ಗೋವಾ ಬಿಜೆಪಿ ಸರ್ಕಾರದಿಂದ ನಮ್ಮ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ -ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ

| Updated By: ಆಯೇಷಾ ಬಾನು

Updated on: Feb 01, 2022 | 10:03 AM

ಕೋವಿಡ್ ಸಮಯದಲ್ಲಿ ಗೋವಾ ಬಿಜೆಪಿ ಸರ್ಕಾರ ಬಹಳಷ್ಟು ಹಗರಣ, ಭ್ರಷ್ಟಾಚಾರ ಮಾಡಿದೆ ಅಂತಾ. ಇದಕ್ಕಿಂತ ಏನಾದರೂ ಸಾಕ್ಷಿ ಬೇಕಾ? ಅಂಗೈ ಹುಣ್ಣಿಗೆ ಕನ್ನಡಿ ಬೇಕಾ? ಎಂದು ಪ್ರಚಾರದ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ ಮಾಡಿದ್ದಾರೆ.

ದಿನಕಳೆದಂತೆ ಗೋವಾ ವಿಧಾನಸಭಾ ಚುನಾವಣೆ ರಂಗೇರ್ತಿದೆ. ಗೋವಾದಲ್ಲಿ ಕೈ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಗೋವಾದಲ್ಲಿ ಕನ್ನಡಿಗರ ಮತಗಳ ಬುಟ್ಟಿಗೆ ಹೆಬ್ಬಾಳ್ಕರ್ ಕೈ ಹಾಕಿದ್ದಾರೆ. ಗೋವಾ ಬಿಜೆಪಿ ಸರ್ಕಾರದಿಂದ ನಮ್ಮ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಗೋವಾದ ಪಣಜಿಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದ್ದಾರೆ. ಫೆಬ್ರವರಿ 14ರಂದು ಗೋವಾ ವಿಧಾನಸಭಾ ಚುನಾವಣೆ ಹಿನ್ನೆಲೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರದ ವೇಳೆ ಗೋವಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗೋವಾದಲ್ಲಿ ಕನ್ನಡಿಗರಿಗೆ ಭಾರಿ ಅನ್ಯಾಯವಾಗುತ್ತಿದೆ. ಇಷ್ಟೊಂದು ಅನ್ಯಾಯ ಬೇರೆ ಎಲ್ಲಿಯೂ ಆಗುತ್ತಿಲ್ಲ. ಮನುಷ್ಯತ್ವದ ಆಧಾರ ಮೇಲೆ ಆದರೂ ನೋಡಬಹುದಿತ್ತು. ಬಿಜೆಪಿಗೆ ಕನ್ನಡಿಗರನ್ನು ಕಂಡರೆ ದ್ವೇಷ ಇದ್ದಂತಿದೆ. ಈಗ ಅವಕಾಶ ಬಂದಿದೆ ನಮ್ಮವರು ಸದ್ಬಳಕೆ ಮಾಡ್ತಾರೆ ಎಂದು ಗೋವಾದ ಪಣಜಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಗೋವಾ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕೊರೊನಾ ಸಮಯದಲ್ಲಿ ಸಾಕಷ್ಟು ಭ್ರಷ್ಟಾಚಾರ ಮಾಡಿದೆ. ಗೋವಾದ ಪ್ರಬುದ್ಧ ಮತದಾರರು ಭ್ರಮನಿರಸನಗೊಂಡಿದ್ದಾರೆ. ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡ್ತಾರೆ. ಆದ್ರೆ ಗೋವಾದ ಮಾಜಿ ರಾಜ್ಯಪಾಲ ಒಂದು ಹೇಳಿಕೆ ಕೊಡ್ತಾರೆ. ಕೋವಿಡ್ ಸಮಯದಲ್ಲಿ ಗೋವಾ ಬಿಜೆಪಿ ಸರ್ಕಾರ ಬಹಳಷ್ಟು ಹಗರಣ, ಭ್ರಷ್ಟಾಚಾರ ಮಾಡಿದೆ ಅಂತಾ.
ಇದಕ್ಕಿಂತ ಏನಾದರೂ ಸಾಕ್ಷಿ ಬೇಕಾ? ಅಂಗೈ ಹುಣ್ಣಿಗೆ ಕನ್ನಡಿ ಬೇಕಾ? ಎಂದು ಪ್ರಚಾರದ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ ಮಾಡಿದ್ದಾರೆ.

ಇವರು ನೇಮಿಸಿದ ರಾಜ್ಯಪಾಲರು ಹೇಳ್ತಾರೆ. ಗೋವಾದ ಪ್ರಬುದ್ಧ ಮತದಾರರು ಭ್ರಮನಿರಸನಗೊಂಡಿದ್ದಾರೆ. ಹತ್ತು ವರ್ಷದಿಂದ ಬಿಜೆಪಿಯವರು ಏನ್ ಮಾತನಾಡಿದ್ದಾರೋ ಅದನ್ನು ಮಾಡಿಲ್ಲ. ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರಲು ಜನ ನಿರ್ಧಾರ ತಗೆದುಕೊಂಡಿದ್ದಾರೆ ಎಂದು ಗೋವಾದ ಪಣಜಿಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೋವಾ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.