನಯ ಕುಲಕರ್ಣಿ ಅಭಿಮಾನಿಗಳ ಆತಂಕವೇನೆಂದರೆ, ಒಂದು ವೇಳೆ ಬೆಂಗಳೂರಿನಿಂದ ಆದೇಶದ ಪ್ರತಿ ಗುರುವಾರ ರಾತ್ರಿ ರವಾನೆಯಾಗದೇ ಶನಿವಾರ ರವಾನೆಯಾದರೆ ಅದು ಜೈಲು ಮುಟ್ಟುವುದು ಸೋಮವಾರವೇ. ಹೀಗಾಗಿ ಮತ್ತೆರಡು ದಿನಗಳ ಕಾಲ ವಿನಯ ಕುಲಕರ್ಣಿ ಜೈಲಿನಲ್ಲಿಯೇ ಕಳೆಯಬೇಕಾ? ಅನ್ನವುದೇ ಅವರ ಆತಂಕಕ್ಕೆ ಕಾರಣ.

ಹಿಂಡಲಗಾ ಜೈಲು ಬಳಿ ಪೊಲೀಸ್ ಭದ್ರತೆ ಇತ್ತ ವಿನಯ ಕುಲಕರ್ಣಿ ಶುಕ್ರವಾರ ಬಿಡುಗಡೆಯಾಗುತ್ತಾರೆ ಅಂದುಕೊಂಡು ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಏಕೆಂದರೆ ಧಾರವಾಡ ಜಿಲ್ಲೆಯಿಂದಲೇ ಸುಮಾರು 6 ಸಾವಿರ ಕಾರ್ಯಕರ್ತರು ಜೈಲು ಬಳಿ ಬರೋ ಸಾಧ್ಯತೆ ಇತ್ತು. ಆದರೆ ಯಾವಾಗ ಶುಕ್ರವಾರ ಬಿಡುಗಡೆ ಆಗಲು ಸಾಧ್ಯವಿಲ್ಲ ಅನ್ನೋದು ಖಚಿತವಾಯಿತೋ ಆಗ ಜೈಲು ಅಧಿಕಾರಿಗಳು ಹಾಗೂ ಇನ್ಸ್ ಪೆಕ್ಟರ್ ಸುನೀಲ್ ಕುಮಾರ್ ಚರ್ಚೆ ನಡೆಸಿ, ನಂತರ ಭದ್ರತೆ ವಾಪಸ್ ಪಡೆಯಲಾಯಿತು.

ವರದಿ:ನರಸಿಂಹಮೂರ್ತಿ ಪ್ಯಾಟಿ

ಯೋಗೀಶ್​ ಗೌಡ ಹತ್ಯೆ ಪ್ರಕರಣ: ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದರೂ ಸದ್ಯಕ್ಕೆ ಇಲ್ಲ ರಿಲೀಫ್

(ex minister vinay kulkarni may be released from belagavi jail on aug 21 saturday)

Published On - 11:59 am, Fri, 20 August 21

Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ