AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಬೇಕು; ಆಪ್ತರ ಆಗ್ರಹ

ರಮೇಶ್ ಜಾರಕಿಹೊಳಿ ವರ್ಕರ್ ಇದ್ದಾರೆ. ಜವಾಬ್ದಾರಿ ಸ್ಥಾನದಲ್ಲಿ ಮೊದಲು ಇದ್ದಂತವರು. ಪಕ್ಷವನ್ನು ಕೂಡ ಕಟ್ಟುತ್ತಿದ್ದಾರೆ. ಹಲವಾರು ರಾಜಕೀಯ ವಿದ್ಯಮಾನಗಳಲ್ಲಿ ಇದೆಲ್ಲ ನಡೆದಂತ ಘಟನೆ.

ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಬೇಕು; ಆಪ್ತರ ಆಗ್ರಹ
ರಮೇಶ್ ಜಾರಕಿಹೊಳಿ
TV9 Web
| Edited By: |

Updated on:Oct 20, 2021 | 9:19 AM

Share

ಬೆಳಗಾವಿ: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿಗೆ (Ramesh Jarkiholi) ಸಚಿವ ಸ್ಥಾನ ನೀಡಬೇಕೆಂದು ಆಪ್ತರು ಆಗ್ರಹಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕೊಟ್ಟರೆ ಕ್ಷೇತ್ರದಲ್ಲಿ ಕೆಲಸಗಳಾಗುತ್ತದೆ. ಹೀಗಾಗಿ ಅವರಿಗೆ ಸಚಿವ ಸ್ಥಾನವನ್ನು ನೀಡಿ ಅಂತ ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ (Mahesh Kumathalli) ವರಿಷ್ಠರಿಗೆ ಮನವಿ ಮಾಡಿದ್ದಾರೆ. ನನಗೆ ಸಚಿವ ಸ್ಥಾನ ನೀಡಿ ಎಂದು ನಾನು ಕೇಳುತ್ತಿಲ್ಲ. ನನಗೆ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವೆ ಅಂತ ಮಹೇಶ್ ಕುಮಟಳ್ಳಿ ಹೇಳಿಕೆ ನೀಡಿದ್ದಾರೆ.

ರಮೇಶ್ ಜಾರಕಿಹೊಳಿ ವರ್ಕರ್ ಇದ್ದಾರೆ. ಜವಾಬ್ದಾರಿ ಸ್ಥಾನದಲ್ಲಿ ಮೊದಲು ಇದ್ದಂತವರು. ಪಕ್ಷವನ್ನು ಕೂಡ ಕಟ್ಟುತ್ತಿದ್ದಾರೆ. ಹಲವಾರು ರಾಜಕೀಯ ವಿದ್ಯಮಾನಗಳಲ್ಲಿ ಇದೆಲ್ಲ ನಡೆದಂತ ಘಟನೆ. ಮೊದಲಿನಿಂದಲೂ ನಾನು ಡಿಫೆಂಡ್ ಮಾಡಿಕೊಂಡು ಬಂದಿದ್ದೇನೆ, ಇವತ್ತು ಮಾಡಿಕೊಳ್ಳುತ್ತೇನೆ. ರಮೇಶ್ ಜಾರಕಿಹೊಳಿಗೆ ಉನ್ನತ ಸ್ಥಾನ ಕೊಟ್ಟರೆ ನಮ್ಮ ಭಾಗದಲ್ಲಿ ಹೆಚ್ಚಿನ ಕೆಲಸ ಮಾಡುತ್ತಾರೆ. ನಮ್ಮದು ಸ್ವಾರ್ಥ ಇದೆ. ಅವರು ಮಂತ್ರಿ ಆದರೆ ನಮ್ಮ ಕ್ಷೇತ್ರದ ಕೆಲಸ ಆಗುತ್ತವೆ. ಹೀಗಾಗಿ ವರಿಷ್ಠರಲ್ಲಿ ವಿನಂತಿ ಸಹ ಮಾಡಿದ್ದೀವಿ ಅಂತ ಶಾಸಕ ಮಹೇಶ್ ಕುಮಟಳ್ಳಿ ತಿಳಿಸಿದರು.

ಪಕ್ಷದ ಮುಖಂಡರ ನಿರ್ಣಯಕ್ಕೆ ಬದ್ಧ ಎಂದು ರಮೇಶ ಜಾರಕಿಹೊಳಿ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಮಾತನಾಡಿದ ಮಹೇಶ್ ಕುಮಟಳ್ಳಿ, ಪಕ್ಷದ ರಾಜ್ಯ, ರಾಷ್ಟ್ರ ನಾಯಕರು ಪಕ್ಷ ಗಟ್ಟಿ ಮಾಡಲು ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಮುಂದಿನ ವಿಷಯ ಅವರ ವಿವೇಚನೆಗೆ ಬಿಟ್ಟಿದ್ದು. ನಾನು ಮೊದಲಿನಿಂದಲೂ ಯಾವುದೇ ಪಕ್ಷದಲ್ಲಿದ್ದರೂ ಪಕ್ಷದ ಕೆಲಸ ಮಾಡುತ್ತಿದ್ದೀನಿ. ನಾನು ಮಾತ್ರ ಸಚಿವ ಸ್ಥಾನ ನೀಡಿ ಅಂತಾ ಕೇಳಿಲ್ಲ. ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವೆ ಅಂತ ಸ್ಪಷ್ಟಪಡಿಸಿದ್ದಾರೆ.

ಸಿಎಂ ಭೇಟಿಗೆ ಆಗಮಿಸಿದ ರಮೇಶ್ ಜಾರಕಿಹೊಳಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭೇಟಿಗೆ ಶಾಸಕ ರಮೇಶ್ ಜಾರಕಿಹೊಳಿ ಅಗಮಿಸಿದ್ದಾರೆ. ಬೆಂಗಳೂರಿನ ಆರ್.ಟಿ.ನಗರದ ಸಿಎಂ ನಿವಾಸಕ್ಕೆ ಆಗಮಿಸಿದ್ದಾರೆ. ಸಿಎಂ ಮನೆಗೆ ಬರುವುದಕ್ಕೂ ಮುನ್ನವೇ ರಮೇಶ್ ಆಗಮಿಸಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ರಮೇಶ್ ಜಾರಕಿಹೊಳಿ ಪದೇಪದೆ ಮುಖ್ಯಮಂತ್ರಿಯನ್ನು ಭೇಟಿಯಾಗುತ್ತಿದ್ದು, ಇಂದು ಕೂಡಾ ಆಗಮಿಸಿದ್ದಾರೆ.

ಇದನ್ನೂ ಓದಿ

ಗಗನಕ್ಕೇರಿದ ಮೀನಿನ ದರ; ಧಾರಕಾರ ಮಳೆಗೆ ಪೂರೈಕೆ ಸ್ಥಗಿತ, ಕಂಗಾಲಾದ ಮೀನುಗಾರರು

Late Night Exercise: ರಾತ್ರಿ ಹೊತ್ತು ವ್ಯಾಯಾಮ ಮಾಡ್ತೀರಾ? ಈ ಕೆಲವು ವಿಷಯಗಳು ನೆನಪಿನಲ್ಲಿರಲಿ

Published On - 9:11 am, Wed, 20 October 21