ಬಂದೇ ಬರುವೆ ಬೆಳಗಾವಿಗೆ ಎಂದ ಮಹಾ ಸಚಿವ ದೇಸಾಯಿ: ರೊಚ್ಚಿಗೆದ್ದ ಕನ್ನಡಿಗರಿಂದ ಮಹಾರಾಷ್ಟ್ರ ಲಾರಿಗಳು ಗ್ಲಾಸ್​ ಪೀಸ್​, ಪೀಸ್

| Updated By: ಆಯೇಷಾ ಬಾನು

Updated on: Dec 06, 2022 | 2:57 PM

ಹಿರೇಬಾಗೇವಾಡಿ ಟೋಲ್ ಬಳಿ ಕರವೇ ದಂಡು ಬಂದು ಮಹಾರಾಷ್ಟ್ರದ ಲಾರಿಗಳನ್ನ ಅಡ್ಡಗಟ್ಟಿ ಬೆಳಗಾವಿ ನಮ್ಮದು ನಮ್ಮದು ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ಮಹಾರಾಷ್ಟ್ರದ ಐದು ಲಾರಿಗಳ ಮೇಲೆ ಕಲ್ಲು ತೂರಾಟ ನಡೆದಿದೆ.

ಬಂದೇ ಬರುವೆ ಬೆಳಗಾವಿಗೆ ಎಂದ ಮಹಾ ಸಚಿವ ದೇಸಾಯಿ: ರೊಚ್ಚಿಗೆದ್ದ ಕನ್ನಡಿಗರಿಂದ ಮಹಾರಾಷ್ಟ್ರ ಲಾರಿಗಳು ಗ್ಲಾಸ್​ ಪೀಸ್​, ಪೀಸ್
ಬೆಳಗಾವಿ ಗಡಿಯಲ್ಲಿ ಕನ್ನಡಿಗರಿಂದ ಪ್ರತಿಭಟನೆ
Follow us on

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಬೂದಿ ಮುಚ್ಚಿದ ಕೆಂಡದಂತಾಗಿದೆ. ಕನ್ನಡಿಗರ ಸ್ವಾಭಿಮಾನ ಕೆಣಕಿದ ಮಹಾರಾಷ್ಟ್ರ ಸಚಿವರು, ನಾವು ಬೆಳಗಾವಿ ಬಂದೇ ಬರ್ತೇವೆ ಅಂತ ಸವಾಲ್​ ಹಾಕಿದ್ದಾರೆ. ಇದಕ್ಕೆ ಕೆರಳಿ ಕೆಂಡವಾದ ಕನ್ನಡಿಗರು ಬರ್ತೀರಾ. ಬನ್ನಿ ಒಂದು ಕೈ ನೋಡೇ ಬಿಡೋಣ ಎಂದು ಇವತ್ತು ದೊಡ್ಡ ದಂಡು ಕಟ್ಟಿಕೊಂಡು ಬೆಳಗಾವಿ ಗಡಿಗೆ ನುಗ್ಗಿದ್ದಾರೆ.

ಬೆಳಗಾವಿಯ ಹಿರೇಬಾಗೇವಾಡಿ ಟೋಲ್​ ಅಕ್ಷರಶಃ ರಣಾಂಗಣವಾಗಿದೆ. ಬೆಳಗಾವಿಗೆ ಕರವೇ ಕಾರ್ಯಕರ್ತರು ನುಗ್ಗುತ್ತಿದ್ದಂತೆ ಪೊಲೀಸರು ಹಿರೇಬಾಗೇವಾಡಿ ಟೋಲ್​ ಬಳಿ ಪೊಲೀಸ್ ಬಿಗಿ ಬಂದೂಬಸ್ತ್ ಮಾಡಿದ್ದಾರೆ. ಆದ್ರೆ ಕರವೇ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದೆ. ಮಹಾರಾಷ್ಟ್ರದ 5 ಲಾರಿಗಳ ಗಾಜು ಒಡೆದು, ಮಸಿ ಬಳಿದು ಆಕ್ರೋಶ ಹೊರ ಹಾಕಿದೆ.

ಇದನ್ನೂ ಓದಿ: ಶೀಘ್ರದಲ್ಲೇ ಬೆಳಗಾವಿಗೆ ಭೇಟಿ ನೀಡುತ್ತೇವೆ: ಮಹಾರಾಷ್ಟ್ರ ಸಚಿವ ದೇಸಾಯಿ

ಮಹಾರಾಷ್ಟ್ರ ಲಾರಿಗಳ ಗ್ಲಾಸ್​ ಪೀಸ್​, ಪೀಸ್

ಹಿರೇಬಾಗೇವಾಡಿ ಟೋಲ್ ಬಳಿ ಕರವೇ ದಂಡು ಬಂದು ಮಹಾರಾಷ್ಟ್ರದ ಲಾರಿಗಳನ್ನ ಅಡ್ಡಗಟ್ಟಿ ಬೆಳಗಾವಿ ನಮ್ಮದು ನಮ್ಮದು ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ಮಹಾರಾಷ್ಟ್ರದ ಐದು ಲಾರಿಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಇದರಿಂದ ಲಾರಿಗಳ ಮುಂಭಾಗದ ಗ್ಲಾಸ್​ ಪೀಸ್​ ಪೀಸ್​ ಆಗಿದೆ. ಅಷ್ಟೆ ಅಲ್ಲದೆ ಟೋಲ್​ ಬಳಿ ನಿಂತಿದ್ದ ಮಹಾರಾಷ್ಟ್ರದ ಲಾರಿಗಳಿಗೆ ಕಪ್ಪು ಮಸಿ ಬಳಿಯೋ ಮೂಲಕ ಮಹಾರಾಷ್ಟ್ರಕ್ಕೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಇದೇ ವೇಳೆ ನಂಬರ್​ ಪ್ಲೇಟ್​ ಕಿತ್ತು ಹಾಕಿ, ಲಾರಿಗಳ ಚಕ್ರದ ಗಾಳಿ ತೆಗೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗ ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆದು ಪೊಲೀಸರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಪ್ರತಿಭಟನೆ ಮಾಡುತ್ತಿದ್ದ ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ವಾಯವ್ಯ ಕರ್ನಾಟಕ ಸಾರಿಗೆ ಬಸ್​ನಲ್ಲಿ ತುಂಬಿಸಿ ಕರೆದೊಯ್ದಿದ್ದಾರೆ. ಈ ವೇಳೆ ಪೊಲೀಸರ ವಿರುದ್ಧವೂ ಧಿಕ್ಕಾರ ಕೂಗಿ ಕರವೇ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಕನ್ನಡ ಬಾವುಟ ಹಿಡಿದು ಪೊಲೀಸ್ ವಾಹನದ ಮೇಲೇರಿ ಎಂಇಎಸ್​ ವಿರುದ್ಧ ಘೋಷಣೆ ಕೂಗಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ