AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ರಸ್ತೆ ಬದಿ ಕಸ ಎಸೆದ ಯುವತಿಗೆ ಸ್ಥಳೀಯರಿಂದ ಸಖತ್​ ಕ್ಲಾಸ್

ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಜಿಬಿಎ ಕಠಿಣ ಕ್ರಮಗಳ ಹೊರತಾಗಿಯೂ ಘಟನೆಗಳು ಮರುಕಳಿಸುತ್ತಲೇ ಇವೆ. ಬೆಂಗಳೂರಿನ ಜಯನಗರದಲ್ಲಿ ರಸ್ತೆ ಬದಿ ಕಸ ಎಸೆದ ಯುವತಿಗೆ ಸ್ಥಳೀಯರು ತರಾಟೆ ತೆಗೆದುಕೊಂಡ ಘಟನೆ ವೈರಲ್ ಆಗಿದ್ದು, ಯುವತಿ ನಡೆದುಕೊಂಡ ರೀತಿ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ರೆಸೆಡೆನ್ಸಿ ಏರಿಯಾದಲ್ಲಿ ತ್ಯಾಜ್ಯ ಸುರಿಬೇಡ ಎಂದು ಸ್ಥಳೀಯರು ಹೇಳಿದ್ರೂ ಆಕೆ ಮಾತ್ರ ತಲೆಕೆಡಿಸಿಕೊಂಡಿಲ್ಲ.

Bengaluru: ರಸ್ತೆ ಬದಿ ಕಸ ಎಸೆದ ಯುವತಿಗೆ ಸ್ಥಳೀಯರಿಂದ ಸಖತ್​ ಕ್ಲಾಸ್
ರಸ್ತೆ ಬದಿ ಕಸ ಸುರಿದ ಯುವತಿ
ಪ್ರಸನ್ನ ಹೆಗಡೆ
|

Updated on:Jan 05, 2026 | 4:57 PM

Share

ಬೆಂಗಳೂರು, ಜನವರಿ 05: ನಗರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಗ್ರೇಟರ್​​ ಬೆಂಗಳೂರು ಪ್ರಾಧಿಕಾರ ಹತ್ತು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಹುಡುಕಿ ಹುಡುಕಿ ದಂಡ ವಿಧಿಸಲಾಗುತ್ತಿದೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ತ್ಯಾಜ್ಯ ಎಸೆಯುವವರ ಮನೆ ಮುಂದೆಯೇ ಲೋಡ್​​ಗಟ್ಟಲೆ ಕಸ ಸುರಿದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​​ ಮಾಡಿ ಅವರಿಗೆ ನಾಚಿಕೆ ಉಂಟು ಮಾಡುವ ಕೆಲಸವನ್ನೂ ಮಾಡಿದೆ. ಹೀಗಿದ್ದರೂ ಬೆಂಗಳೂರು ಮಂದಿ ಮಾತ್ರ ಬುದ್ಧಿ ಕಲಿಯುತ್ತಿಲ್ಲ. ನೀವೇನಾದ್ರೂ ಮಾಡ್ಕೊಳ್ಳಿ, ನಾವು ಮಾತ್ರ ಹೀಗೆ ಇರೋದು ಎಂಬ ರೀತಿ ಕೆಲವರು ವರ್ತಿಸುತ್ತಿದ್ದಾರೆ. ಈ ನಡುವೆ ಜನವಸತಿ ಪ್ರದೇಶದಲ್ಲಿ ಕಸ ಎಸೆದು ಹೋಗುತ್ತಿದ್ದ ಯುವತಿಗೆ ಸ್ಥಳೀಯರೇ ಕ್ಲಾಸ್​​ ತೆಗೆದುಕೊಂಡ ವಿಡಿಯೋವೊಂದು ವೈರಲ್​​ ಆಗಿದೆ.

ಬುದ್ಧಿ ಹೇಳಿದವರ ಜೊತೆಗೇ ಯುವತಿ ವಾಗ್ವಾದ

ಜಯನಗರದ 8ನೇ ಅಡ್ಡ ರಸ್ತೆಯ ಮಾರುತಿ ಲೇಔಟ್​​ನಲ್ಲಿ ಓರ್ವ ಯುವತಿ ತನ್ನ ಸ್ಕೂಟರ್​​ನಲ್ಲಿ ರಾಶಿ ರಾಶಿ ಕಸ ತೆಗೆದುಕೊಂಡು ಬಂದು ಪಕ್ಕದ ಏರಿಯಾದ ಜನವಸತಿ ಪ್ರದೇಶದ ಬಳಿ ಸುರಿದಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯರು ಇಲ್ಲಿ ಕಸ ಹಾಕಬೇಡಿ ಎಂದು ಮನವರಿಕೆ ಮಾಡಿದ್ದಾರೆ. ರೆಸಿಡೆನ್ಸಿಯಲ್ ಏರಿಯಾದಲ್ಲಿ ಈ ರೀತಿ ಕಸ ಹಾಕಿ ಹೋದ್ರೆ ಇಲ್ಲಿನ ನಿವಾಸಿಗಳಿಗೆ ಬಹಳ ಸಮಸ್ಯೆ ಆಗುತ್ತೆ ಎಂದು ಹೇಳಿದರೂ ಯುವತಿ ಮಾತ್ರ ಯಾವುದನ್ನೂ ಲೆಕ್ಕಿಸಿಲ್ಲ. ಬದಲಾಗಿ ತನಗೆ ಬುದ್ಧಿ ಹೇಳಿದವರ ಜೊತೆಗೇ ವಾಗ್ವಾದಕ್ಕೆ ಇಳಿದಿದ್ದಾಳೆ.

ಇದನ್ನೂ ಓದಿ:  ಕಸ ಎಸೆದಿದ್ದಲ್ಲದೆ ನಗರ ಸಭೆ ಸಿಬ್ಬಂದಿಗೇ ಆವಾಜ್​; ಯುವಕನ ದ್ವಿಚಕ್ರ ವಾಹನ ​ವಶಕ್ಕೆ

ಸ್ಥಳೀಯರ ಮಾತಿಗೆ ಕೋಪಗೊಂಡ ಯುವತಿ ನಾನು ಇಲ್ಲೇ ಕಸವನ್ನು ಹಾಕೋದು, ಯಾರು ಏನು ಬೇಕಾದರೂ ಮಾಡಿಕೊಳ್ಲಿ ಎಂದು ಆವಾಜ್​​ ಹಾಕಿದ್ದಾಳೆ. ಈ ವೇಳೆ ನೀವು ಓದಿದ್ದೀರಲ್ವಾ? ನಿಮಗೆ ಇಷ್ಟೂ ಬುದ್ಧಿ ಇಲ್ವಾ ಎಂದು ಸ್ಥಳಿಯರು ಆಕೆಯನ್ನು ಪ್ರಶ್ನಿಸಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡ್ತೀವಿ ಅಂತಲೂ ಹೇಳಿದ್ದಾರೆ. ಹೀಗಿದ್ದರೂ ತಲೆ ಕೆಡಿಸಿಕೊಳ್ಳದ ಆಕೆ ಕಸವನ್ನ ರಸ್ತೆ ಮಧ್ಯದಲ್ಲೇ ಚೆಲ್ಲಿ ತೆರಳಿದ್ದಾಳೆ. ಬಳಿಕ ಸ್ಥಳೀಯ ನಿವಾಸಿಗಳು ಮೊದಲೇ ಹೇಳಿದಂತೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​​ ಮಾಡಿದ್ದು, ಯುವತಿಯ ಕೆಲಸಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.​​

Published On - 4:57 pm, Mon, 5 January 26

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ