ಜನಾಶೀರ್ವಾದ ಕಾರ್ಯಕ್ರಮದ ಅತ್ಯುತ್ಸಾಹದಲ್ಲಿ ಹಾಲಿ ಯೋಧನ ಮನೆಗೆ ತೆರಳಿ ಸಾಂತ್ವನ ಹೇಳಿದ ಕೇಂದ್ರ ಸಚಿವ ನಾರಾಯಣಸ್ವಾಮಿ!

ಗದಗ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸಂಪುಟದಲ್ಲಿ ಇತ್ತೀಚೆಗೆ ಸಚಿವರಾಗಿ ಸೇರ್ಪಡೆಯಾಗಿರುವ ಸಂಸದರು ದೇಶಾದ್ಯತ ಜನಾದೇಶ ಸಭೆಗಳನ್ನು ದೇಶಾದ್ಯಂತ ಹಮ್ಮಿಕೊಂಡಿದ್ದಾರೆ. ಅದರಂರೆ ರಾಜ್ಯದಲ್ಲಿ ನಾಲ್ವರು ಕೇಂದ್ರ ಸಚಿವರು ಕರ್ನಾಟಕದ ಹಲವಾರು ಭಾಗಗಳಲ್ಲಿ ಸಭೆಗಳನ್ನು ನಡೆಸಿದ್ದಾರೆ. ಆದರೆ ಕೇಂದ್ರ ಸಚಿವ ನಾರಾಯಣಸ್ವಾಮಿ ಜನಾಶೀರ್ವಾದ ಕಾರ್ಯಕ್ರಮದ ವೇಳೆ ಮಹಾ ಯಡವಟ್ಟು ಮಾಡಿದ್ದಾರೆ. ನಿನ್ನೆ ಗದಗನಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಜನಾಶೀರ್ವಾದ ಕಾರ್ಯಕ್ರಮದ (Janashirvada Yatra) ಉತ್ಸಾಹದಲ್ಲಿ ಮಾಹಿತಿ ಕೊರತೆಯಿಂದಾಗಿ ಸೇವೆಯಲ್ಲಿರುವ ಸೈನಿಕನ ಮನೆಗೆ ತೆರಳಿ ಕುಟುಂಬಕ್ಕೆ‌ ‘ಸಾಂತ್ವನ’ […]

ಜನಾಶೀರ್ವಾದ ಕಾರ್ಯಕ್ರಮದ ಅತ್ಯುತ್ಸಾಹದಲ್ಲಿ ಹಾಲಿ ಯೋಧನ ಮನೆಗೆ ತೆರಳಿ ಸಾಂತ್ವನ ಹೇಳಿದ ಕೇಂದ್ರ ಸಚಿವ ನಾರಾಯಣಸ್ವಾಮಿ!
ಜನಾಶೀರ್ವಾದ ಕಾರ್ಯಕ್ರಮ ಅತ್ತುತ್ಸಾಹದಲ್ಲಿ ಹಾಲಿ ಯೋಧನ ಮನೆಗೆ ತೆರಳಿ ಸಾಂತ್ವನ ಹೇಳಿದ ಕೇಂದ್ರ ಸಚಿವ ನಾರಾಯಣಸ್ವಾಮಿ!
TV9kannada Web Team

| Edited By: sadhu srinath

Aug 20, 2021 | 1:16 PM

ಗದಗ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸಂಪುಟದಲ್ಲಿ ಇತ್ತೀಚೆಗೆ ಸಚಿವರಾಗಿ ಸೇರ್ಪಡೆಯಾಗಿರುವ ಸಂಸದರು ದೇಶಾದ್ಯತ ಜನಾದೇಶ ಸಭೆಗಳನ್ನು ದೇಶಾದ್ಯಂತ ಹಮ್ಮಿಕೊಂಡಿದ್ದಾರೆ. ಅದರಂರೆ ರಾಜ್ಯದಲ್ಲಿ ನಾಲ್ವರು ಕೇಂದ್ರ ಸಚಿವರು ಕರ್ನಾಟಕದ ಹಲವಾರು ಭಾಗಗಳಲ್ಲಿ ಸಭೆಗಳನ್ನು ನಡೆಸಿದ್ದಾರೆ. ಆದರೆ ಕೇಂದ್ರ ಸಚಿವ ನಾರಾಯಣಸ್ವಾಮಿ ಜನಾಶೀರ್ವಾದ ಕಾರ್ಯಕ್ರಮದ ವೇಳೆ ಮಹಾ ಯಡವಟ್ಟು ಮಾಡಿದ್ದಾರೆ.

ನಿನ್ನೆ ಗದಗನಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಜನಾಶೀರ್ವಾದ ಕಾರ್ಯಕ್ರಮದ (Janashirvada Yatra) ಉತ್ಸಾಹದಲ್ಲಿ ಮಾಹಿತಿ ಕೊರತೆಯಿಂದಾಗಿ ಸೇವೆಯಲ್ಲಿರುವ ಸೈನಿಕನ ಮನೆಗೆ ತೆರಳಿ ಕುಟುಂಬಕ್ಕೆ‌ ‘ಸಾಂತ್ವನ’ ಹೇಳಿಬಂದಿದ್ದಾರೆ.

ಗದಗ ತಾಲೂಕಿನ ಮುಳಗುಂದ ಪಟ್ಟಣದ ಮೃತ ಯೋಧನ ಕುಟುಂಬಕ್ಕೆ ಭೇಟಿ ನೀಡಬೇಕಿದ್ದ ಸಚಿವ ನಾರಾಯಣಸ್ವಾಮಿ, ಹಾಲಿ ಯೋಧರೊಬ್ಬರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಯೋಧ ಬಸವರಾಜ ಹಿರೇಮಠ ಅವರು ಒಂದೂವರೆ ವರ್ಷದ ಹಿಂದೆ ರೈಲು ಅಪಘಾತದಲ್ಲಿ ಮೃತಪಟ್ಟಿದ್ದರು. ಅವರು ಮಹಾರಾಷ್ಟ್ರದ ಪುಣೆಯಲ್ಲಿ ಕರ್ತವ್ಯನಿರತನಾಗಿದ್ದ ವೇಳೆ ಮೃತಪಟ್ಟಿದ್ದರು. ಯೋಧ ಬಸವರಾಜ ಮೂಲತಃ ಗದಗ ತಾಲೂಕಿನ ಮುಳಗುಂದ ಪಟ್ಟಣದವರು.

ಆದರೆ ಬಸವರಾಜ ಕುಟುಂಬಕ್ಕೆ ತೆರಳಿ ಸಾಂತ್ವಾನ ಹೇಳಿ, ಧೈರ್ಯ ತುಂಬಬೇಕಿದ್ದ ಕೇಂದ್ರ ಸಚಿವ ನಾರಾಯಣಸ್ವಾಮಿ ಪ್ರಸ್ತುತ ಜಮ್ಮು‌ಕಾಶ್ಮೀರದಲ್ಲಿ ಕರ್ತವ್ಯದಲ್ಲಿರೋ ಯೋಧ ರವಿಕುಮಾರ ಕಟ್ಟಿಮನಿ ಮನೆಗೆ ಭೇಟಿ ನೀಡಿಬಂದಿದ್ದಾರೆ. ಸಾಲದು ಅಂತಾ, ಸೈನಿಕ ರವಿಕುಮಾರ ಪತ್ನಿ ಅವರೊಂದಿಗೆ ಮಾತನಾಡುತ್ತಾ, ಯೋಗಕ್ಷೇಮ ವಿಚಾರಿಸಿದ್ದಾರೆ. ಆ ವೇಳೆ, ಸರ್ಕಾರಿ ನೌಕರಿ ಹಾಗೂ ಜಮೀನು ಕೊಡುವ ಭರವಸೆ ನೀಡಿದ್ದಾರೆ. ಸಚಿವರ ತರಾತುರಿ‌ ಹೇಳಿಕೆಯಿಂದ ಹಾಲಿ ಯೋಧನ ಕುಟುಂಬಸ್ಥರು ತಬ್ಬಿಬ್ಬು ಆಗಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡರ ಮಾಹಿತಿ ಕೊರತೆಯಿಂದ ಕೇಂದ್ರ ಸಚಿವರಿಂದ ಎಡವಟ್ಟಾಗಿದೆ ಎಂದು ತಿಳಿದುಬಂದಿದೆ.

(Union minister a narayanaswamy mistake working soldier to death and condole his family members)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada