ಯಕ್ಷಗಾನ ಸಾಕು, ಈಗ್ಲಾದ್ರೂ ವೀರಭದ್ರರಾಗಿ: ಹಳೇ ವಿಡಿಯೋ ಹಾಕಿ ನಳೀನ್ ಕುಮಾರ್ ವಿರುದ್ಧ ಮಹಾಂತೇಶ್ ವಕ್ಕುಂದ ಆಕ್ರೋಶ

ರಾಜ್ಯಾಧ್ಯಕ್ಷರೇ ತಮ್ಮದೇ ಭಾಷಣದ ತುಣುಕಿದು. ಘಟನೆ ನಡೆದದ್ದೂ ತಮ್ಮ ಜಿಲ್ಲೆಯಲ್ಲೇ, ನಾನೂ ಬಿಜೆಪಿಯ ಮನೆ ಮಗನೇ. ನಮ್ಮ ಸೋದರ ಕಾರ್ಯಕರ್ತನ ಸಾವಿಗೆ ನ್ಯಾಯ ದೊರಕಿಸುವಿರೋ.

ಯಕ್ಷಗಾನ ಸಾಕು, ಈಗ್ಲಾದ್ರೂ ವೀರಭದ್ರರಾಗಿ: ಹಳೇ ವಿಡಿಯೋ ಹಾಕಿ ನಳೀನ್ ಕುಮಾರ್ ವಿರುದ್ಧ ಮಹಾಂತೇಶ್ ವಕ್ಕುಂದ ಆಕ್ರೋಶ
ನಳೀನ್ ಕುಮಾರ್ ಕಟೀಲ್, ಪ್ರವೀಣ್
Updated By: ಆಯೇಷಾ ಬಾನು

Updated on: Jul 27, 2022 | 8:04 PM

ಬೆಳಗಾವಿ: ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ಪ್ರವೀಣ್(Praveen Nettar) ಹತ್ಯೆಗೆ ಬಿಜೆಪಿ ಮುಖಂಡ ಮಹಾಂತೇಶ್ ವಕ್ಕುಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್(Nalin Kumar Kateel) ವಿರುದ್ಧ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. ನಳೀನ್ ಕುಮಾರ್ ಕಟೀಲ್ ಅವರ ಭಾಷಣದ ತುಣುಕು ಹಾಕಿ ಮಹಾಂತೇಶ್ ವಕ್ಕುಂದ ಆಕ್ರೋಶ ಹೊರ ಹಾಕಿದ್ದಾರೆ.

ರಾಜ್ಯಾಧ್ಯಕ್ಷರೇ ತಮ್ಮದೇ ಭಾಷಣದ ತುಣುಕಿದು. ಘಟನೆ ನಡೆದದ್ದೂ ತಮ್ಮ ಜಿಲ್ಲೆಯಲ್ಲೇ, ನಾನೂ ಬಿಜೆಪಿಯ ಮನೆ ಮಗನೇ. ನಮ್ಮ ಸೋದರ ಕಾರ್ಯಕರ್ತನ ಸಾವಿಗೆ ನ್ಯಾಯ ದೊರಕಿಸುವಿರೋ. ಇಲ್ಲ ಟ್ವೀಟ್ ಮಾಡಿದ್ದಕ್ಕೆ ನನ್ನೇ ಪಕ್ಷದಿಂದ ಕಿತ್ತೆಸಿಯುವಿರೋ? ಯಕ್ಷಗಾನ ಸಾಕು, ಈಗ್ಲಾದ್ರೂ ವೀರಭದ್ರನಾಗಿ ಎಂದು ಬಿಜೆಪಿ ಮುಖಂಡ ಟ್ವೀಟ್ ಮಾಡಿ ಕಟೀಲು ಅವರ ವಿರುದ್ಧ ನೇರವಾಗಿ ಆಕ್ರೋಶ ಹೊರ ಹಾಕಿದ್ದಾರೆ.

ನಾಲಿಗೆ ಹರಿಬಿಟ್ಟ ಸಂಜೀವ ಮರಡಿ

ಶ್ರೀರಾಮಸೇನೆ ಬಳ್ಳಾರಿ ವಿಭಾಗೀಯ ಅಧ್ಯಕ್ಷ ಸಂಜೀವ ಮರಡಿ ಕೂಡ ಪ್ರವೀಣ್ ಹತ್ಯೆಗೆ ಆಕ್ರೋಶ ಹೊರ ಹಾಕಿದ್ದಾರೆ. ಹಿಂದುತ್ವದ ಆಧಾರದ ಮೇಲೆ ಬಂದಂತಹ ಬಿಜೆಪಿ, ಇವರ ಅಧಿಕಾರದ ದುರಾಸೆಗೆ ಆಪರೇಷನ್ ಕಮಲ ಅಂತ ಯಡಿಯೂರಪ್ಪ ಮಾಡ್ತಾರೆ. ಯಾತಕ್ಕೆ ಅಧಿಕಾರದ ದುರಾಸೆ. ಇವತ್ತಿನವರೆಗೂ ಯಾವ ನನ್ ಮಗ ಎಮ್ಎಲ್ಎ ಕೊಲೆ ಆಗಿದಾನಾ? ಎಂದು ಸಂಜೀವ ಮರಡಿ ನಾಲಿಗೆ ಹರಿಬಿಟ್ಟಿದ್ದಾರೆ. ಭಟ್ಕಳದಲ್ಲಿ ಚಿತ್ತರಂಜನ್ ದಾಸ್ ಕೊಲೆ ಬಿಟ್ರೆ. ಇವತ್ತಿನವರೆಗೂ ಯಾವ ಎಮ್ಎಲ್ಎ ಕೊಲೆ ಆಗಿದೆಯಾ ಹೇಳಿ ನೋಡೋಣ. ಬರಿ ಸಾಮಾನ್ಯ ಕಾರ್ತಕರ್ತರ ಕೊಲೆಗಳಾಗುತ್ತಿವೆ. ಇಂತಹ ಹರಾಮಿಗಳು ಸಂಘ ಪರಿವಾರ ಬಿಟ್ಟು ಅಧಿಕಾರದ ದುರಾಸೆಗೆ ಹಿಂದುತ್ವದ ಸಂಘಟನೆ ಬಿಟ್ಟು ಅಧಿಕಾರದ ದುರಾಸೆಗೆ ಬೇರೆ ಬೇರೆ ಪಕ್ಷದಲ್ಲಿ ಟೋಪಿ ಹಾಕಿಕೊಳ್ಳುವವರನ್ನು ನಮ್ಮ ಪಕ್ಷದಲ್ಲಿ ಕರೆದುಕೊಂಡು ಟೋಪಿ ಹಾಕೊಂಡು ನಮಾಜ್ ಮಾಡುವಂತ ಬೇವರ್ಸಿಗಳನ್ನು ಕರೆದುಕೊಂಡು ಬಂದು ಅಧಿಕಾರ ತಗೊಳ್ತಾರೆ. ಹಿಂದು ಕಾರ್ಯಕರ್ತರ ಕೊಲೆಯಾದರೆ ಅವರಿಗೆ ಗಲ್ಲು ಶಿಕ್ಷೆ ಹಾಕೋದಕ್ಕೆ ಆಗೋದಿಲ್ವಾ. ಇಂತಹ ಬೇವರ್ಸಿಗಳನ್ನು ಎಷ್ಟು ಜೊತೆ ತಗೊಂಡ ಹೊಡಿಬೇಕು. ಬೊಮ್ಮಾಯಿ ಏನಂತ ತಿಳಕೊಂಡಿರಿ. ಬೊಮ್ಮಾಯಿ ಅವರಿಗೆ ಸಿಎಂ ಖುರ್ಚಿ ಮೇಲೆ‌ ಕೂರುವ ಯೋಗ್ಯತೆ ಇಲ್ಲ. ಅವರ ಕೈಯಿಂದ ಏನು ನಡೆಯೋದಿಲ್ಲ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.

ಸರ್ಕಾರದ ಮೇಲೆ ವಿಶ್ವಾಸವನ್ನೇ ಕಳೆದುಕೊಳ್ಳುವ ಸ್ಥಿತಿ ತಲುಪುತ್ತಿದೆ

ಉಡುಪಿ: ಪ್ರವೀಣ್ ಹತ್ಯೆ ಖಂಡಿಸಿದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ. ಇಂಥಹ ಹೇಯ ಕೃತ್ಯ ನಾಗರಿಕ ಸಮಾಜವೇ ತಲೆ ತಗ್ಗಿಸುವಂತದ್ದಾಗಿದೆ. ಮೃತ ಪ್ರವೀಣನ ಆತ್ಮಕ್ಕೆ ಸದ್ಗತಿ ದೊರೆಯಲಿ. ಆತನ‌ ಕುಟುಂಬಸ್ಥರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ಕರುಣಿಸಲಿ. ನಾಡಿನಲ್ಲಿ ಇಂತಹ ದುಷ್ಕೃತ್ಯಗಳು ಮೇಲಿಂದ ಮೇಲೆ ನಡೀತಾ ಇದೆ. ಇದರಿಂದ ಜನಾಕ್ರೋಶಗೊಂಡು ಸರ್ಕಾರದ ಮೇಲೆ ವಿಶ್ವಾಸವನ್ನೇ ಕಳೆದುಕೊಳ್ಳುವ ಸ್ಥಿತಿ ತಲುಪುತ್ತಿದೆ. ಜನಾಕ್ರೋಶಕ್ಕೂ ಮೊದಲು ಸರ್ಕಾರ ಇಂಥಹ ಪಾತಕಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಿಂದೂ ಕಾರ್ಯಕರ್ತರು ಧೈರ್ಯ ಕಳೆದುಕೊಳ್ಳಬೇಡಿ. ಪ್ರವೀಣ್ ಹತ್ಯೆಯಿಂದ ನಾಡಿನ ಸಹಸ್ರಾರು ಹಿಂದೂ ಯುವ ಕಾರ್ಯಕರ್ತರು ಆಕ್ರೋಶ ಉಲ್ಬಣಿಸಲು ಕಾರಣವಾಗುತ್ತಿದೆ. ಇತ್ತೀಚೆಗಷ್ಟೆ ಹರ್ಷನ ಹತ್ಯೆಯ ದುಃಖ ನೋವಿನಿಂದ ಹೊರಬರುವ ಹೊತ್ತಿಗೇ ಇನ್ನೊಬ್ಬ ತರುಣನ ಕೊಲೆಯಾಗಿದೆ. ಈ ಕೊಲೆಯ ಮೂಲಕ ಸಹನೆಯ ಕಟ್ಟೆ ಒಡೆಯುವಷ್ಟು ದುಃಖ ಆಕ್ರೋಶ ತರಿಸೋದು ಸಹಜ. ಯಾರೊಬ್ಬರೂ ಧೈರ್ಯ ಕಳಕೊಳ್ಳಬಾರದು. ಸಂಯಮವನ್ನು ಒಗ್ಗಟ್ಟನ್ನು ಕಾಯ್ದುಕೊಂಡು ಕೆಲಸ ಮಾಡಬೇಕಾಗಿದೆ. ನಾವುಗಳೂ ತಮ್ಮೆಲ್ಲರ ನೋವಿನಲ್ಲಿ ಸಹಾನುವರ್ತಿಗಳು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

Published On - 6:52 pm, Wed, 27 July 22