ರಾಜ್ಯೋತ್ಸವದಂದು ಕರಾಳ ದಿನ ಆಚರಿಸಲು ಎಂಇಎಸ್​ ಸಂಘಟನೆ ಸಿದ್ದತೆ, ಬೆಳಗಾವಿ-ಮಹಾರಾಷ್ಟ್ರ ಗಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಬೆಳಗಾವಿಯಲ್ಲಿ ಈ ಭಾರಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ್ದು, ಎಂಇಎಸ್​ ಸಂಘಟನೆ ದಿನ ಎಂದು ಆಚರಿಸಲು ಸಕಲ ಸಿದ್ದತೆ ಮಾಡಿಕೊಂಡಿದೆ.

ರಾಜ್ಯೋತ್ಸವದಂದು ಕರಾಳ ದಿನ ಆಚರಿಸಲು ಎಂಇಎಸ್​ ಸಂಘಟನೆ ಸಿದ್ದತೆ, ಬೆಳಗಾವಿ-ಮಹಾರಾಷ್ಟ್ರ ಗಡಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಬೆಳಗಾವಿಯಲ್ಲಿ ರಾಜ್ಯೋತ್ಸವದಂದು ಕರಾಳ ದಿನ ಆಚರಿಸಲು ಸಜ್ಜಾಗುತ್ತಿರುವ ಎಂಇಎಸ್​ ಮತ್ತು ಶಿವಸೇನೆ, ಗಡಿಯಲ್ಲಿ ಬೀಗಿ ಪೊಲೀಸ್​ ಬಂದೋಬಸ್ತ್​​
Edited By:

Updated on: Oct 31, 2022 | 3:53 PM

ಬೆಳಗಾವಿ: ಬೆಳಗಾವಿಯಲ್ಲಿ (Belagavi) ಈ ಭಾರಿ ಕನ್ನಡ ರಾಜ್ಯೋತ್ಸವವನ್ನು (Kannada Rajyotsava) ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಆದರೆ ಎಂಇಎಸ್ (MES)​ ಸಂಘಟನೆ ಬೆಳಗಾವಿಯಲ್ಲಿ ಕರಾಳ ದಿನಾಚರಣೆಗೆ ಪ್ಲ್ಯಾನ್ ಮಾಡಿಕೊಂಡಿದೆ. ಈ ಸಂಬಂಧ ಶಿವಸೇನೆ ಪಕ್ಷದ ಕಾರ್ಯಕರ್ತರು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಬೆಳಗಾವಿ-ಮಹಾರಾಷ್ಟ್ರ ಗಡಿಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್​​ ಮಾಡಿದ್ದಾರೆ. ಗಡಿ ಅಂಚಿನಲ್ಲಿರುವ ನಿಪ್ಪಾಣಿ ತಾಲೂಕಿನ ಕೊಗನೋಳ್ಳಿ ಚೆಕ್ ಪೋಸ್ಟ್, ಬೆಳಗಾವಿ ತಾಲೂಕಿನ ಬಾಚಿ ಚೆಕ್ ಪೋಸ್ಟ್ ಎರಡು ಕಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಭದ್ರತೆ ದೃಷ್ಟಿಯಿಂದ 3 ಡಿಎಸ್​ಪಿ, 5 ಸಿಪಿಐ, 1 ಡಿಎಆರ್​ ತುಕಡಿ, 1 ಕೆಎಸ್​ಆರ್​ಪಿ ತುಕಡಿ, 50 ಹೋಂ ಗಾರ್ಡ್​​ಗಳ ನಿಯೋಜನೆ ಮಾಡಲಾಗಿದ್ದು, ಶಿವಸೇನೆ ಕಾರ್ಯಕರ್ತರು ಗಡಿ ಪ್ರವೇಶಿಸದಂತೆ ಖಾಕಿ ಕಣ್ಗಾವಲು ಇದೆ. ಪೊಲೀಸರು ಪ್ರತಿಯೊಂದು ವಾಹನ ತಪಾಸಣೆ ಮಾಡಿ ಬೆಳಗಾವಿ ಪ್ರವೇಶಕ್ಕೆ ಅನುಮತಿ ನೀಡಿದ್ದಾರೆ. ಇನ್ನು ಬೆಂಗಳೂರು-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲೂ ವಾಹನ ತಪಾಸಣೆ ಮಾಡಲಾಗುತ್ತಿದೆ.

ಕರಾಳ ದಿನಾಚರಿಸಲು ಮಹಾರಾಷ್ಟ್ರದ ಶಿವಸೇನೆ ಪುಂಡರು ಕೂಡ ಬೆಂಬಲ ಸೂಚಿಸಿದ್ದು, ಇಂದು (ಅ. 31) ಬೆಳಗಾವಿಗೆ ಬರೋದಾಗಿ ಶಿವಸೇನಾ ಉದ್ಧವ್ ಠಾಕ್ರೆ ಬಣ ಹೇಳಿದೆ. ಉದ್ಧವ್ ಠಾಕ್ರೆ ಬಣದ ಕೊಲ್ಲಾಪುರದ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ನೇತೃತ್ವದಲ್ಲಿ ಠಾಕ್ರೆ ಬಣ ಬೆಳಗಾವಿಗೆ ಆಗಮಿಸಲು ನಿರ್ಧರಿಸಿದೆ. ಹೀಗಾಗಿ ಬೆಳಗಾವಿ ಎಂಇಎಸ್ ಮುಖಂಡರು ಇಂದು ಕೊಲ್ಲಾಪುರಕ್ಕೆ ತೆರಳಲಿದ್ದಾರೆ.

ನಾಳೆ (ನ.1) ಬೆಳಗ್ಗೆ 11 ಗಂಟೆಗೆ ಕೊಲ್ಲಾಪುರದ ಛತ್ರಪತಿ ಸಂಭಾಜಿ ಮಹಾರಾಜರ ಸಮಾಧಿಸ್ಥಳ ಬಳಿ ಎಂಇಎಸ್ ಕಾರ್ಯಕರ್ತರು ಮತ್ತು ಶಿವಸೇನಾ ಉದ್ಧವ್ ಠಾಕ್ರೆ ಬಣ ಸೇರಲು ನಿರ್ಧರಿಸಿದೆ. ಬಳಿಕ ಕೊಲ್ಲಾಪುರ – ಕಾಗಲ್ – ಕುಗನೋಳಿ ಚೆಕ್‌ಪೋಸ್ಟ್ – ನಿಪ್ಪಾಣಿ – ಸಂಕೇಶ್ವರ ಮೂಲಕ ಬೆಳಗಾವಿಗೆ ಆಗಮಿಸಲು ತೀರ್ಮಾನ ಕೈಗೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:34 pm, Mon, 31 October 22