Corona Vaccine: ಹೊಟ್ಟೆ ಪಾಡಿಗಾಗಿ ಊರೂರು ಸುತ್ತುವ ಅಲೆಮಾರಿಗಳಿಗೆ ಸಿಕ್ಕಿಲ್ಲ ಕೊವಿಡ್ ಲಸಿಕೆ
ಒಂದು ಕಡೆ ಲಸಿಕೆ ಹಾಕಿಸಿಕೊಂಡರೆ ಜ್ವರ ಬರುತ್ತೆ, ದುಡಿಮೆ ನಿಲ್ಲುತ್ತೆ ಎನ್ನುವ ಭಯದಲ್ಲಿ ಲಸಿಕೆ ಪಡೆಯಲು ಅಲೆಮಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಮತ್ತೊಂದು ಕಡೆ ದಿನಗೂಲಿ ಬಿಟ್ಟು ನೂರಾರು ಜನರ ಮಧ್ಯೆ ನಿಂತು ಲಸಿಕೆ ಹಾಕಿಸಿಕೊಳ್ಳಲಾಗದ ಪರಿಸ್ಥಿತಿ ಇದೆ.
ಮಂಡ್ಯ: ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಲಸಿಕಾ ಅಭಿಯಾನ ನಡೆಸುತ್ತಿದೆ. ರಾಜ್ಯಗಳಿಗೆ ಬೇಕಾಗುವ ಅಗತ್ಯ ಲಸಿಕೆ ಪೂರೈಕೆ ಮಾಡಿ ಪ್ರತಿಯೊಬ್ಬರಿಗೂ ಲಸಿಕೆ ಸಿಗುವ ನಿಟ್ಟಿನಲ್ಲಿ ಕಾರ್ಯ ನಡೆಸುತ್ತಿದೆ. ಆದ್ರೆ ಕೊವಿಡ್ ಲಸಿಕಾ ಅಭಿಯಾನ ಅಲೆಮಾರಿಗಳಿಗೆ ತಲುಪಿಲ್ಲ. ಹೊಟ್ಟೆಪಾಡಿಗೆ ಊರೂರು ಸುತ್ತಿ ಕುಲುಮೆ ಮಾಡುವ ಜನರಿಗೆ ಲಸಿಕೆ ಸಿಕಿಲ್ಲ.
ಹೊಟ್ಟೆಪಾಡಿಗೆ ಊರೂರು ಸುತ್ತಿ ಜಾಗ ಸಿಕ್ಕ ಕಡೆ ಶೆಡ್ ಹಾಕಿ, ಕೈಗೆ ಸಿಕ್ಕ ಕೆಲಸ ಮಾಡುತ್ತ ಮೂರು ಕಾಸು ಸಂಪಾದಿಸಿ ಜೀವನ ಸಾಗಿಸುವ ಅಲೆಮಾರಿಗಳ ಕಷ್ಟ, ಆರೋಗ್ಯದ ಬಗ್ಗೆ ವಿಚಾರಿಸುವವರೇ ಇಲ್ಲ. ಒಂದು ಕಡೆ ಲಸಿಕೆ ಹಾಕಿಸಿಕೊಂಡರೆ ಜ್ವರ ಬರುತ್ತೆ, ದುಡಿಮೆ ನಿಲ್ಲುತ್ತೆ ಎನ್ನುವ ಭಯದಲ್ಲಿ ಲಸಿಕೆ ಪಡೆಯಲು ಅಲೆಮಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಮತ್ತೊಂದು ಕಡೆ ದಿನಗೂಲಿ ಬಿಟ್ಟು ನೂರಾರು ಜನರ ಮಧ್ಯೆ ನಿಂತು ಲಸಿಕೆ ಹಾಕಿಸಿಕೊಳ್ಳಲಾಗದ ಪರಿಸ್ಥಿತಿ ಇದೆ. ಜನ ಸಂದಣಿ ದಾಡಿ ಲಸಿಕೆ ಪಡೆಯಲು ಒಂದು ದಿನ ಬೇಕು. ಆ ದಿನ ರಜೆ ಹಾಕಿದ್ರೆ ಒಂದು ದಿನ ಕೈಗೆ ಹಣ ಸಿಗಲ್ಲ. ಆ ದಿನ ಉಪವಾಸ ಮಲಗಬೇಕಾಗುತ್ತದೆ ಎಂಬ ಆತಂಕ ಅಲೆಮಾರಿಗಳಲ್ಲಿದೆ. ಅಸಹಾಯಕ ಸ್ಥಿತಿಯಲ್ಲಿ ಮಂಡ್ಯದಲ್ಲಿ ಬೀಡುಬಿಟ್ಟ ಅಲೆಮಾರಿಗಳಿದ್ದಾರೆ.
ಸುಮಾರು 15 ಆಟೋಗಳ ಮೂಲಕ ಮಂಡ್ಯದಲ್ಲಿ 50ಕ್ಕೂ ಹೆಚ್ಚು ಅಲೆಮಾರಿಗಳು ಬೀಡುಬಿಟ್ಟಿದ್ದಾರೆ. ಇವರಿಗೆ ಕೊವಿಡ್ ಲಸಿಕೆಯ ಬಗ್ಗೆ ಅರಿವು ಇಲ್ಲ. ದೈಹಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು ಗೊತ್ತಿಲ್ಲ. ಇವರನ್ನು ನಿರ್ಲಕ್ಷ್ಯಿಸಿದ್ರೆ ಇವರಿಂದಲೂ ಕೊರೊನಾ ಹರಡುವ ಸಾಧ್ಯತೆ ಹೆಚ್ಚುತ್ತದೆ. ಹೀಗಾಗಿ ಆರೋಗ್ಯ ಇಲಾಖೆ ಅಧಿಕಾರಗಳು ಇಂತಹ ಅಲೆಮಾರಿಗಳನ್ನ ಗುರುತಿಸಿ ಲಸಿಕೆ ನೀಡಬೇಕಿದೆ.
ಇದನ್ನೂ ಓದಿ: Coronavirus cases in India: ಭಾರತದಲ್ಲಿ 36,571 ಹೊಸ ಕೊವಿಡ್ ಪ್ರಕರಣ ಪತ್ತೆ, 540 ಮಂದಿ ಸಾವು