ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ಉಡುಪಿ ಶ್ರೀ ಕೃಷ್ಣ ಮಠಕ್ಕೆ 2 ಕೋಟಿ ರೂ ವೆಚ್ಚದ ಚಿನ್ನದ ಭಗವದ್ಗೀತೆ ಅರ್ಪಣೆಗೆ ಭಕ್ತರೊಬ್ಬರು ಮುಂದಾಗಿದ್ದಾರೆ. ಜನವರಿ 8ರಂದು ವಿಶ್ವಗೀತಾ ಪರ್ಯಾಯ ಸಮಾರೋಪದ ಅಂಗವಾಗಿ ದೆಹಲಿಯ ಭಕ್ತರೊಬ್ಬರು 18 ಅಧ್ಯಾಯಗಳ 700 ಶ್ಲೋಕಗಳನ್ನು ಚಿನ್ನದ ಹಾಳೆಗಳಲ್ಲಿ ಮುದ್ರಿಸಿ ಈ ಭಗವದ್ಗೀತೆಯನ್ನು ಸಮರ್ಪಿಸಲಿದ್ದಾರೆ.
ಉಡುಪಿ, ಜನವರಿ 05: ಉಡುಪಿ ಶ್ರೀ ಕೃಷ್ಣನಿಗೆ ದೆಹಲಿಯ ಭಕ್ತರೊಬ್ಬರು ಚಿನ್ನದ ಭಗವದ್ಗೀತೆ ಅರ್ಪಣೆಗೆ ಮುಂದಾಗಿದ್ದಾರೆ. ಜನವರಿ 8ರಂದು ನಡೆಯಲಿರುವ ವಿಶ್ವಗೀತಾ ಪರ್ಯಾಯ ಸಮಾರೋಪ ವಿಶೇಷ ಕಾರ್ಯಕ್ರಮದಂದು ಕೃಷ್ಣ ಸನ್ನಿಧಿಯಲ್ಲಿ ಹೊನ್ನಿನ ಭಗವದ್ಗೀತೆ ಲೋಕಾರ್ಪಣೆಗೊಳ್ಳಲಿದೆ. ಸುಮಾರು 2 ಕೋಟಿ ರೂ ವೆಚ್ಚದಲ್ಲಿ ಚಿನ್ನದ ಹಾಳೆಯಲ್ಲಿ ಭಗವದ್ಗೀತೆಯ 18 ಅಧ್ಯಾಯಗಳ 700 ಶ್ಲೋಕಗಳನ್ನು ಮುದ್ರಿಸಲಾಗಿದೆ. ಚಿನ್ನದ ರಥದಲ್ಲಿ ಭಗವದ್ಗೀತೆಯ ಮೆರವಣಿಗೆ ಮೂಲಕ ಅರ್ಪಿಸಲಿದ್ದಾರೆ. ಅಯೋಧ್ಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟೆಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸೇರಿ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jan 05, 2026 04:57 PM
