AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kempakki: ಕೆಂಪಕ್ಕಿ ಸೇವನೆಯಿಂದ ಯಾವೆಲ್ಲ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಗೊತ್ತಾ?

Rajamudi Rice: ತೂಕ ಇಳಿಸುವ ಇಚ್ಛೆ ನಿಮ್ಮಲ್ಲಿ ಬಲವಾಗಿದ್ದು ಹಲವಾರು ಪ್ರಯತ್ನಗಳನ್ನು ಮಾಡಿಯೂ ವಿಫಲರಾಗಿದ್ದೀರಿ ಎಂದಾದಲ್ಲಿ ಕೆಂಪಕ್ಕಿ ಸೇವನೆ ಆರಂಭಿಸಿ. ದೇಹದ ಬೊಜ್ಜನ್ನು ಕಡಿಮೆ ಮಾಡಲು ಕೆಂಪಕ್ಕಿಯು ಸಹಕಾರಿಯಾಗಿದೆ. ಕೆಂಪಕ್ಕಿಯಲ್ಲಿ ನಾರಿನಾಂಶವಿದ್ದು, ಇದು ನಿಮ್ಮ ಜೀರ್ಣ ವ್ಯವಸ್ಥೆಯನ್ನು ಸುಧಾರಿಸುತ್ತದೆ.

Kempakki: ಕೆಂಪಕ್ಕಿ ಸೇವನೆಯಿಂದ ಯಾವೆಲ್ಲ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಗೊತ್ತಾ?
Kempakki: ಕೆಂಪಕ್ಕಿ ಸೇವನೆಯಿಂದ ಯಾವೆಲ್ಲ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಗೊತ್ತಾ?
TV9 Web
| Edited By: |

Updated on: Feb 01, 2022 | 6:06 AM

Share

ಕೆಂಪಕ್ಕಿಯಲ್ಲಿ (Rajamudi Rice) ಪ್ರಧಾನವಾಗಿ ಡಯೆಟರಿ ಫೈಬರ್ ಅಂಶ ಅಧಿಕವಾಗಿರುವುದರಿಂದ ಅದು (Kempakki) ನಿಮ್ಮ ಹೃದಯದ ಆರೋಗ್ಯವನ್ನು ಜೋಪಾನ ಮಾಡುತ್ತದೆ. ದೈನಂದಿನ ಆಹಾರದಲ್ಲಿ ಅನ್ನವನ್ನು ಊಟ ಮಾಡದವರು ಯಾರಿದ್ದಾರೆ ಹೇಳಿ? ಅದರಲ್ಲೂ ದಕ್ಷಿಣ ಭಾರತದವರಿಗೆ ಅನ್ನ ಹಾಗೂ ಅನ್ನದಿಂದ ಮಾಡಿದ ತಿಂಡಿ ತಿನಿಸುಗಳೆಂದರೆ ಬಲು ಪ್ರೀತಿ. ಆದರೆ ಹೆಚ್ಚು ಅನ್ನ ಊಟ ಮಾಡಿದರೆ ದೇಹದಲ್ಲಿ ಕೊಬ್ಬು ಉಂಟಾಗಿ ತೂಕ ಹೆಚ್ಚಾಗುತ್ತದೆ ಎಂಬ ಸಾಮಾನ್ಯ ಕೂಗು/ಕೊರಗು ಇದೆ. ಅನ್ನದ ಬದಲಿಗೆ ಯಾವುದೇ ಇತರ ಆಹಾರವನ್ನು ಸೇವಿಸಿದರೂ ಅನ್ನ ನೀಡುವಷ್ಟು ತೃಪ್ತಿ ಹಾಗೂ ರುಚಿ ಮತ್ಯಾವುದೇ ಆಹಾರ ನೀಡಲು ಸಾಧ್ಯವಿಲ್ಲ. ಅನ್ನಕ್ಕೆ ಅನ್ನವೇ ಸಾಟಿ. ಅನ್ನಂ ಪರಬ್ರಹ್ಮಂ ಅಂತಾ ಅನ್ನವನ್ನು ಸಾಕ್ಷಾತ್ ಭಗವಂತನಿಗೇ ಹೋಲಿಸುವುದುಂಟು (Annam Parabrahma Swaroopam).

ನಿಮಗೆ ಅನ್ನ ಊಟ ಮಾಡಲೇಬೇಕು ಎಂದಾದಲ್ಲಿ ಬಿಳಿ ಅನ್ನದ ಬದಲಿಗೆ ಕೆಂಪಕ್ಕಿಯನ್ನು ನೀವು ಆಯ್ಕೆ ಮಾಡಬಹುದು. ಕೆಂಪಕ್ಕಿಗೆ ರೆಡ್​ ರೈಸ್, ರಾಜಮುಡಿ ಅಕ್ಕಿ, ಕುಚ್ಚಲಕ್ಕಿ ಎಂಬ ಹೆಸರೂ ಇದೆ. ಬೇರೆ ಅಕ್ಕಿಗಳಿಗೆ ಹೋಲಿಸಿದರೆ ಇದು ಬೇಯಲು ಹೆಚ್ಚು ಸಮಯ ತಗಲುತ್ತದೆ ಮತ್ತು ಚೆನ್ನಾಗಿ ಅಗೆದು ಸೇವಿಸಬೇಕಾಗುತ್ತದೆ. ಕುಚ್ಚಲಕ್ಕಿಯನ್ನೇ ಹೋಲುವ ಬ್ರೌನ್ ರೈಸ್‌ನಲ್ಲಿ ಜೀವಾಂಕುರ ಪದರ, ಹೊಟ್ಟು ಪಾರ್ಶ್ವ ಸಿಪ್ಪೆ ಹಾಗೆಯೇ ಇರುತ್ತದೆ. ಕೆಂಪಕ್ಕಿ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜಗಳಿವೆ.

ಮಧುಮೇಹದ ಅಪಾಯ ಕಡಿಮೆ: ಕೆಂಪಕ್ಕಿಯು ಗ್ಲೈಸಮಿಕ್ ಇಂಡೆಕ್ಸ್ (ಜಿಐ -Glycemic Index) ಅನ್ನು ಹೊಂದಿರುವುದರಿಂದ ಇದರ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗುವುದಿಲ್ಲ. ಮೂರು ಬಾರಿ ಈ ಅಕ್ಕಿಯಿಂದ ಮಾಡಿದ ಅನ್ನ ಸೇವನೆ ಮಾಡುವುದರಿಂದ ಟೈಪ್ 2 ಮಧುಮೇಹದ ಅಪಾಯವನ್ನು 32% ರಷ್ಟು ಕಡಿಮೆ ಮಾಡಬಹುದಾಗಿದೆ. ಅದೇ ಬಿಳಿ ಅನ್ನದಿಂದ ಮಧುಮೇಹದ ಅಪಾಯ ಹೆಚ್ಚು. ಬಿಳಿ ಅನ್ನದಿಂದ ಮಧುಮೇಹದ ಅಪಾಯವು 17 % ಹೆಚ್ಚಾಗುತ್ತದೆ.

ಹೃದಯದ ಆರೋಗ್ಯ ಕಾಪಾಡಲು: ಕೆಂಪಕ್ಕಿಯು ನಿಮ್ಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಇದರಲ್ಲಿ ಡಯೆಟರಿ ಫೈಬರ್ ಅಂಶ ಅಧಿಕವಿರುವುದರಿಂದ ಹೃದಯ ಕಾಯಿಲೆಯಿಂದ ಮರಣ ಹೊಂದುವ ಅಪಾಯ ಕೂಡ ಕಡಿಮೆ. ಕೆಂಪಕ್ಕಿಯಲ್ಲಿ ಹೆಚ್ಚು ಪ್ರಮಾಣದ ಮೆಗ್ನೀಷಿಯಂ ಇದ್ದು ಇದರಿಂದ ಪಾರ್ಶ್ವವಾಯು ಹಾಗೂ ಹೃದಯ ಕಾಯಿಲೆಗೆ ಒಳಗಾಗುವ ಅಪಾಯ ತುಂಬಾ ಕಡಿಮೆ.

ತೂಕ ಇಳಿಸುವ ಇಚ್ಛೆ ನಿಮ್ಮಲ್ಲಿ ಬಲವಾಗಿದ್ದು ಹಲವಾರು ಪ್ರಯತ್ನಗಳನ್ನು ಮಾಡಿಯೂ ವಿಫಲರಾಗಿದ್ದೀರಿ ಎಂದಾದಲ್ಲಿ ಕೆಂಪಕ್ಕಿ ಸೇವನೆ ಆರಂಭಿಸಿ. ದೇಹದ ಬೊಜ್ಜನ್ನು ಕಡಿಮೆ ಮಾಡಲು ಕೆಂಪಕ್ಕಿಯು ಸಹಕಾರಿಯಾಗಿದೆ.

ಸಂತಾನೋತ್ಪತ್ತಿಗೆ ಸಹಕಾರಿ: ಕೆಂಪಕ್ಕಿಯಲ್ಲಿರುವ ಮ್ಯಾಂಗನೀಸ್ ಅಂಶವು ದೇಹದಲ್ಲಿ ಕೊಬ್ಬು ಸಂಗ್ರಹಣೆಯಾಗದಂತೆ ಮಾಡುತ್ತದೆ. ಈ ಮ್ಯಾಂಗನೀಸ್ ಸಂತಾನೋತ್ಪತ್ತಿ ವ್ಯವಸ್ಥೆಗೆ ಪೂರಕವಾಗಿದೆ.

ಜೀರ್ಣಕ್ರಿಯೆ ಸುಲಭ: ಕೆಂಪಕ್ಕಿಯಲ್ಲಿ ನಾರಿನಾಂಶವಿದ್ದು, ಇದು ನಿಮ್ಮ ಜೀರ್ಣ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಅಜೀರ್ಣ ಉಂಟಾಗದಂತೆ ತಡೆಯುತ್ತದೆ.

ಕ್ಯಾನ್ಸರ್‌ಗೆ ಔಷಧ: ಕೆಂಪಕ್ಕಿಯಲ್ಲಿ ಹೇರಳವಾಗಿರುವ ನಾರಿನಾಂಶ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳು ಸ್ತನ ಕ್ಯಾನ್ಸರ್‌ ನಂತಹ ಅಪಾಯಕಾರಿ ಕಾಯಿಲೆಗಳನ್ನು ಬುಡದಲ್ಲೇ ಚಿವುಟಿ ಹಾಕುತ್ತದೆ.

Follow Us
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಹರಿಹರ ಪಂಚಮಸಾಲಿ ಮಠದ ಮುಂದೆ ಭಕ್ತರ ಗಲಾಟೆ!
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ಅಂಕ ಮುಖ್ಯವಲ್ಲ, ಮಗ ಪಾಸಾಗಿದ್ದೇ ದೊಡ್ಡ ಸಂಭ್ರಮ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ನ್ಯೂಸ್ ಪೇಪರ್ ವಿತರಕನ ಮೇಲೆ ಬೀದಿ ನಾಯಿ ದಾಳಿ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ
ಚಿಕ್ಕಮಗಳೂರು: ತಮ್ಮದೇ ಹೆಸರಿನ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ