ಜಮೀನು ಗಲಾಟೆ: ಸತೀಶ್ ಜಾರಕಿಹೊಳಿ ಆಪ್ತನಿಗೆ ಗದಗ ಪಿಎಸ್​ಐನಿಂದ ಬೆದರಿಕೆ ಆರೋಪ

Belagavi News: ಜಮೀನು ವಿಚಾರವಾಗಿ ಸತೀಶ್ ಜಾರಕಿಹೊಳಿ ಆಪ್ತನಿಗೆ ಪಿಎಸ್​ಐನಿಂದ ಬೆದರಿಕೆ ಆರೋಪ ಕೇಳಿಬಂದಿದೆ. ಜಿಲ್ಲೆಯ ಕಿತ್ತೂರು ತಾಲೂಕಿನ ಕುಲವಳ್ಳಿ ಗ್ರಾಮದ ಜಮೀನು ವಿಚಾರಕ್ಕೆ ಗದಗ ಡಿಸಿಆರ್​ಬಿ (DCRB) ಪಿಎಸ್ಐ ಗೋಪಾಲ ‌ಹಳ್ಳೂರನಿಂದ ಸತೀಶ್ ಜಾರಕಿಹೊಳಿ ಆಪ್ತ ಹಬೀಬ್ ಶಿಲೇದಾರ್​ಗೆ ಧಮ್ಕಿ ಆರೋಪ ಮಾಡಲಾಗಿದೆ.

ಜಮೀನು ಗಲಾಟೆ: ಸತೀಶ್ ಜಾರಕಿಹೊಳಿ ಆಪ್ತನಿಗೆ ಗದಗ ಪಿಎಸ್​ಐನಿಂದ ಬೆದರಿಕೆ ಆರೋಪ
ಸತೀಶ್ ಜಾರಕಿಹೊಳಿ ಆಪ್ತ ಹಬೀಬ್ ಶಿಲೇದಾರ್, ಗದಗ DCRB ಪಿಎಸ್ಐ ಗೋಪಾಲ ‌ಹಳ್ಳೂರ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Oct 20, 2023 | 5:02 PM

ಬೆಳಗಾವಿ, ಅಕ್ಟೋಬರ್​​​​ 20: ಜಮೀನು ವಿಚಾರವಾಗಿ ಸತೀಶ್ ಜಾರಕಿಹೊಳಿ (Satish Jarkiholi) ಆಪ್ತನಿಗೆ ಪಿಎಸ್​ಐನಿಂದ ಬೆದರಿಕೆ ಆರೋಪ ಕೇಳಿಬಂದಿದೆ. ಜಿಲ್ಲೆಯ ಕಿತ್ತೂರು ತಾಲೂಕಿನ ಕುಲವಳ್ಳಿ ಗ್ರಾಮದ ಜಮೀನು ವಿಚಾರಕ್ಕೆ ಗದಗ ಡಿಸಿಆರ್​ಬಿ (DCRB) ಪಿಎಸ್ಐ ಗೋಪಾಲ ‌ಹಳ್ಳೂರನಿಂದ ಸತೀಶ್ ಜಾರಕಿಹೊಳಿ ಆಪ್ತ ಹಬೀಬ್ ಶಿಲೇದಾರ್​ಗೆ ಧಮ್ಕಿ ಆರೋಪ ಮಾಡಲಾಗಿದೆ. ಪಿಎಸ್ಐ ಗೋಪಾಲ ಹಳ್ಳೂರ, ಬೈಲಹೊಂಗಲ ಎಸಿ ಪ್ರಭಾವತಿ ಪತಿ ಕೂಡ ಹೌದು. ಜಮೀನು ಕಸಿದುಕೊಳ್ಳುವ ಹುನ್ನಾರ ಹಿನ್ನೆಲೆ ಹಬೀಬ್ ಶಿಲೇದಾರ್​ ರೈತರ ಪರ ಹೋರಾಟ ಮಾಡಿದ್ದ. ಹಬೀಬ್ ಮಾಲೀಕತ್ವದ ಕಲ್ಯಾಣ ಮಂಟಪಕ್ಕೆ ಹೋಗಿ ಬೆದರಿಕೆ ಆರೋಪ ಮಾಡಿದ್ದು, ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.

ಧಮಕಿ ಹಾಕಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕುಲವಳ್ಳಿ ರೈತರಿಂದ ಕಿತ್ತೂರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡಿದ್ದಾರೆ. ನಿಯಮಬಾಹಿರವಾಗಿ ಕುಲವಳ್ಳಿ ಗ್ರಾಮಸ್ಥರಿಗೆ ಸೇರಿದ ಜಮೀನು ಮಾರಾಟ ಆರೋಪ ಮಾಡಲಾಗಿದೆ. ಪತ್ನಿ ಪ್ರಭಾವತಿ ವಿರುದ್ಧ ಆರೋಪ‌ ಮಾಡಿ ಪ್ರತಿಭಟನೆ ಮಾಡಿದ್ದು, ಇದೇ ವಿಚಾರಕ್ಕೆ ಹಬೀಬ್‌ಗೆ ಜೀವ ಬೆದರಿಕೆ ಆರೋಪ ಮಾಡಲಾಗಿದೆ.

ಲಾರಿ ಚಾಲಕರಿಂದ ಒಟ್ಟು 25 ಸಾವಿರ ರೂಪಾಯಿ ವಸೂಲಿ ಆರೋಪ: ತ್ಯಾಮಗೊಂಡ್ಲು ಪೊಲೀಸರ ವಿರುದ್ಧ ದೂರು

ನೆಲಮಂಗಲ: ದಸರಾ ಆಯುಧ ಪೂಜೆಗೆ ನೀವು ಕೊಡುವ ಮಾಮುಲಿ ಹಣ ಸಾಲುವುದಿಲ್ಲವಂದು ದರ್ಪ ತೋರಿಸಿ ಕಲ್ಲು ಲಾರಿ ಚಾಲಕರಿಂದ ಒಟ್ಟು 25 ಸಾವಿರ ರೂಪಾಯಿ ವಸೂಲಿ ಮಾಡಿದ ಆರೋಪ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಠಾಣೆ ಪಿಎಸ್ಐ, ಕಾನ್ಸ್​ಟೇಬಲ್​ ವಿರುದ್ಧ ಕೇಳಿಬಂದಿದೆ. ಈ ಬಗ್ಗೆ ಎಸ್​ಪಿಗೆ ದೂರು ನೀಡಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಕದ್ದ ವಾಹನಗಳಲ್ಲೇ ಸುಲಿಗೆ ಮಾಡುತ್ತಿದ್ದ ದುಷ್ಕರ್ಮಿಗಳು: 6 ಆರೋಪಿಗಳ ಬಂಧನ

ಪಿಎಸ್ಐ ದಿವ್ಯ, ಕಾನ್​ಸ್ಟೇಬಲ್ ಶ್ರೀನಿವಾಸ್ ವಿರುದ್ಧ ಲಾರಿ ಮಾಲಿಕ ನವೀದ್ ಎಂಬವರು ದೂರು ನೀಡಿದ್ದಾರೆ. ಆಯುಧ ಪೂಜೆಗೆ ಠಾಣೆ ಸಾಮಾಗ್ರಿಗಳನ್ನು ಇಟ್ಟು ಪೂಜೆ ಸಲ್ಲಿಸಲು ಹೆಚ್ಚು ಹಣ ಖರ್ಚು ಆಗುತ್ತದೆ. ಹೀಗಾಗಿ ಮಾಮೂಲು 100 ಕೊಟ್ಟರೆ ಸಾಲುವುದಿಲ್ಲ ಎಂದು ಕಾನ್ಸ್‌ಟೇಬಲ್ ದರ್ಪ ತೋರಿಸಿದ್ದಾಗಿ ಆರೋಪಿಸಿದ್ದರು.

ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಗನ್​ ಹಿಡಿದು ಸದಸ್ಯನಿಂದ ಬೆದರಿಕೆ

ವಿಜಯಪುರ: ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸದಸ್ಯನೇ ಬೆದರಿಕೆ ಹಾಕಿದ ಘಟನೆ ಜಿಲ್ಲೆಯ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮ ಪಂಚಾಯತಿಯಲ್ಲಿ ಇತ್ತೀಚೆಗೆ ನಡೆದಿತ್ತು. ಪರವಾನಿಗೆ ಹೊಂದಿದ ಪಿಸ್ತೂಲ್ ಸಹಿತ ಗ್ರಾಮಪಂಚಾಯತಿಗೆ ಆಗಮಿಸಿದ್ದ ಗ್ರಾಮ ಪಂಚಾಯತಿ ಸದಸ್ಯ ಜಾಕೀರ್ ಮನಿಯಾರ್ ಎಂಬಾತ ಪಿಡಿಓಗೆ ವಿಶ್ವನಾಥ್​ ರಾಠೋಡ್​ಗೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:50 pm, Fri, 20 October 23