ಇದು ಪುಷ್ಪ ರಿಯಲ್ ಸ್ಟೋರಿ! ಸಿನಿಮಾದ ಮಾದರಿಯಲ್ಲೇ ರಕ್ತ ಚಂದನ ಸಾಗಿಸಲು ಹೋಗಿ ಸಿಕ್ಕಿಬಿದ್ದ ಖತರ್ನಾಕ್
ಅಂದಹಾಗೆ ಸಿಕ್ಕಿಬಿದ್ದ ಆರೋಪಿ ಹೆಸರು ಯಾಸಿನ್ ಇನಾಯತ್. ಆನೇಕಲ್ ಮೂಲದವನು. ಈತ ಕೂಡ ಪುಷ್ಪ ಸಿನಿಮಾದಲ್ಲಿರುವಂತೆ 407 ವಾಹನ ರೆಡಿ ಮಾಡಿಕೊಂಡಿದ್ದಾನೆ. ಮೊದಲಿಗೆ ರಕ್ತ ಚಂದನದ ತುಂಡುಗಳನ್ನು ಲೋಡ್ ಮಾಡಿದ್ದಾನೆ.
ಬೆಳಗಾವಿ: ಪುಷ್ಪ ಸಿನಿಮಾದ ಮಾದರಿಯಲ್ಲೇ ಖತರ್ನಾಕ್ ಕಳ್ಳನೊಬ್ಬ ರಕ್ತ ಚಂದನ ಸಾಗಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಅಷ್ಟಕ್ಕೂ ಆಸಾಮಿ ರಕ್ತ ಚಂದನ ಸಾಗಿಸಲು ಮಾಡಿದ ಮಾಸ್ಟರ್ ಪ್ಲ್ಯಾನ್ ಹೇಗಿತ್ತು? ರಾಜ್ಯದ ಗಡಿ ದಾಟಿದ್ದ ಕಳ್ಳ ಮಹಾರಾಷ್ಟ್ರ ಪೊಲೀಸರ ಕೈಯಲ್ಲಿ ತಗ್ಲಾಕ್ಕೊಂಡಿದ್ದು ಹೇಗೆ ರಿಯಲ್ ಪುಷ್ಪನ ಸಂಪೂರ್ಣ ಪಿಕ್ಚರ್ ಇಲ್ಲಿ ಓದಿ. ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ನೀವು ನೋಡಿರ್ತೀರಾ. ಅದರಲ್ಲಿ ಹಾಲಿನ ಟ್ಯಾಂಕ್.. ಟ್ಯಾಂಕ್‌ನ ಕೆಳಗೆ ರಕ್ತ ಚಂದನದ ತುಂಡುಗಳಿದ್ರೆ ಮೇಲೆ ಹಾಲಿನ ಟ್ಯಾಂಕ್ ದೃಶ್ಯ ನೋಡಿರ್ತೀರಾ. ಸೇಮ್ ಅದೇ ಮಾದರಿಯಲ್ಲಿ ಇಲ್ಲೊಬ್ಬ ಭೂಪ ರಕ್ತ ಚಂದನ ಸಾಗಿಸಲು ಹೋಗಿ ಸಿಕ್ಕಿ ಬಿದ್ದಿದ್ದಾನೆ.
ಈ ದೃಶ್ಯವನ್ನ ಈ ಭೂಪ ಅದೆಷ್ಟು ಬಾರಿ ನೋಡಿದ್ನೋ ಗೊತ್ತಿಲ್ಲ. ಈ ಸಿನಿಮಾದಲ್ಲಿ ಹೀರೋ ರಕ್ತ ಚಂದನ ಸಾಗಿಸಲು ಮಾಡೋ ಪ್ಲ್ಯಾನ್‌ಗಳನ್ನೆಲ್ಲಾ ನೋಡಿದ್ದ ಈತ. ರಿಯಲ್ ಲೈಫ್‌ನಲ್ಲೂ ರಕ್ತ ಚಂದನ ಸಾಗಿಸಲು ಖತರ್ನಾಕ್ ಪ್ಲ್ಯಾನ್ ಮಾಡಿಕೊಂಡಿದ್ದಾನೆ. ಪುಷ್ಪ ಸಿನಿಮಾದಿಂದ ಇನ್ಸ್‌ಫಿರೇಷನ್ ಪಡೆದ ಈತ, ಹೀರೋ ರೀತಿ ರಕ್ತ ಚಂದನ ಸಾಗಿಸಲು ಹೋಗಿ ಸಿಕ್ಕಿಬಿದ್ದಿದ್ದಾನೆ.
ಮೇಲೆ ಅಗತ್ಯ ಸಾಮಗ್ರಿ ಬೋರ್ಡ್.. ಒಳಗೆ ರಕ್ತ ಚಂದನ..! ಅಂದಹಾಗೆ ಸಿಕ್ಕಿಬಿದ್ದ ಆರೋಪಿ ಹೆಸರು ಯಾಸಿನ್ ಇನಾಯತ್. ಆನೇಕಲ್ ಮೂಲದವನು. ಈತ ಕೂಡ ಪುಷ್ಪ ಸಿನಿಮಾದಲ್ಲಿರುವಂತೆ 407 ವಾಹನ ರೆಡಿ ಮಾಡಿಕೊಂಡಿದ್ದಾನೆ. ಮೊದಲಿಗೆ ರಕ್ತ ಚಂದನದ ತುಂಡುಗಳನ್ನು ಲೋಡ್ ಮಾಡಿದ್ದಾನೆ. ಬಳಿಕ ಅದರ ಮೇಲೆ ಹಣ್ಣು, ತರಕಾರಿ ಬಾಕ್ಸ್‌ಗಳನ್ನಿಟ್ಟು ಕವರ್ ಮಾಡಿ, ವಾಹನದ ಮೇಲೆ ಕೊವಿಡ್ 19 ಅಗತ್ಯ ಸಾಮಾಗ್ರಿಗಳು ಅಂತಾ ಬೋರ್ಡ್ ಹಾಕ್ಕೊಂಡು ಬೆಂಗಳೂರಿನಿಂದ ಮಹಾರಾಷ್ಟ್ರದತ್ತ ತೆರಳಿದ್ದಾನೆ. ರಾಜ್ಯದಲ್ಲಿ ಎಲ್ಲೂ ತಗ್ಲಾಕಿಕೊಳ್ಳದ ಈತ ಬಾರ್ಡರ್ ದಾಟುತ್ತಿದ್ದಂತೆ ಬ್ಯಾಡ್ ಟೈಮ್ ಶುರುವಾಗಿದೆ. ಮಹಾರಾಷ್ಟ್ರದ ಮಿರಜ್ ಬಳಿ ಈತನ ವಾಹನ ತಡೆದ ಪೊಲೀಸರು ಇಂಚಿಂಚೂ ಜಾಲಾಡಿದ್ದಾರೆ. ಹಣ್ಣು ಹಾಗೂ ತರಕಾರಿ ಟ್ರೇಗಳನ್ನ ಕೆಳಗೆ ಇಳಿಸಿ ನೋಡಿದ ಪೊಲೀಸರು ಶಾಕ್ ಆಗಿದ್ದಾರೆ. ಕೆಳಗೆ ಇದ್ದ ರಕ್ತ ಚಂದನದ ತುಂಡುಗಳನ್ನ ನೋಡಿ ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಯಾಸಿನ್‌ನನ್ನು ಬಂಧಿಸಿ, ಸುಮಾರು 2ಕೋಟಿ 45ಲಕ್ಷ ಮೌಲ್ಯದ ರಕ್ತ ಚಂದನವನ್ನ ವಶಕ್ಕೆ ತೆಗೆದುಕೊಂಡಿದ್ದಾರೆ.
ಅಂದಹಾಗೆ ಕರ್ನಾಟಕದಲ್ಲಿ ಬೆಳೆಯುವ ರಕ್ತ ಚಂದನವನ್ನ ಕೆಲ ಖದೀಮರು ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಆದ್ರೆ ರಾಜ್ಯದಲ್ಲಿರುವ ಎಲ್ಲಾ ಚೆಕ್ ಪೋಸ್ಟ್‌ಗಳನ್ನ ತಪ್ಪಿಸಿಕೊಂಡು ಬಂದಿದಾದ್ರೂ ಹೇಗೆ ಅನ್ನೋ ಅನುಮಾನ ಮೂಡಿದ್ದು, ಕರ್ನಾಟಕ ಪೊಲೀಸರು ಸಹ ಅಲರ್ಟ್ ಆಗ್ಬೇಕಿದೆ.
ವರದಿ: ಸಹದೇವ ಮಾನೆ, ಟಿವಿ9 ಬೆಳಗಾವಿ
ಇದನ್ನೂ ಓದಿ: ಸಿಎಂ ಬೊಮ್ಮಾಯಿ ಜೊತೆ ಸಭೆ ಎಫೆಕ್ಸ್: ಬೆಂಗಳೂರಿನಲ್ಲಿ ಸದ್ಯಕ್ಕೆ ವಾಹನ ಟೋಯಿಂಗ್ ಕ್ಯಾನ್ಸಲ್ ಎಂದ ಆಯುಕ್ತ ಕಮಲ್ ಪಂತ್