Corruption In Karnataka: ಮೃತ ಗುತ್ತಿಗೆದಾರ ಸಂತೋಷ್ ಪತ್ನಿಯಿಂದ ರಾಜ್ಯಪಾಲರಿಗೆ ಪತ್ರ: ಪಾರದರ್ಶಕ ತನಿಖೆಗೆ ಆಗ್ರಹ
ಪಾರದರ್ಶಕ ತನಿಖೆ ನಡೆಸುವಂತೆ ತನಿಖಾಧಿಕಾರಿಗಳಿಗೆ ಸೂಚಿಸಲು ರಾಜ್ಯಪಾಲರಿಗೆ ಜಯಶ್ರೀ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ಬೆಳಗಾವಿ: ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ (Santosh Suicide Case) ಸಂಬಂಧ ಪಾರದರ್ಶಕ ತನಿಖೆಗೆ ಆಗ್ರಹಿಸಿ ಮೃತ ಸಂತೋಷ ಪತ್ನಿ ಜಯಶ್ರೀ ರಾಜ್ಯಪಾಲರ ಮೊರೆ ಹೋಗಿದ್ದು, ಪತ್ರ ಬರೆಯಲಾಗಿದೆ. ಆತ್ಮಹತ್ಯೆ ಪ್ರಕರಣದ ತನಿಖೆ ಬಗ್ಗೆ ಪತ್ನಿ ಅನುಮಾನ ವ್ಯಕ್ತಪಡಿಸಿದ್ದು, ಪ್ರಮುಖ ಆರೋಪಿ ಮಾಜಿ ಸಚಿವ ಈಶ್ವರಪ್ಪ ನಿರ್ದೇಶನದಂತೆ ತನಿಖೆ ನಡೆಯುತ್ತಿದೆಯಂತೆ. ಕೇವಲ 15 ದಿನದಲ್ಲಿ ಕೇಸ್ನಲ್ಲಿ ಆರೋಪ ಮುಕ್ತನಾಗಿ ಬರುತ್ತೇನೆಂದು ಮಾಜಿ ಸಚಿವ ಈಶ್ವರಪ್ಪ ನೀಡಿದ ಹೇಳಿಕೆಯನ್ನ ಪತ್ರದಲ್ಲಿ ಜಯಶ್ರೀ ಉಲ್ಲೇಖಿಸಿದ್ದಾರೆ. ಈಶ್ವರಪ್ಪ ಮಾಜಿ ಉಪಮುಖ್ಯಂತ್ರಿ, ಬಿಜೆಪಿ ಮಾಜಿ ರಾಜಾಧ್ಯಕ್ಷ, ಪ್ರಭಾವಿ ಶಾಸಕರಾಗಿದ್ದು, ತಮ್ಮ ಹಣಬಲ, ರಾಜಕೀಯ ಬಲ ಬಳಿಸಿ ಆತ್ಮಹತ್ಯೆ ಪ್ರಕರಣದ ತನಿಖೆ ದಿಕ್ಕು ತಪ್ಪಿಸಿರುವ ಅನುಮಾನ ಇದೆ. ಪೊಲೀಸ್ ಅಧಿಕಾರಿಗಳು ಈ ಕೇಸ್ನ ಪ್ರತಿ ಹಂತದ ತನಿಖೆ ಸೋರಿಕೆ ಮಾಡುತ್ತಿದ್ದಾರೆ. ಈ ಮೂಲಕ ಈಶ್ವರಪ್ಪಗೆ ಅನುಕೂಲ ಮಾಡಿ ಕೇಸ್ ಮುಚ್ಚಿ ಹಾಕುವ ಹುನ್ನಾರ ಆರೋಪ ಮಾಡಲಾಗಿದೆ.
ಇದನ್ನೂ ಓದಿ: ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಕೇಸ್ಗೆ ಮತ್ತೊಂದು ಟ್ವಿಸ್ಟ್; ಉಡುಪಿ ಪೊಲೀಸರ ತನಿಖೆ ವೇಳೆ ಮಹತ್ವದ ಮಾಹಿತಿ ಲಭ್ಯ
ಇದೇ ಕಾರಣಕ್ಕಾಗಿ ಈಶ್ವರಪ್ಪ ಬಹಿರಂಗವಾಗಿ ಪ್ರಕರಣದಿಂದ ಹೊರಬರುವ ಮಾತು ಹೇಳಿದ್ದಾರೆ. ಮಾಜಿ ಸಚಿವರ ಮಾತು ಗಮನಿಸಿದರೆ ಅವರ ನಿರ್ದೇಶನದಂತೆ ತನಿಖೆ ನಡೆಯುತ್ತಿದೆ ಅನಿಸುತ್ತಿದೆ. ಕಾನೂನಿನ ಮುಂದೆ ಎಷ್ಟೇ ಪ್ರಭಾವಿಯಾದರೂ ಒಂದೇ ಅಂತಾ ಸಾಬೀತುಪಡಿಸಬೇಕಿದೆ. ಪಾರದರ್ಶಕ ತನಿಖೆ ನಡೆಸುವಂತೆ ತನಿಖಾಧಿಕಾರಿಗಳಿಗೆ ಸೂಚಿಸಲು ರಾಜ್ಯಪಾಲರಿಗೆ ಜಯಶ್ರೀ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಏಪ್ರಿಲ್.12ರಂದು ಉಡುಪಿಯ ಲಾಡ್ಜ್ನಲ್ಲಿ ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಮಾಡಿಕೊಂಡಿದ್ದರು.
Published On - 8:00 am, Fri, 15 July 22