ಸಿಎಂ ಬೊಮ್ಮಾಯಿ ಜೊತೆ ಸಭೆ ಎಫೆಕ್ಸ್: ಬೆಂಗಳೂರಿನಲ್ಲಿ ಸದ್ಯಕ್ಕೆ ವಾಹನ ಟೋಯಿಂಗ್ ಕ್ಯಾನ್ಸಲ್ ಎಂದ ಆಯುಕ್ತ ಕಮಲ್ ಪಂತ್
ಟ್ರಾಫಿಕ್ ಪೊಲೀಸರ ಆಟಾಟೋಪಗಳ ಬಗ್ಗೆ ಜನ ರೋಸಿಹೋಗಿದ್ದು, ಅಮಾನವೀಯವಾಗಿ ನಡೆದುಕೊಳ್ಳುವ ಟ್ರಾಫಿಕ್ ಪೊಲೀಸರ ಕಿವಿಹಿಂಡಿ ಎಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಮನಕ್ಕೂ ತಮ್ಮ ಪಡಿಪಾಟಲನ್ನು ರಾಜಧಾನಿಯ ಜನ ತಂದಿದ್ದರು. ಅದರಿಂದ ಎಚ್ಚೆತ್ತ ಸಿಎಂ ಬೊಮ್ಮಾಯಿ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಹನ ಟೋಯಿಂಗ್ ಕ್ಯಾನ್ಸಲ್ ಮಾಡಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಮೂಲಕ ಹೇಳಿಸಿದ್ದಾರೆ.
ಬೆಂಗಳೂರು: ಬೆಂಗಳೂರು ಟ್ರಾಫಿಕ್ ಪೊಲೀಸರ ಆಟಾಟೋಪಗಳ ಬಗ್ಗೆ ಜನ ರೋಸಿಹೋಗಿದ್ದು, ಅಮಾನವೀಯವಾಗಿ ನಡೆದುಕೊಳ್ಳುವ ಟ್ರಾಫಿಕ್ ಪೊಲೀಸರ ಕಿವಿಹಿಂಡಿ ಎಂದು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (basavaraj bommai) ಗಮನಕ್ಕೂ ತಮ್ಮ ಪಡಿಪಾಟಲನ್ನು ರಾಜಧಾನಿಯ ಜನ ತಂದಿದ್ದರು. ಅದರಿಂದ ಎಚ್ಚೆತ್ತ ಸಿಎಂ ಬೊಮ್ಮಾಯಿ ಸೋಮವಾರ ಹಿರಿಯ ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಅದರ ಫಲಶೃತಿ ಎಂಬಂತೆ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಹನ ಟೋಯಿಂಗ್ (towing) ಕ್ಯಾನ್ಸಲ್ ಮಾಡಿ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಮೂಲಕ ಹೇಳಿಸಿದ್ದಾರೆ (bangalore traffic police).
ಟ್ರಾಫಿಕ್ ಪೊಲೀಸರ ಟೋಯಿಂಗ್ ಬಗ್ಗೆ ಸಾರ್ವಜನಿಕವಾಗಿ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡಿದೆ. ಈ ಬಗ್ಗೆ ಈಗ ಸ್ವತಃ ಸಿಎಂ ಬೊಮ್ಮಾಯಿ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಸಭೆಯ ನಂತರ ಮಾತನಾಡಿದ ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ ಏನು ಹೇಳಿದ್ರು ಕೇಳಿ…
ಇದನ್ನೂ ಓದಿ:
Kempakki: ಕೆಂಪಕ್ಕಿ ಸೇವನೆಯಿಂದ ಯಾವೆಲ್ಲ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಗೊತ್ತಾ?