ಎಂಇಎಸ್​ನಿಂದ ಹುತಾತ್ಮ ದಿನ ಆಯೋಜನೆ; ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆಗೆ ಮತ್ತೊಮ್ಮೆ ಬೆಳಗಾವಿ ಪ್ರವೇಶ ನಿರ್ಬಂಧ

| Updated By: ಆಯೇಷಾ ಬಾನು

Updated on: Jan 17, 2023 | 11:05 AM

ಎಂಇಎಸ್ ‌ಸಂಘಟನೆ ಇಂದು ಬೆಳಗಾವಿಯಲ್ಲಿ ಹುತಾತ್ಮ ದಿನ ಆಯೋಜಿಸಿದೆ. ಅಲ್ಲದೆ ಹುತಾತ್ಮ ದಿನದ ಕಾರ್ಯಕ್ರಮಕ್ಕೆ ಸಂಸದ ಧೈರ್ಯಶೀಲ ಮಾನೆಗೆ ಆಹ್ವಾನ ನೀಡಿದೆ. ಹೀಗಾಗಿ ಬೆಳಗಾವಿ ಡಿಸಿ ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದಾರೆ.

ಎಂಇಎಸ್​ನಿಂದ ಹುತಾತ್ಮ ದಿನ ಆಯೋಜನೆ; ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆಗೆ ಮತ್ತೊಮ್ಮೆ ಬೆಳಗಾವಿ ಪ್ರವೇಶ ನಿರ್ಬಂಧ
ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಅಧ್ಯಕ್ಷ, ಸಂಸದ ಧೈರ್ಯಶೀಲ ಮಾನೆ
Follow us on

ಬೆಳಗಾವಿ: ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆಗೆ ಬೆಳಗಾವಿ ಪ್ರವೇಶ ಮತ್ತೊಮ್ಮೆ ನಿರ್ಬಂಧಿಸಲಾಗಿದೆ. ಬೆಳಗಾವಿಯಲ್ಲಿ ಇಂದು ಎಂಇಎಸ್​ನಿಂದ ಹುತಾತ್ಮ ದಿನ ಆಯೋಜನೆ ಮಾಡಲಾಗಿದ್ದು ಕಾರ್ಯಕ್ರಮಕ್ಕೆ ಬರುವಂತೆ MES ಪುಂಡರು ಸಂಸದ ಧೈರ್ಯಶೀಲ ಮಾನೆಗೆ ಆಹ್ವಾನಿಸಿದ್ದಾರೆ. ಇದಕ್ಕೆ ಒಪ್ಪಿದ್ದ ಸಂಸದ ಮಾನೆ ಬೆಳಗಾವಿ ಪ್ರವಾಸದ ವೇಳಾಪಟ್ಟಿ ಬಿಡುಗಡೆ ಮಾಡಿದ್ದರು. ಹೀಗಾಗಿ ಅಹಿತಕರ ಘಟನೆ ನಡೆಯಬಾರದೆಂಬ ಉದ್ದೇಶದಿಂದ ಮಾನೆ ಪ್ರವೇಶ ನಿರ್ಬಂಧಿಸಿ ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.

ಕಲಂ 144(3) ಪ್ರದತ್ತ ಅಧಿಕಾರ ಬಳಸಿ ಜಿಲ್ಲಾಧಿಕಾರಿ ನಿರ್ಬಂಧಕ್ಕೆ ಆದೇಶ ಹೊರಡಿಸಿದ್ದಾರೆ. ಎಂಇಎಸ್ ‌ಸಂಘಟನೆ ಇಂದು ಬೆಳಗಾವಿಯಲ್ಲಿ ಹುತಾತ್ಮ ದಿನ ಆಯೋಜಿಸಿದೆ. ಅಲ್ಲದೆ ಹುತಾತ್ಮ ದಿನದ ಕಾರ್ಯಕ್ರಮಕ್ಕೆ ಸಂಸದ ಧೈರ್ಯಶೀಲ ಮಾನೆಗೆ ಆಹ್ವಾನ ನೀಡಿದೆ. ಆಹ್ವಾನ ಒಪ್ಪಿ ಸಂಸದ ಧೈರ್ಯಶೀಲ ಮಾನೆ ಬೆಳಗಾವಿ ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದರು. ಬೆಳಗಾವಿಗೆ ಬರುವ ಬಗ್ಗೆ ಪ್ರವಾಸ ವೇಳಾ ಪಟ್ಟಿ ಬಿಡುಗಡೆ ಮಾಡಿದ್ದರು. ಸಂಸದ ಮಾನೆ ಬೆಳಗಾವಿಯಲ್ಲಿರುವ ಮರಾಠಿ ಭಾಷಿಕರಿಗೆ ಪ್ರಚೋದನಾಕಾರಿ ಭಾಷಣ ಮಾಡುವ ಸಾಧ್ಯತೆ ಇತ್ತು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಸಾಧ್ಯತೆ ಹಿನ್ನೆಲೆ ಧೈರ್ಯಶೀಲ ಮಾನೆ ಬೆಳಗಾವಿ ಪ್ರವೇಶ ನಿಷೇಧಿಸಿ ಡಿಸಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ:ಬೆಳಗಾವಿಗೆ ಬರುತ್ತಿದ್ದೇನೆ, ಸೂಕ್ತ ಭದ್ರತೆ ಕೊಡಿ; ಬೆಳಗಾವಿ ಪೊಲೀಸ್ ಆಯುಕ್ತರಿಗೆ ಮಹಾ ಸಂಸದ ಧೈರ್ಯಶೀಲ ಮಾನೆ ಪತ್ರ

ಇನ್ನು ಮತ್ತೊಂದೆಡೆ ಈ ಹಿಂದೆ ಕೂಡ ಎಂಇಎಸ್​ ಮಹಾಮೇಳಾವ್ ಕಾರ್ಯಕ್ರಮ ಆಯೋಜನೆ ಮಾಡಿ ಮಹಾಮೇಳಾವ್‌ಗೆ ಮಹರಾಷ್ಟ್ರದ ಸಂಸದ ಧೈರ್ಯಶೀಲ್ ರನ್ನು ಆಹ್ವಾನಿಸಿತ್ತು. ಆಗ ಕೂಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ನಿರ್ಬಂಧ ಹೇರಿದ್ದರು. ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದ ಜೋರಾದ ಕಾರಣ ಬೃಹತ್‌ ಮಟ್ಟದಲ್ಲಿ ಮಹಾ ಮೇಳಾವ್ ಆಯೋಜನೆಗೆ ಎಂಇಎಸ್‌ ಸಿದ್ಧತೆ ಮಾಡಿಕೊಂಡಿತ್ತು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:57 am, Tue, 17 January 23