ಬೆಳಗಾವಿ: ಜಿಲ್ಲೆಯ ಕ್ಯಾಂಪ್ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ ಹಿನ್ನೆಲೆ ಇಂದು ಕೂಡ ಬೆಳಗಾವಿಯ 22 ಸರ್ಕಾರಿ, ಖಾಸಗಿ ಶಾಲೆಗೆ ರಜೆ ಘೋಷಣೆ ಮಾಡಿದ್ದು, ಆನ್‌ಲೈನ್‌ನಲ್ಲಿ ತರಗತಿ ನಡೆಸುವಂತೆ ಶಾಲಾ ಆಡಳಿತ ಮಂಡಳಿಗೆ ಡಿಸಿ ನಿತೇಶ್ ಪಾಟೀಲ್ ಸೂಚನೆ ನೀಡಿದ್ದಾರೆ. ಇಂದು ಕೂಡ ಚಿರತೆಗಾಗಿ ಹುಡುಕಾಟ ಮುಂದುವರಿಯಲಿದ್ದು, ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರಿಂದ ಕಾರ್ಯಾಚರಣೆ ನಡೆಯಲಿದೆ. ಮೂರು ದಿನವಾದ್ರೂ ಗಾಲ್ಫ್ ಮೈದಾನದಲ್ಲಿ ಚಿರತೆ ಸಿಗದ ಹಿನ್ನೆಲೆ, ಹನುಮಾನ ನಗರ, ಜಾಧವ್ ನಗರ, ಕ್ಯಾಂಪ್ ಪ್ರದೇಶದ ಜನರು ಭಯದಲ್ಲಿ ಓಡಾಡುವಂತ್ತಾಗಿದೆ.
ಇದನ್ನೂ ಓದಿ: Belagavi News: ಚಿರತೆ ಸೆರೆಗೆ ಮುಂದುವರಿದ ಕಾರ್ಯಾಚರಣೆ, ಶೂಟರ್ಸ್ಗೆ ಬುಲಾವ್, ವಿಶೇಷ ಡ್ರೋಣ್ ಬಳಕೆ
ಸಕ್ರೆಬೈಲ್ದಿಂದ ಬೆಳಗಾವಿಗೆ ಎರಡು ಆನೆಗಳು ಆಗಮಿಸಿದ್ದು, ಜಿಲ್ಲೆಯ ಗಾಲ್ಫ್ ಮೈದಾನದಲ್ಲಿ ಆನೆಗಳು ಬಿಡು ಬಿಟ್ಟಿವೆ. ಸಕ್ರೆಬೈಲ್ನಿಂದ ಆಲೇ, ಅರ್ಜುನ ಎಂಬ ಆನೆಗಳು ಆಗಮಿಸಿದ್ದು, ಮಧ್ಯರಾತ್ರಿ ಎರಡು ಗಂಟೆಗೆ ಆಗಮನ ಹಿನ್ನೆಲೆ ಸದ್ಯ ಆನೆಗಳು ವಿಶ್ರಾಂತಿ ಪಡೆಯುತ್ತಿವೆ. ಬೆಳಗ್ಗೆ ಹತ್ತು ಗಂಟೆಯಿಂದ ಆನೆಗಳಿಂದ ಚಿರತೆ ಶೋಧಕಾರ್ಯ ಆರಂಭವಾಗಲಿದೆ. ಮೂರು ದಿನಗಳಿಂದ ಗಾಲ್ಫ್ ಮೈದಾನದಲ್ಲಿ ಚಿರತೆ ನಾಪತ್ತೆಯಾಗಿದೆ.
ಶಾಸಕ ಅನಿಲ್ ಬೆನಕೆ ಭೇಟಿ:
ಗಾಲ್ಫ್ ಮೈದಾನಕ್ಕೆ ಶಾಸಕ ಅನಿಲ್ ಬೆನಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರೊಂದಿಗೆ ಚರ್ಚಿಸಿ ಅಗತ್ಯ ಮಾಹಿತಿ ಪಡೆದುಕೊಂಡರು. ನಿನ್ನೆಯೂ ಕಾರ್ಯಾಚರಣೆ ಮುಗಿಯುವವರೆಗೂ ಶಾಸಕರು ಸ್ಥಳದಲ್ಲಿಯೇ ಬಿಡುಬಿಟ್ಟಿದ್ದರು. ಕಾರ್ಯಾಚರಣೆ ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲಿಸಿದರು. ಚಿರತೆ ಪತ್ತೆಗಾಗಿ ಬೆಂಗಳೂರಿನಿಂದ ವಿಶೇಷ ತಂತ್ರಜ್ಞಾನದ ಡ್ರೋನ್ ತರಲಾಗಿದೆ. ಗಾಲ್ಫ್ ಮೈದಾನದ ಸಿಬ್ಬಂದಿ ಗಸ್ತು ತಿರುಗುತ್ತಿಇದ್ದಅರೆ. ಇಂದು ಚಿರತೆ ಹಿಡಿಯಲು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಆಲ್ಗೊರಿದಮ್ ಡ್ರೋಣ್ ಬಳಕೆ
ಗಾಲ್ಫ್ ಮೈದಾನದಲ್ಲಿ ಅಡಗಿರುವ ಚಿರತೆಯ ಶೋಧ ಕಾರ್ಯಕ್ಕಾಗಿ ಅಲ್ಗೋರಿದಮ್ ತಂತ್ರಜ್ಞಾನದ ಡ್ರೋಣ್ ಬಳಸಲಾಗುತ್ತಿದೆ. ಬೆಂಗಳೂರಿನಿಂದ ಆಗಮಿಸಿರುವ ವಿಶೇಷ ತಂಡವು ಕಾರ್ಯಾಚರಣೆಗೆ ಮುಂದಾಗಿದೆ. ಈ ಡ್ರೋಣ್ ಗಾಲ್ಫ್ ಮೈದಾನದ 250 ಎಕರೆ ಪ್ರದೇಶವನ್ನು ಇಡಿಯಾಗಿ ಸ್ಕ್ಯಾನ್ ಮಾಡಲಿದೆ. ಪ್ರಾಣಿಗಳ ಎಲುಬುಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಈ ಡ್ರೋಣ್ಗೆ ಇದೆ. ಎಲುಬು ಪತ್ತೆಯಾದ ನಂತರ ಅದರ ಆಧಾರದ ಮೇಲೆ ಚಿರತೆ ಸೆರೆಗೆ ಕಾರ್ಯಾಚರಣೆ ಜರವೀಜ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆಯಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:50 am, Wed, 24 August 22