ಕಸ ಎಸೆದಿದ್ದಲ್ಲದೆ ನಗರ ಸಭೆ ಸಿಬ್ಬಂದಿಗೇ ಆವಾಜ್: ಯುವಕನ ದ್ವಿಚಕ್ರ ವಾಹನ ವಶಕ್ಕೆ
ರಸ್ತೆಯಲ್ಲಿ ಕಸೆ ಎಸೆದಿದ್ದ ಕಾರಣ ದಂಡ ಕಟ್ಟು ಎಂದು ನಗರಸಭೆ ಸಿಬ್ಬಂದಿ ಹೇಳಿದರೆ ದಂಡ ಕಟ್ಟಲ್ಲ ಏನ್ ಮಾಡ್ತಿರೋ ಮಾಡ್ಕೊಳ್ಳಿ ಅಂತ ಆವಾಜ್ ಹಾಕಿದ ಯುವಕನ ಬೈಕ್ನ ವಶಪಡಿಸಿಕೊಳ್ಳಲಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ರಸ್ತೆಯಲ್ಲಿ ಕಸ ಸುರಿಯುವವರ ವಿರುದ್ಧ ನಗರಸಭೆ ದಂಡ ವಿಧಿಸುತ್ತಿದ್ದು, ನಗರದ ಕಂದವಾರ ರಸ್ತೆಯಲ್ಲಿ ಈ ಪ್ರಸಂಗ ನಡೆದಿದೆ.
ಚಿಕ್ಕಬಳ್ಳಾಪುರ, ಅಕ್ಟೋಬರ್ 31: ಎಲ್ಲೆಂದರಲ್ಲಿ ಕಸ ಎಸೆಯುವವರ ಮನೆ ಬಾಗಿಲಿಗೇ ಕಸದ ರಾಶಿ ಸುರಿಯಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದ್ದರೆ, ಇತ್ತ ಚಿಕ್ಕಬಳ್ಳಾಪುರದಲ್ಲಿ ರಸ್ತೆಗೆ ತಂದು ಕಸ (Garbage )ಸುರಿದ ಯುವಕನ ಬೈಕ್ ವಶಪಡಿಸಿಕೊಳ್ಳಲಾಗಿದೆ. ರಸ್ತೆಯಲ್ಲಿ ಕಸ ಸುರಿಯುವವರ ವಿರುದ್ಧ ನಗರಸಭೆ ದಂಡ ವಿಧಿಸುತ್ತಿದ್ದು, ದಂಡ ಕಟ್ಟದ ಯುವಕನ ಬೈಕ್ನ ನಗರಸಭೆ ಸಿಬ್ಬಂದಿ ವಶಕ್ಕೆ ಪಡೆದಿರುವ ಘಟನೆ ನಗರದ ಕಂದವಾರ ರಸ್ತೆಯಲ್ಲಿ ನಡೆದಿದೆ. ಬೈಕ್ನಲ್ಲಿ ಕಸದ ಕವರ್ ತಂದು ರಸ್ತೆಗೆ ಯುವಕ ಸುರಿಯುತ್ತಿದ್ದ ವೇಳೆ ಆ ಬಗ್ಗೆ ಚಿಕ್ಕಬಳ್ಳಾಪುರ ನಗರಸಭೆ ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ. ಕಸ ಹಾಕಿದ್ದಕ್ಕೆ ದಂಡ ಕಟ್ಟುವಂತೆ ಹೇಳಿದ್ದಾರೆ. ಈ ವೇಳೆ ದಂಡ ಕಟ್ಟಲ್ಲ ಏನ್ ಮಾಡ್ತಿರೋ ಮಾಡ್ಕೊಳ್ಳಿ ಅಂತ ಯುವಕನ ಆವಾಜ್ ಹಾಕಿದ್ದಾನೆ. ಹೀಗಾಗಿ ಆತನ ಬೈಕ್ ಸೀಜ್ ಮಾಡಿ ಪಾಠ ಕಲಿಸಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

