AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಎಂಇಎಸ್ ಸೋಲನ್ನು ಮರಾಠಿ ಭಾಷಿಕರ ಸೋಲು ಎಂದ ಶಿವಸೇನೆ

ಬೆಳಗಾವಿ ಪಾಲಿಕೆಯಲ್ಲಿ ಎಂಇಎಸ್ ಸೋಲನ್ನು, ಮರಾಠಿ ಭಾಷಿಕರ ಸೋಲು ಎಂದು ಶಿವಸೇನೆ ಸಾಮ್ನಾದಲ್ಲಿ ಬರೆದಿದೆ. ಇದು ವಿವಾದಕ್ಕೆ ನಾಂದಿ ಹಾಡಿದೆ.

ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಎಂಇಎಸ್ ಸೋಲನ್ನು ಮರಾಠಿ ಭಾಷಿಕರ ಸೋಲು ಎಂದ ಶಿವಸೇನೆ
ಸಾಮ್ನಾ ಪತ್ರಿಕೆ
TV9 Web
| Updated By: shivaprasad.hs|

Updated on: Sep 09, 2021 | 10:16 AM

Share

ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಎಂಇಎಸ್(Maharashtra Ekikaran Samiti -MES) ಹೀನಾಯ ಸೋಲು ಕಂಡ ಬೆನ್ನಲ್ಲೇ, ಶಿವಸೇನೆ ಅದನ್ನು ಮರಾಠಿ ಭಾಷಿಕರ ಸೋಲೆಂದು ಬಿಂಬಿಸಲು ಯತ್ನಿಸಿದೆ. ಈ ಮೂಲಕ ಬೆಳಗಾವಿಯ ಮುಗ್ಧ ಮರಾಠಿಗರ ಹಾದಿ ತಪ್ಪಿಸುವ ಕಾರ್ಯಕ್ಕೆ ಶಿವಸೇನೆ ಪ್ರಯತ್ನಿಸಿದೆ. ತನ್ನ ಮುಖವಾಣಿ ‘ಸಾಮ್ನಾ’ದಲ್ಲಿ ಶಿವಸೇನೆ ಬೆಳಗಾವಿ ಪಾಲಿಕೆಯ ಸೋಲನ್ನು ಕುರಿತು ಅದು ಬರೆದಿದ್ದು, ‘ಬೆಳಗಾವಿ ಕದನ, ಮರಾಠಿ ಜನರಿಗೆ ಪಾಠ’ ಎಂದು ಶೀರ್ಷಿಕೆ ನೀಡಿದೆ. ಬೆಳಗಾವಿ ಪಾಲಿಕೆ ಸೋಲಿನಿಂದ ನಾವು ಪಾಠ ಕಲಿಯಬೇಕು ಎಂದು ಸಾಮ್ನಾ ಪತ್ರಿಕೆಯ ಸಂಪಾದಕೀಯ ಪುಟದಲ್ಲಿ ಬರೆಯಲಾಗಿದೆ.

ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಬಳಸಿ ಬೆಳಗಾವಿಯ ಮರಾಠಿಗರ ಹಾದಿ ತಪ್ಪಿಸಲು ಶಿವಸೇನೆ ಕುತಂತ್ರ ಮಾಡಿದೆ. ‘ಆಗ್ರಾದಲ್ಲಿ ಛತ್ರಪತಿ ಶಿವಾಜಿ ಮಹಾರಾಜರನ್ನು ಔರಂಗಜೇಬ್ ಬಂಧಿಸಿದ ಸುದ್ದಿ ಕೇಳಿ ಇಡೀ ಮಹಾರಾಷ್ಟ್ರ ಆತಂಕಕ್ಕೀಡಾಗಿತ್ತು. ಆದರೆ ಆ ವೇಳೆ ಛತ್ರಪತಿ ಶಿವಾಜಿ ಬಂಧನ ಸಂಭ್ರಮಿಸಿದ ಕೆಲವರು ಮಹಾರಾಷ್ಟ್ರದಲ್ಲೂ ಇದ್ದರು. ಅದೇ ಪ್ರವೃತ್ತಿಯ ಜ‌‌ನರು ಬೆಳಗಾವಿಯಲ್ಲಿ ಮರಾಠಿಗರ ಸೋಲನ್ನು ಸಂಭ್ರಮಿಸುತ್ತಿದ್ದಾರೆ. ಮರಾಠಿಗರು ಹಾಗೂ ಹುತಾತ್ಮರ ಶಾಪ ಅವರಿಗೆ ತಟ್ಟುತ್ತದೆ’ ಎಂದು ಸಾಮ್ನಾದಲ್ಲಿ ಬರೆಯಲಾಗಿದೆ. ಈ ಮೂಲಕ ಶಿವಾಜಿಯ ಹೆಸರನ್ನು ತಂದು ಮರಾಠಿ ಭಾಷಿಕರನ್ನು ಪ್ರಚೋದಿಸಲು ಶಿವಸೇನೆ ಯತ್ನಿಸಿದೆ.

ಮುಂದುವರೆದು ಬರೆದಿರುವ  ಅದು, ‘ಗಡಿ ಹೋರಾಟ ಮುಂದುವರಿಯುತ್ತದೆ. ಮರಾಠಿಗರು ಒಗ್ಗೂಡಿ ಮತ್ತೆ ಮುಂದೇ ಬರುತ್ತಾರೆ. ಬೆಳಗಾವಿಯ ಸೋಲಿನಿಂದ ನಾವು ಪಾಠ ಕಲಿಯಬೇಕು. ಶತ್ರುಗಳು ಹಾಗೂ ಮಿತ್ರರು ನಮ್ಮ ಮನೆಯಲ್ಲೇ ಇದ್ದಾರೆ’ ಎಂದು ಬರೆದಿದೆ. ಸಾಮ್ನಾದ ಈ ಬರಹಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

Samana

ಸಾಮ್ನಾದಲ್ಲಿ ಪ್ರಕಟವಾಗಿರುವ ಬರಹ

ಪಾಲಿಕೆ ಮರುಚುನಾವಣೆ ಮಾಡಿ ಎಂದು ಕ್ಯಾತೆ ತೆಗೆದಿದ್ದ ಎಂಇಎಸ್:

ಇತ್ತೀಚೆಗೆ ಜಿಲ್ಲಾಧಿಕಾರಿ ನಿವಾಸಕ್ಕೆ ತೆರಳಿದ್ದ ಎಂಇಎಸ್‌  ಸದಸ್ಯರು ಅಲ್ಲಿ ಹೈಡ್ರಾಮಾ ನಡೆಸಿದ್ದರು. ಪಾಲಿಕೆ ಚುನಾವಣಾ ಪ್ರಕ್ರಿಯೆ ಕಾನೂನು ಬಾಹಿರವಾಗಿದೆ. ವಿವಿ ಪ್ಯಾಟ್ ಬಳಸದೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ನಿವಾಸದ ಮುಂದೆ‌ MES ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಸಮಸ್ಯೆ ಬಗೆಹರಿಯುವವರೆಗೂ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಮಾಡಿಸದಂತೆಯೂ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪಾಲಿಕೆಯ ಮರುಚುನಾವಣೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದರು.

ಇದನ್ನೂ ಓದಿ:

ವಿದ್ಯುತ್​ ಚಾಲಿತ ವಾಹನ ಇನ್ನು ಮುಂದೆ ಅನಿವಾರ್ಯ, ಅವುಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತೇವೆ: ಇಂಧನ ಸಚಿವ ಸುನಿಲ್‌ಕುಮಾರ್

ಬೆಂಗಳೂರು: ಒಂದೇ ರಾತ್ರಿ 30ಕ್ಕೂ ಹೆಚ್ಚು ಬೈಕ್​ಗಳ ಬ್ಯಾಟರಿ ಕದ್ದ ಕಳ್ಳರು; ಸಿಸಿಟಿವಿ ಇದ್ದರೂ ಮನೆ ಮುಂದೆ ವಾಹನ ನಿಲ್ಲಿಸುವಾಗ ಎಚ್ಚರ

(MES loss in Belagavi corporation election is Maratha loss says Shiva Sene in Samna)